ಪ್ರತಿ ತಿಂಗಳು ಉತ್ತಮ ಗಳಿಕೆಗಾಗಿ ಎಸ್‌ಬಿಐನ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ

ಸ್ಥಿರ ಠೇವಣಿ ಯೋಜನೆಯಲ್ಲಿ ನೀವು ಪಡೆಯುವಷ್ಟೇ ಬಡ್ಡಿಯನ್ನು ನೀವು ಈ ಹೂಡಿಕೆಯಿಂದಲೂ ಪಡೆಯುತ್ತೀರಿ. 

Last Updated : Apr 18, 2020, 10:02 AM IST
ಪ್ರತಿ ತಿಂಗಳು ಉತ್ತಮ ಗಳಿಕೆಗಾಗಿ ಎಸ್‌ಬಿಐನ ಈ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಿ title=

ನವದೆಹಲಿ: ಲಾಕ್‌ಡೌನ್‌ (Lockdown)ನ ಈ ಸಮಯದಲ್ಲಿ ನೀವು ಉತ್ತಮ ಗಳಿಕೆ ನೀಡುವ ಯೋಜನೆಯಲ್ಲಿ ಹೂಡಿಕೆ ಮಾಡಲು ಯೋಜಿಸುತ್ತಿದ್ದರೆ ಎಸ್‌ಬಿಐ ಎನ್ಯುಟಿ ಠೇವಣಿ  (SBI Annuity Deposit) ಯಲ್ಲಿ ಹೂಡಿಕೆ ಮಾಡಬಹುದು. ಈ ಯೋಜನೆಯಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಗಳಿಸಬಹುದಾಗಿದೆ.

ಉಳಿತಾಯ ಖಾತೆಗೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ, SBI ಖಾತೆದಾರರಿಗೆ ಶಾಕ್

* ಕನಿಷ್ಠ ಒಂದು ಸಾವಿರ ಹೂಡಿಕೆ ಮಾಡಬಹುದು:
ಎಸ್‌ಬಿಐ ಎನ್ಯುಟಿ ಠೇವಣಿ  (SBI Annuity Deposit)ಯಲ್ಲಿ ಹಣವನ್ನು ಹೂಡಿಕೆ ಮಾಡಿದ ನಂತರ ಗ್ರಾಹಕರು ಠೇವಣಿ ಮಾಡಲಾದ ಮೊತ್ತದಿಂದ ಇಂತಿಷ್ಟು ಎಂಬಂತೆ ನಿಗದಿತ ಮೊತ್ತವನ್ನು ಪಡೆಯಲು ಪ್ರಾರಂಭಿಸುತ್ತಾರೆ. ಎಸ್‌ಬಿಐನ ಈ ಯೋಜನೆಯಲ್ಲಿ ನೀವು ಕನಿಷ್ಠ ಒಂದು ಸಾವಿರ ರೂಪಾಯಿಗಳನ್ನು ಜಮಾ ಮಾಡಬಹುದು. ಅದೇ ಸಮಯದಲ್ಲಿ ಗರಿಷ್ಠ ಮೊತ್ತಕ್ಕೆ ಯಾವುದೇ ಮಿತಿಯಿಲ್ಲ.

* ಮುಕ್ತಾಯ ಅವಧಿ:
ಈ ಯೋಜನೆಯಲ್ಲಿ ಮುಕ್ತಾಯದ ಅವಧಿ 3 ವರ್ಷ, 5 ವರ್ಷ, 7 ವರ್ಷ ಮತ್ತು 10 ವರ್ಷಗಳು. ಸ್ಥಿರ ಠೇವಣಿ ಯೋಜನೆಯಲ್ಲಿ ನೀವು ಪಡೆಯುವಷ್ಟೇ ಬಡ್ಡಿಯನ್ನು ನೀವು ಈ ಹೂಡಿಕೆಯಿಂದಲೂ ಪಡೆಯುತ್ತೀರಿ. ಈ ಯೋಜನೆ ಅವಧಿ ಪೂರ್ಣಗೊಂಡ ನಂತರ ಪ್ರತಿ ತಿಂಗಳು ತಮ್ಮ ಉಳಿತಾಯದಿಂದ ನಿಯಮಿತ ಆದಾಯವನ್ನು ಬಯಸುವವರಿಗೆ ನೀವು ಮೊತ್ತವನ್ನು ಠೇವಣಿ ಮಾಡಿದ ಅದೇ ದಿನಾಂಕದಂದು ಪ್ರತಿ ತಿಂಗಳು ನಿಗದಿತ ಮೊತ್ತವನ್ನು ಪಡೆಯುತ್ತೀರಿ.

ಲಾಕ್‌ಡೌನ್‌ ವೇಳೆ ಹಣದ ತೊಂದರೆ ಎದುರಾಗಿದೆಯೇ? ಈ ಬ್ಯಾಂಕುಗಳಿಂದ ಸಿಗಲಿದೆ ಸಾಲ

* ನಾಮಿನಿ ಲಾಭ ಪಡೆಯಬಹುದು:
ಎಸ್‌ಬಿಐ (SBI)ನ ಅಧಿಕೃತ ವೆಬ್‌ಸೈಟ್ ಪ್ರಕಾರ  ಖಾತೆದಾರ ಅಕಾಲಿಕವಾಗಿ ಮರಣ ಹೊಂದಿದರೆ ಅಥವಾ ಅವರು ಈ ಯೋಜನೆಯ ಅವಧಿ ಮುಕ್ತಾಯಗೊಳ್ಳುವ ಮೊದಲು ಮೃತ ಪಟ್ಟರೆ ಈ ಯೋಜನೆಯ ನಾಮನಿರ್ದೇಶಿತರು ಹಣವನ್ನು ಹಿಂಪಡೆಯಬಹುದು. ಇದಲ್ಲದೆ ಎಸ್‌ಬಿಐನ ಅಧಿಕೃತ ವೆಬ್‌ಸೈಟ್ ಪ್ರಕಾರ ಠೇವಣಿದಾರರ ಮರಣದ ನಂತರವೇ ನಿಗದಿತ ಅವಧಿಯ ಮೊತ್ತವನ್ನು ಹಿಂಪಡೆಯಬಹುದು.

ವಂಚಕರಿಂದ ಹೊಸ ರೀತಿಯಲ್ಲಿ ಮೋಸ: ಗ್ರಾಹಕರಿಗೆ ಎಸ್‌ಬಿಐ ಅಲರ್ಟ್

* ಸಾಲದ ಆಯ್ಕೆ:
ಇದಲ್ಲದೆ ಈ ಯೋಜನೆಯಡಿ ಠೇವಣಿ ಮೊತ್ತದ ಶೇಕಡಾ 75 ರಷ್ಟು ಸಾಲವನ್ನು ಸಹ ತೆಗೆದುಕೊಳ್ಳಬಹುದು. ಆದಾಗ್ಯೂ, ಸಾಲದ ಆಯ್ಕೆಯನ್ನು ಆರಿಸಿದ ನಂತರವೂ ಸಂಪೂರ್ಣ ಸಾಲವನ್ನು ಮರುಪಾವತಿಸುವವರೆಗೆ ಭವಿಷ್ಯದ ವರ್ಷಾಶನದ ಪಾವತಿಯನ್ನು ಸಾಲದ ಖಾತೆಯಲ್ಲಿ ಜಮಾ ಮಾಡಲಾಗುತ್ತದೆ.

* ಯಾರು ಹೂಡಿಕೆ ಮಾಡಬಹುದು?
ಈ ಯೋಜನೆಯ ಲಾಭವನ್ನು ಯಾರಾದರೂ ಪಡೆಯಬಹುದು. ಇದರಲ್ಲಿ ವೈಯಕ್ತಿಕ ಅಥವಾ ಜಂಟಿ ಖಾತೆಗಳು, ವಯಸ್ಕರು ಮತ್ತು ಅಪ್ರಾಪ್ತ ವಯಸ್ಕರು ಖಾತೆ ತೆರೆಯಬಹುದು. ಈ ಯೋಜನೆಯನ್ನು ಖಾತೆ ವರ್ಗಾವಣೆಗೆ ಇತರ ಶಾಖೆಗಳಲ್ಲಿ ಎಫ್‌ಡಿ ನಿಯಮಗಳ ಆಧಾರದ ಮೇಲೆ ಟಿಡಿಎಸ್ ನಿಯಮಗಳು ಅನುಸರಿಸುತ್ತವೆ.

Trending News