ಟೋಕಿಯೋ: ಕೊರೊನಾ ವೈರಸ್ ನಿಂದ ಬೇಜಾರಾಗಿರುವ ಕ್ರೀಡಾ ಜಗತ್ತಿನ ಪಾಲಿಗೆ ಒಂದು ಸಂದಸದ ಸುದ್ದಿ ಪ್ರಕಟಗೊಂಡಿದೆ. ಹೌದು, ಟೋಕಿಯೋ ಒಲಿಂಪಿಕ್ಸ್ ಹಾಗೂ ಪ್ಯಾರಾ ಒಲಿಂಪಿಕ್ಸ್ ಗೇಮ್ಸ್ ನ ನೂತನ ದಿನಾಂಕಗಳನ್ನು ಘೋಷಿಸಲಾಗಿದೆ. ಈ ವರ್ಷದ ಜುಲೈ-ಆಗಸ್ಟ್ ನಲ್ಲಿ ಟೋಕಿಯೋ ಒಲಿಂಪಿಕ್ಸ್ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಲಾಗಿತ್ತು. ಆದರೆ, ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಇದೀಗ ಈ ಪಂದ್ಯಾವಳಿಯನ್ನು ಒಂದು ವರ್ಷದವರೆಗೆ ಮುಂದೂಡಲಾಗಿದೆ.
ಸ್ಥಳೀಯ ಮಾಧ್ಯಮಗಳ ವರದಿಗಳ ಪ್ರಕಾರ, ಇನ್ಮುಂದೆ ಜುಲೈ 23, 2021 ರಿಂದ ಆಗಸ್ಟ್ 08, 2021 ರ ಮಧ್ಯೆ ನಡೆಸಲು ನಿರ್ಧರಿಸಲಾಗಿದೆ. ಇದೆ ರೀತಿ ವರ್ಷ 2021ರಲ್ಲಿ ಆಗಸ್ಟ್ 24 ರಿಂದ ಸೆಪ್ಟೆಂಬರ್ 05ರವರೆಗೆ ಪ್ಯಾರಾ ಒಲಿಂಪಿಕ್ಸ್ ಗೇಮ್ಸ್ ಆಯೋಜಿಸಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಕಳೆದ 125 ವರ್ಷಗಳಲ್ಲಿ ಇದೆ ಮೊದಲ ಬಾರಿಗೆ ಒಲಿಂಪಿಕ್ಸ್ ಪಂದ್ಯಾವಳಿಯನ್ನು ಬೆಸಸಂಖ್ಯೆಯ ವರ್ಷದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. 1896ರಲ್ಲಿ ಮೊಟ್ಟಮೊದಲ ಬಾರಿಗೆ ಆಧುನಿಕ ಒಲಿಂಪಿಕ್ಸ್ ಪಂದ್ಯಾವಳಿಯನ್ನು ಯುನಾನ್ ರಾಜಧಾನಿ ಎಥೆನ್ಸ್ ನಲ್ಲಿ ಆಯೋಜಿಸಲಾಗಿತ್ತು. ಅಂದಿನಿಂದ ಇಲ್ಲಿಯವರೆಗೆ ಈ ಪಂದ್ಯಾವಳಿಯನ್ನು ಸಮಸಂಖ್ಯೆಯ ವರ್ಷದಲ್ಲಿ ಆಯೋಜಿಸಲಾಗುತ್ತಿತ್ತು.
ಜಪಾನ್ ನ ಕ್ಯೂಡೋ ನ್ಯೂಸ್ ಎಜೆನ್ಸ್ ಪ್ರಕಾರ, ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಕಮೀಟಿ ಹಾಗೂ ಸ್ಥಳೀಯ ಕ್ರೀಡಾ ಆಯೋಜಕ ಸಮೀತಿ ಸೋಮವಾರ ಸಭೆಯೊಂದನ್ನು ನಡೆಸಿ ಪಂದ್ಯಾವಳಿಗಳನ್ನು ಮುಂದೂಡಲು ಒಮ್ಮತಕ್ಕೆ ಬಂದಿವೆ ಎಂದು ಹೇಳಲಾಗಿದೆ. ಜೊತೆಗೆ ನೂತನ ದಿನಾನ್ಕಗಳನ್ನೂ ಸಹ ಪ್ರಕಟಿಸಲಾಗಿದೆ. ಭಾರತೀಯ ಒಲಿಂಪಿಕ್ಸ್ ಸಂಘಟನೆಯ ಮೂಲಗಳೂ ಕೂಡ ಈ ವರದಿಯನ್ನು ಧೃಢಪಡಿಸಿವೆ.
ಕ್ರೀಡಾ ಆಯೋಜಕ ಸಮೀತಿಯ ಟಾಸ್ಕ್ ಫೋರ್ಸ್ ಗೆ ಈ ಜವಾಬ್ದಾರಿಯನ್ನು ವಹಿಸಲಾಗಿದ್ದು, ಸಮಾನ ಟೈಮ್ ಫ್ರೇಮ್ ನಲ್ಲಿ ದಿನಾಂಕಗಳನ್ನು ಗೊತ್ತುಪಡಿಸಲು ಸೂಚಿಸಲಾಗಿತ್ತು. ಇದರಿಂದ ಸದ್ಯದ ರಣನೀತಿಯನ್ನೂ ಕೂಡ ಆ ಸಮಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಜಾರಿಗೊಳಿಸಲು ಇದರಿಂದ ಸಹಕಾರಿಗಾಗಲಿದೆ ಎನ್ನಲಾಗಿದೆ. ಅದೇನೇ ಆದರೂ. ಸಧ್ಯದ ಪರಿಸ್ಥಿತಿಯಲ್ಲಿ ಮತ್ತು ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಈ ಪಂದ್ಯಾವಳಿಗಳು ಒಂದು ವರ್ಷದವರೆಗೆ ಮುಂದೂಡಲಾಗಿದ್ದು ಮಾತ್ರ ವಾಸ್ತವ.