Bhairathi Ranagal Review: ಬಹುನಿರೀಕ್ಷೆಯ ‘ಭೈರತಿ ರಣಗಲ್’ ಸಿನಿಮಾ ರಿಲೀಸ್ ಆಗಿದೆ. ಕರ್ನಾಟಕದಲ್ಲಿ ಸುಮಾರು 300ಕ್ಕೂ ಹೆಚ್ಚು ಥೀಯೇಟರ್ ನಲ್ಲಿ ರಿಲೀಸ್ ಆಗಿದ್ದು ಸಖತ್ ಖುಷಿ ಕೊಟ್ಟಿದೆ. ಸಿನಿಮಾ ಚನ್ನಾಗಿ ಇದ್ರೆ ಜನ ಬಂದೇ ಬರುತ್ತಾರೆ ಅನ್ನೋದಕ್ಕೆ ‘ಭೈರತಿ ರಣಗಲ್’ ಸಿನಿಮಾ ಸಾಕ್ಷಿ.ನಿಜ ಜೀವನದಲ್ಲಿ ಶಿವಣ್ಣ ಕರುನಾಡಿನ ಜನತೆಗೆ ಪ್ರೀತಿ ಹಂಚೋ ಕಾವಲಿಗ. ಈ ಚಿತ್ರದಲ್ಲಿ ರಾಣಾಪುರ ಜನತೆಯನ್ನ ಮಕ್ಕಳಂತೆ ಕಾಪಾಡೋ ಕಾವಲಿಗ. ಶಿವಣ್ಣನ ಎಂಟ್ರಿ ಲಾಂಗ್ ಮಚ್ಚು ಇಲ್ಲದೇ ಪುಸ್ತಕ ಓದೋ ಮೂಲಕ ಆಗುತ್ತೆ.
ಸಿನಿಮಾ ಸ್ಟೋರಿ ರಮೇಶ್ ಅರವಿಂದ್ ಹಿನ್ನೆಲೆ ಧ್ವನಿಯಲ್ಲಿ ಆರಂಭ ಆಗುತ್ತದೆ ಭೈರತಿ ರಣಗಲ್ ಪಾತ್ರಪರಿಚಯ. ರಣಗಲ್‌ನ ಬಾಲ್ಯದ ಕಥೆಯಿಂದ ಸಿನಿಮಾ ಶುರು. ಬಾಲ್ಯದಿಂದಲೇ ಅನ್ಯಾಯ ಕಂಡರೆ ಸಿಡಿದ್ದೇಳೋ ರಾಣಾಪುರದಲ್ಲಿ ನಡೆಯೋ ಅನ್ಯಾಯವನ್ನ ಮೆಟ್ಟಿ ನಿಲ್ಲೋ ನಾಯಕ ರಣಗಲ್ ( ಶಿವರಾಜ್ ಕುಮಾರ್). ಮೊದಲಾರ್ಧದಲ್ಲಿ ಶಿವಣ್ಣ ಲಾಯರ್ ಪಾತ್ರದಲ್ಲಿ ಮಿಂಚುಹರಿಸುತ್ತಾರೆ. ಆದರೆ ವಕೀಲನಾದ ರಣಗಲ್ (ಶಿವರಾಜ್ ಕುಮಾರ್ )ಗೆ ಅನ್ಯಾಯ ತಡೆಗಟ್ಟಲು ಸಾಧ್ಯವೇ ಆಗೋದಿಲ್ಲ. ಅದಕ್ಕಾಗಿ ಮಚ್ಚು ಹಿಡಿಯಲೇ ಬೇಕಾದ ಅನಿವಾರ್ಯತೆ ಸೃಷ್ಟಿ ಆಗುತ್ತೆ. ಆಮೇಲೆ ಶುರುವಾಗೋದೇ ರಿಯಲ್ ಆಟ.
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಶಿವರಾಜ್‌ಕುಮಾರ್ ಕಪ್ಪು ಕೋಟು ತೆಗೆದಿಟ್ಟು, ಲಾಯರ್ ಕೆಲಸ ಬದಿಗಿಟ್ಟು ಲಾಂಗ್ ಹಿಡಿದ ನಂತರವೇ ಸಿನಿಮಾದಲ್ಲಿ ಮಾಸ್ ಎಲಿಮೆಂಟ್ ಕಾಣಿಸೋದು. ಹೌದು ಸಿನಿಮಾದಲ್ಲಿ ಪ್ರತಿಯೊಂದು ವಿಚಾರವೂ ನಮ್ಮನ್ನ ಕಾಡುತ್ತೆ. ಅಣ್ಣ ತಂಗಿ ಸೆಂಟಿಮೆಂಟ್, ಜನರಮೇಲೆ ರಣಗಲ್ ಗಿರೋ ಪ್ರೀತಿ ಎಲ್ಲವೂ ಮನಸ್ಸಿಗೆ ಹತ್ತಿರ ಆಗುತ್ತೆ.ಶಿವಣ್ಣನ ಒಂದೊಂದು ಡೈಲಾಗ್ ಕೂಡ ಕಿಕ್ಕೇರಿಸುತ್ತೆ. ಮಫ್ತಿ ಸಿನಿಮಾದ ಪ್ರೀಕ್ವೆಲ್ ‘ಭೈರತಿ ರಣಗಲ್’ ಜನರಿಗಾಗಿ ರಣಗಲ್ ತೆಗೆದುಕೊಳ್ಳೋ ನಿರ್ಧಾರಗಳು ಹೇಗಿರುತ್ತೆ ಅನ್ನೋ ಕುತೂಹಲಕ್ಕೆ ಪಕ್ಕಾ ಎಲ್ಲರೂ ಸೀಟಿನ ಅಂಚಿನಲ್ಲಿ ಕೂರಿಸುತ್ತೆ.
ಇದನ್ನೂ ಓದಿ: ಕಾಮಗಾರಿಯಲ್ಲಿ ಮುಸ್ಲಿಮರಿಗೆ ಮೀಸಲಾತಿ ಪ್ರಸ್ತಾವನೆ ತಪ್ಪುಗ್ರಹಿಕೆ- ಜಿ.ಪರಮೇಶ್ವರ
ಛಾಯಾ ಸಿಂಗ್ ಮತ್ತು ರುಕ್ಮಿಣಿ ವಸಂತ್ ಗೆ ಅಷ್ಟೇನೂ ಸ್ಪೇಸ್ ಇಲ್ಲ. ಕ್ಯಾಮೆರಾ ವರ್ಕ್ ಅದ್ಬುತವಾಗಿದೆ. ಮೇಕಿಂಗ್ ದಿಲ್ ಖುಷ್ ಆಗಿಸುತ್ತೆ. ಮ್ಯೂಸಿಕ್ ಕುಳಿತಲ್ಲೇ ನಮ್ಮನ್ನ ನಡುಗಿಸುತ್ತೆ. 62ರ ಪ್ರಾಯದಲ್ಲೂ ಶಿವಣ್ಣ ಎನರ್ಜಿಗೆ ಎದ್ದು ನಿಂತು ಸಲ್ಯೂಟ್ ಹೊಡೆಯಲೇಬೇಕು. ಸೊ ಥೀಯೇಟರ್ ಗೆ ಬಂದು ಭೈರತಿ ರಣಗಲ್ ಸಿನಿಮಾ ನೋಡಿ.ಪೈಸಾ ವಸೂಲ್ ಸಿನಿಮಾ. ಹಾಗೆಯೇ ಭೈರತಿ ರಣಗಲ್ ಸಿನಿಮಾದ ಪಾರ್ಟ್ 3 ನೋಡಲು ರೆಡಿ ಆಗಿ ‘ಮಫ್ತಿ’ ಸಿನಿಮಾದಲ್ಲಿ ಶಿವರಾಜ್ ಕುಮಾರ್ ಅವರು ಭೈರತಿ ರಣಗಲ್ ಎಂಬ ಪಾತ್ರ ಮಾಡಿದ್ದರು. ನರ್ತನ್ ಅವರು ಆ್ಯಕ್ಷನ್ -ಕಟ್ ಶಿವರಾಜ್ ಕುಮಾರ್ ಜೊತೆ ರಾಹುಲ್ ಭೋಸ್, ರುಕ್ಮಿಣಿ ವಸಂತ್, ಛಾಯಾ ಸಿಂಗ್, ಅವಿನಾಶ್, ಮಧು ಗುರುಸ್ವಾಮಿ, ದೇವರಾಜ್ ಮುಂತಾದ ಕಲಾವಿದರು ನಟಿಸಿದ್ದಾರೆ. ರವಿ ಬಸ್ರೂರು ಅವರು ಸಂಗೀತ ನೀಡಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.