ನವದೆಹಲಿ: ಶಾಲಾ ವಿದ್ಯಾರ್ಥಿಗಳನ್ನು ಹೊತ್ತೊಯ್ಯೂತ್ತಿದ್ದ ಹಡಗು ಮುಳುಗಿರುವ ಘಟನೆ ಮಹಾರಾಷ್ಟ್ರದ ದಹಾನು ಕಡಲ ತೀರದಲ್ಲಿ ನಡೆದಿದೆ. ಸುಮಾರು 40 ವಿದ್ಯಾರ್ಥಿಗಳು ಬೋಟ್ ನಲ್ಲಿದ್ದರೆಂದು ಹೇಳಲಾಗಿದ್ದು ಅದರಲ್ಲಿ 4 ವಿದ್ಯಾರ್ಥಿಗಳು ಮೃತಪಟ್ಟಿದ್ದಾರೆ. ಇನ್ನುಳಿದ 32 ವಿದ್ಯಾರ್ಥಿಗಳನ್ನು ರಕ್ಷಿಸಲಾಗಿದೆ ಎಂದು ಎಎನ್ಐ ವರದಿ ಮಾಡಿದೆ.
ಈ ಘಟನೆಯ ಕುರಿತು ಪ್ರತಿಕ್ರಯಿಸಿರುವ ಜಿಲ್ಲಾಧಿಕಾರಿ ಪ್ರಶಾಂತ ನರ್ನಾವರೆ "ಈ ದುರಂತವು ಬೆಳಗ್ಗೆ ದಹಾನು ಕಡಲು ತೀರದಲ್ಲಿ ನಡೆದಿದೆ ಈಗಾಗಲೇ ಮುಳುಗಿರುವ ಹಡಗಿನ ಹುಡುಕಾಟಕ್ಕೆ ಕಾರ್ಯಾಚರಣೆ ನಡೆದಿದೆ. ಈ ಕಾರ್ಯಾಚರಣೆಯನ್ನು ಸ್ಥಳೀಯ ಹಂತದ ಅಧಿಕಾರಿಗಳ ನೇತೃತ್ವದಲ್ಲಿ ನಡೆಸಲಾಗುತ್ತಿದೆ" ಎಂದು ತಿಳಿಸಿದ್ದಾರೆ.
#Maharashtra: Boat with 40 school children on board capsizes 2 nautical miles from the sea shore in Dahanu. Rescue operations underway. pic.twitter.com/d38CEm1nex
— ANI (@ANI) January 13, 2018
ಹಡಗು ಮುಳುಗಲು ಪ್ರಯಾಣಿಕರ ಸಂಖ್ಯೆಯಲ್ಲಿನ ಹೆಚ್ಚಳ ಎಂದು ಪ್ರಾಥಮಿಕ ವರದಿಯಿಂದ ತಿಳಿದುಬಂದಿದೆ. ಭಾರತೀಯ ಕೋಸ್ಟ್ ಗಾರ್ಡ್ ಸಮುದ್ರದಲ್ಲಿನ ಕಾರ್ಯಾಚರಣೆಗೆ ಪೊಲೀಸರಿಗೆ ನೆರವು ನೀಡುತ್ತಿದ್ದಾರೆ. ದಹಾನು ಮಹಾರಾಷ್ಟ್ರದ ಪಾಲ್ಗರ್ ಜಿಲ್ಲೆಯ ವ್ಯಾಪ್ತಿಯಲ್ಲಿ ಬರುತ್ತದೆ. ಮುಂಬೈಯಿಂದ ಕೇವಲ 110 ಕಿಲೋಮೀಟರ ದೂರದಲ್ಲಿದೆ ಎಂದು ಹೇಳಲಾಗಿದೆ.