ಒಂದೇ ಓವರ್‌ನಲ್ಲಿ 6,6,6,6,6... ಸಂಜು ಸ್ಯಾಮ್ಸನ್‌ ಅಬ್ಬರಕ್ಕೆ ವಿಶ್ವದಾಖಲೆ ಸೃಷ್ಟಿ! ಈ ದಿಗ್ಗಜನನ್ನು ಮೀರಿ ನಿಂತೇಬಿಟ್ಟ ಟೀಂ ಇಂಡಿಯಾದ ʼಸೂಪರ್‌ʼ ಬ್ಯಾಟರ್‌

sanju samson world record: ಸ್ಯಾಮ್ಸನ್ ಬಾಂಗ್ಲಾದೇಶದ ಬೌಲರ್‌ಗಳನ್ನು ಬ್ಯಾಟಿಂಗ್‌ ಮೂಲಕವೇ ಸದೆಬಡಿದಿದ್ದಾರೆ ಎನ್ನಬಹುದು.ಈ ವೇಳೆ ಸತತ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ 40 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಸಂಜು ಅವರ ಇನ್ನಿಂಗ್ಸ್‌ನಲ್ಲಿ, ಅನೇಕ ದಾಖಲೆಗಳು ಸೃಷ್ಟಿಯಾಗಿವೆ.

Written by - Bhavishya Shetty | Last Updated : Oct 12, 2024, 10:05 PM IST
    • ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ರನ್‌ ಮಳೆ
    • ಬಾಂಗ್ಲಾದೇಶ ವಿರುದ್ಧ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದಾರೆ
    • ಸ್ಯಾಮ್ಸನ್ ಬಾಂಗ್ಲಾದೇಶದ ಬೌಲರ್‌ಗಳನ್ನು ಬ್ಯಾಟಿಂಗ್‌ ಮೂಲಕವೇ ಸದೆಬಡಿದಿದ್ದಾರೆ
ಒಂದೇ ಓವರ್‌ನಲ್ಲಿ 6,6,6,6,6... ಸಂಜು ಸ್ಯಾಮ್ಸನ್‌ ಅಬ್ಬರಕ್ಕೆ ವಿಶ್ವದಾಖಲೆ ಸೃಷ್ಟಿ! ಈ ದಿಗ್ಗಜನನ್ನು ಮೀರಿ ನಿಂತೇಬಿಟ್ಟ ಟೀಂ ಇಂಡಿಯಾದ ʼಸೂಪರ್‌ʼ ಬ್ಯಾಟರ್‌ title=
sanju samson

Sanju Samson: ಭಾರತದ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಸಂಜು ಸ್ಯಾಮ್ಸನ್ ದಸರಾ ಹಬ್ಬದಂದೇ ಹೈದರಾಬಾದ್‌ನಲ್ಲಿ ರನ್‌ ಮಳೆ ಸುರಿಸಿದ್ದಾರೆ. ಬಾಂಗ್ಲಾದೇಶ ವಿರುದ್ಧ ತಮ್ಮ T20 ವೃತ್ತಿಜೀವನದ ಮೊದಲ ಶತಕವನ್ನು ಗಳಿಸಿದ್ದಾರೆ.

ಇದನ್ನೂ ಓದಿ: ಈ 6 ಜನ್ಮರಾಶಿಗಳಿಗೆ ಶುಕ್ರದೆಸೆ ಶುರು... ಜೀವನದಲ್ಲಿ ಸಾಧ್ಯವೇ ಇಲ್ಲ ಎನ್ನುವ ಕೆಲಸವೂ ಕೈಗೂಡುವುದು! ಅದೃಷ್ಟಕ್ಕೆ ಮತ್ತೊಂದು ಹೆಸರಾಗುವರು ಈ ಷಷ್ಟರಾಶಿಯವರು

ಇನ್ನೊಂದೆಡೆ ಸ್ಯಾಮ್ಸನ್ ಬಾಂಗ್ಲಾದೇಶದ ಬೌಲರ್‌ಗಳನ್ನು ಬ್ಯಾಟಿಂಗ್‌ ಮೂಲಕವೇ ಸದೆಬಡಿದಿದ್ದಾರೆ ಎನ್ನಬಹುದು.ಈ ವೇಳೆ ಸತತ 4 ಬೌಂಡರಿ ಹಾಗೂ 5 ಸಿಕ್ಸರ್‌ಗಳನ್ನು ಬಾರಿಸಿದ್ದಾರೆ. ಜೊತೆಗೆ 40 ಎಸೆತಗಳಲ್ಲಿ ಶತಕ ಪೂರೈಸಿದ್ದಾರೆ. ಸಂಜು ಅವರ ಇನ್ನಿಂಗ್ಸ್‌ನಲ್ಲಿ, ಅನೇಕ ದಾಖಲೆಗಳು ಸೃಷ್ಟಿಯಾಗಿವೆ. ಇತ್ತೀಚಿನ ದಿನಗಳಲ್ಲಿ ಸ್ಯಾಮ್ಸನ್ ಭಾರತದ ಅತ್ಯಂತ ಪ್ರತಿಭಾನ್ವಿತ ಆಟಗಾರ ಎಂದು ಗುರುತಿಸಲ್ಪಟ್ಟಿದ್ದಾರೆ.

ಅಂತಾರಾಷ್ಟ್ರೀಯ ಟಿ20ಯಲ್ಲಿ ಭಾರತದ ಪರ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು

  • 36 - ಯುವರಾಜ್ ಸಿಂಗ್ vs ಸ್ಟುವರ್ಟ್ ಬ್ರಾಡ್ (ಇಂಗ್ಲೆಂಡ್), ಡರ್ಬನ್, 2007
  • 36 - ರೋಹಿತ್ ಶರ್ಮಾ ಮತ್ತು ರಿಂಕು ಸಿಂಗ್ vs ಕರೀಂ ಜನತ್ (ಅಫ್ಘಾನಿಸ್ತಾನ), ಬೆಂಗಳೂರು, 2024
  • 30 - ರುತುರಾಜ್ ಗಾಯಕ್‌ವಾಡ್ ಮತ್ತು ತಿಲಕ್ ವರ್ಮಾ vs ಗ್ಲೆನ್ ಮ್ಯಾಕ್ಸ್‌ವೆಲ್ (ಆಸ್ಟ್ರೇಲಿಯಾ), ಗುವಾಹಟಿ, 2023
  • 30 - ಸಂಜು ಸ್ಯಾಮ್ಸನ್ vs ರಿಷಾದ್ ಹೊಸೈನ್ (ಬಾಂಗ್ಲಾದೇಶ), ಹೈದರಾಬಾದ್, 2024
  • 29 - ರೋಹಿತ್ ಶರ್ಮಾ vs ಮಿಚೆಲ್ ಸ್ಟಾರ್ಕ್ (ಆಸ್ಟ್ರೇಲಿಯಾ), ಸೇಂಟ್ ಲೂಸಿಯಾ, 2024

ಸ್ಯಾಮ್ಸನ್ 47 ಎಸೆತಗಳಲ್ಲಿ 111 ರನ್ ಗಳಿಸಿ ಔಟಾಗಿದ್ದಾರೆ. 11 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದ ಅವರ ಸ್ಟ್ರೈಕ್ ರೇಟ್ 236.17 ಆಗಿತ್ತು. ಇನ್ನೊಂದೆಡೆ
ಸ್ಯಾಮ್ಸನ್ ಪೂರ್ಣಾವಧಿ ICC ತಂಡದಲ್ಲಿ ಆಡುವಾಗ T20 ನಲ್ಲಿ ಅತಿವೇಗದ ಶತಕ ಗಳಿಸಿದ ನಾಲ್ಕನೇ ಬ್ಯಾಟ್ಸ್‌ಮನ್ ಎನಿಸಿಕೊಂಡಿದ್ದಾರೆ. ಈ ವಿಚಾರದಲ್ಲಿ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಮೊದಲ ಸ್ಥಾನದಲ್ಲಿದ್ದಾರೆ. 2017ರಲ್ಲಿ ಬಾಂಗ್ಲಾದೇಶ ವಿರುದ್ಧ 35 ಎಸೆತಗಳಲ್ಲಿ ಶತಕ ಸಿಡಿಸಿದ್ದರು. ಭಾರತದ ಪರ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. 35 ಎಸೆತಗಳಲ್ಲಿ ಶತಕ ಗಳಿಸಿದ್ದರು.

T20 ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ಶತಕಗಳು (ಪೂರ್ಣ ಸಮಯದ ತಂಡಗಳಿಗೆ)

  • 35 ಎಸೆತಗಳು - ಡೇವಿಡ್ ಮಿಲ್ಲರ್ (ದಕ್ಷಿಣ ಆಫ್ರಿಕಾ) vs ಬಾಂಗ್ಲಾದೇಶ, ಪೊಚೆಫ್‌ಸ್ಟ್ರೂಮ್, 2017
  • 35 ಎಸೆತಗಳು - ರೋಹಿತ್ ಶರ್ಮಾ (ಭಾರತ) vs ಶ್ರೀಲಂಕಾ, ಇಂದೋರ್, 2017
  • 39 ಎಸೆತಗಳು- ಜಾನ್ಸನ್ ಚಾರ್ಲ್ಸ್ (ವೆಸ್ಟ್ ಇಂಡೀಸ್) vs ದಕ್ಷಿಣ ಆಫ್ರಿಕಾ, ಸೆಂಚುರಿಯನ್, 2023
  • 40 ಎಸೆತಗಳು - ಸಂಜು ಸ್ಯಾಮ್ಸನ್ (ಭಾರತ) vs ಬಾಂಗ್ಲಾದೇಶ, ಹೈದರಾಬಾದ್, 2024
  • 42 ಎಸೆತಗಳು- ಹಜರತುಲ್ಲಾ ಝಜೈ (ಅಫ್ಘಾನಿಸ್ತಾನ) vs ಐರ್ಲೆಂಡ್, ಡೆಹ್ರಾಡೂನ್, 2019
  • 42 ಎಸೆತಗಳು - ಲಿಯಾಮ್ ಲಿವಿಂಗ್‌ಸ್ಟೋನ್ (ಇಂಗ್ಲೆಂಡ್) vs ಪಾಕಿಸ್ತಾನ, ಟ್ರೆಂಟ್ ಬ್ರಿಡ್ಜ್, 2021.

ಇದನ್ನೂ ಓದಿ: ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ ಮೊಹಮ್ಮದ್ ಸಿರಾಜ್ ಅಧಿಕಾರ ಸ್ವೀಕಾರ

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News