ಕಿಕ್ಕೇರಿಸಿಕೊಳ್ಳುವ ಮುನ್ನ ಎಚ್ಚರ..!! ನಿಮಗಿಷ್ಟದ ಬಿಯರ್‌ನಲ್ಲಿ ಹಲ್ಲಿ ಪತ್ತೆ.. ವಿಡಿಯೋ ವೈರಲ್‌

Lizard in beer bottle : ಸ್ನೇಹಿತರೊಂದಿಗೆ ಪಾರ್ಟಿ ಮಾಡಲು ಮನೆಗೆ ಮದ್ಯದ ಬಾಟಲಿಗಳನ್ನು ಖರೀದಿಸಿದ ತಂದಿದ್ದ ವ್ಯಕ್ತಿಗೆ ಆಘಾತವಾಗಿದೆ.. ಪಾರ್ಟಿ ಶುರು ಮಾಡಲು ಬಿಯರ್ ಬಾಟಲಿಯ ಮುಚ್ಚಳ ತೆರೆಯಲು ಹೊರಟಿದ್ದವರಿಗೆ ಬಾಟಲಿಯಲ್ಲಿರುವ ವಸ್ತು ಕಂಡು ಶಾಕ್‌ ಆಗಿದೆ.. ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Written by - Krishna N K | Last Updated : Oct 26, 2024, 05:52 PM IST
    • ಮದ್ಯದ ಬಾಟಲಿಗಳನ್ನು ಖರೀದಿಸಿದ ತಂದಿದ್ದ ವ್ಯಕ್ತಿಗೆ ಆಘಾತವಾಗಿದೆ..
    • ಬಿಯರ್ ಬಾಟಲಿಯ ಮುಚ್ಚಳ ತೆರೆಯಲು ಹೊರಟಿದ್ದವರಿಗೆ ಶಾಕ್‌..
    • ಇದಕ್ಕೆ ಸಂಬಂಧಿಸಿದ ವಿಡಿಯೋವೊಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌..
ಕಿಕ್ಕೇರಿಸಿಕೊಳ್ಳುವ ಮುನ್ನ ಎಚ್ಚರ..!! ನಿಮಗಿಷ್ಟದ ಬಿಯರ್‌ನಲ್ಲಿ ಹಲ್ಲಿ ಪತ್ತೆ.. ವಿಡಿಯೋ ವೈರಲ್‌ title=

Lizard in beer viral video : ವ್ಯಕ್ತಿಯೊಬ್ಬ ಪಾರ್ಟಿ ಮಾಡಲೆಂದು ಸ್ಥಳೀಯ ಬಾರ್‌ನಿಂದ ಭಾರೀ ಪ್ರಮಾಣದ ಬಿಯರ್ ಖರೀದಿಸಿದ್ದ.. ಮನೆಗೆ ತಂದು ಬಿಯರ್ ಮುಚ್ಚಳ ತೆರೆಯಲು ಮುಂದಾದ ವ್ಯಕ್ತಿಗೆ ಅದರೊಳಗೆ ಕಾಣಿಸಿಕೊಂಡದ್ದನ್ನು ನೋಡಿ ಶಾಕ್‌ ಆಗಿದೆ.. ಬಿಯರ್ ಬಾಟಲಿಯಲ್ಲಿ ಯಾವುದೋ ಒಂದು ಪ್ರಾಣಿ ಸತ್ತು ತೇಲುತ್ತಿರುವಂತೆ ಕಂಡಿದೆ..

ಇದರಿಂದ ಗೊಂದಲಕ್ಕೀಡಾದ ವ್ಯಕ್ತಿ ಬಾಟಲಿಯನ್ನು ತೆರೆಯದೆ ನೇರವಾಗಿ ಅಂಗಡಿಗೆ ತೆಗೆದುಕೊಂಡು ಹೋಗಿದ್ದಾನೆ. ಇದೇನು ಎಂದು ಕೇಳಿದಾಗ ಆ ವ್ಯಕ್ತಿ ತಮಗೆ ಗೊತ್ತಿಲ್ಲ ಎಂದು ಹೇಳಿದ್ದರಿಂದ ಸಿಟ್ಟಿಗೆದ್ದು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. 

ಇದನ್ನೂ ಓದಿ:ಒಂದು ಕಾಲದಲ್ಲಿ 42 ರೂಪಾಯಿ ಸಂಭಾವನೆ ಪಡೆದ ಈ ನಟ ಇಂದು ಕನ್ನಡದ ಟಾಪ್ ಸ್ಟಾರ್!ನಟನಾಗಿ ಭವಿಷ್ಯ ರೂಪಿಸಿಕೊಳ್ಳಲು ಪಟ್ಟ ಪಾಡು ಅಷ್ಟಿಷ್ಟಲ್ಲ !

ಈ ಘಟನೆ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಇದಕ್ಕೆ ಸಂಬಂಧಿಸಿದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹೌದು.. ಲಕ್ಷ್ಮೀಕಾಂತ್ ರೆಡ್ಡಿ ಮತ್ತು ಅನಂತಯ್ಯ ಇಬ್ಬರೂ ತೆಲಂಗಾಣದ ವಿಕಾರಾಬಾದ್ ಜಿಲ್ಲೆಯ ಧರೂರ್ ಮಂಡಲದ ಕೆರೆಲ್ಲಿ ಗ್ರಾಮದ ಸ್ನೇಹಿತರು. ಪಾರ್ಟಿ ಮಾಡಲು ಸ್ಥಳೀಯ ವೈನ್ ಶಾಪ್ ನಿಂದ ರೂ.4 ಸಾವಿರ ಮೌಲ್ಯದ ಮದ್ಯದ ಬಾಟಲಿಗಳನ್ನು ಖರೀದಿಸಿದ್ದರು. 

ಬಿಯರ್ ಜತೆಗೆ ವಿವಿಧ ಬ್ರಾಂಡ್ ನ ಎಣ್ಣೆಯನ್ನು ತೆಗೆದುಕೊಂಡು ಮನೆಗೆ ಹೋಗಿದ್ದರು. ಪಾರ್ಟಿ ಮಾಡಲು ಬಿಯರ್ ಬಾಟಲಿಯನ್ನು ತೆರೆಯಲು ಮುಂದಾದಾಗ ಅದರಲ್ಲಿ ಏನೋ ತೇಲಾಡುತ್ತಿರುವಂತೆ ಕಂಡಿದೆ. ಇದೇನಪ್ಪಾ ಎಂದು ಕಣ್ಣಾಡಿಸಿದಾಗ ಬಡ್‌ವೈಸರ್ ಬಿಯರ್‌ನಲ್ಲಿ ಸತ್ತ ಹಲ್ಲಿ ತೇಲುತ್ತಿರುವುದು ಕಂಡುಬಂದಿದೆ. ಇದರಿಂದ ಬೆಚ್ಚಿಬಿದ್ದ ಗೆಳೆಯರಿಬ್ಬರೂ ಅಂಗಡಿಗೆ ತೆರೆಗೆದುಕೊಂಡು ಹೋಗಿ ಪ್ರಶ್ನಿಸಿದ್ದಾರೆ..

ಇದನ್ನೂ ಓದಿ:ವಿಚ್ಛೇದನ ವದಂತಿ ನಡುವೆ ನಡೆದೆ ಹೋಯ್ತು ಅಭಿಷೇಕ್‌ ಬಚ್ಚನ್‌-ನಿಮೃತ್‌ ಕೌರ್‌ ನಿಶ್ಚಿತಾರ್ಥ..?! ಎಂಗೇಜ್‌ಮೆಂಟ್‌ ಫೋಟೋ ವೈರಲ್‌

ಆದ್ರೆ, ಬಿಯರ್ ಬಾಟಲಿಯೊಳಗೆ ಹಲ್ಲಿ ಇರುವುದನ್ನು ವೈನ್ ಶಾಪ್ ನ ಮ್ಯಾನೇಜರ್ ಗೆ ತೋರಿಸಿದರೆ ಅದಕ್ಕೂ ತಮಗೂ ಸಂಬಂಧವಿಲ್ಲ ಎಂದು ವೈನ್ ಶಾಪ್ ಮಾಲೀಕರು ಪಟ್ಟು ಹಿಡಿದಿದ್ದಾರೆ. ಅದನ್ನು ತಯಾರಿಸಿದ ಕಂಪನಿಯಿಂದಲೇ ಹಲ್ಲಿ ಬಂದಿರಬೇಕು, ನಾವು ನಿಮಗೆ ಮಾರಿದ್ದೇವೆ, ನಾವೇ ಬಿಯರ್‌ ರೆಡಿ ಮಾಡುತ್ತೇವಾ..? ಅಂತ ನಿರ್ಲಕ್ಷ್ಯವಾಗಿ ಉತ್ತರಿಸಿದ್ದಾನೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News