ನವದೆಹಲಿ: ಫ್ರಾಂಕ್ಲಿನ್ ಟೆಂಪಲ್ ಟನ್ ಹಣಕಾಸಿನ ಬಿಕ್ಕಟ್ಟಿನ ನಡುವೆ ಭಾರತೀಯ ರಿಸರ್ವ್ ಬ್ಯಾಂಕ್ ಮ್ಯೂಚವಲ್ ಫಂಡ್ ಹೂಡಿಕೆದಾರರಿಗೆ ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ. ಹೌದು, ಭಾರತೀಯ ರಿಸರ್ವ್ ಬ್ಯಾಂಕ್ ಮ್ಯೂಚವಲ್ ಫಂಡ್ಸ್ ಗಳಿಗೆ 50 ಸಾವಿರ ಕೋಟಿಯ ವಿಶೇಷ ಲಿಕ್ವಿಡಿಟಿ ಸೌಲಭ್ಯವನ್ನು ಒದಗಿಸಿದೆ. ಲಿಕ್ವಿಡಿಟಿ ಬಿಕ್ಕಟ್ಟಿನ ಹಿನ್ನೆಲೆ ದೇಶದ ಹೆಸರಾಂತ ಮ್ಯೂಚವಲ್ ಫಂಡ್ ಫ್ರಾಂಕ್ಲಿನ್ ಟೆಂಪಲ್ ಟನ್ ತನ್ನ ಆರು ಡೆಟ್ ಫಂಡ್ ಯೋಜನೆಗಳನ್ನು ಬಂದ್ ಮಾಡುವ ನಿರ್ಣಯ ಕೈಗೊಂಡಿದೆ. ಇದರಿಂದ ಹೂಡಿಕೆದಾರರ ಒಟ್ಟು 26 ಸಾವಿರ ಕೋಟಿ ರೂ. ಸಿಲುಕಿಕೊಂಡಿವೆ. ಇದರಿಂದ ಮ್ಯೂಚವಲ್ ಫಂಡ್ ಹೂಡಿಕೆದಾರರಲ್ಲಿ ಆತಂಕ ಮನೆಮಾಡಿದೆ. ಇದರಿಂದ ಡೆಟ್ ವಿಭಾಗದಲ್ಲಿ ಮಾರಾಟ ತೀವ್ರತೆ ಪಡೆಯುವ ಸಾಧ್ಯತೆ ಇದೆ.
ಏಪ್ರಿಲ್ 27 ರಿಂದ ಮೇ 11ರವರೆಗೆ
ಭಾರತೀಯ ರಿಸರ್ವ್ ಬ್ಯಾಂಕ್ ಜಾರಿಗೊಳಿಸಿರುವ ಈ ವಿಶೇಷ ಯೋಜನೆ ಮ್ಯೂಚವಲ್ ಫಂಡ್ ಗಳಿಗಾಗಿ 27 ಏಪ್ರಿಲ್ 2020 ರಿಂದ 11 ಮೇ 2020 ರವರೆಗೆ ಅಥವಾ ಬಿಡುಗಡೆಗೊಳಿಸಲಾಗಿರುವ ಹಣ ಬಳಕೆಯಾಗುವ ತನಕ ಮುಂದುವರೆಯಲಿದೆ. ಮಾರುಕಟ್ಟೆಯಲ್ಲಿನ ಸಧ್ಯದ ಪರಿಸ್ಥಿತಿ ಪ್ರಕಾರ ಭಾರತೀಯ ರಿಸರ್ವ್ ಬ್ಯಾಂಕ್ ನ ಯೋಜನೆ ಟೈಮ್ ಲೈನ್ ಹಾಗೂ ಅಮೌಂಟ್ ರಿವ್ಯೂ ಕೂಡ ನಡೆಸಲಿದ್ದು, ಅವಶ್ಯಕತೆ ಎದುರಾದರೆ ಇದನ್ನು ಹೆಚ್ಚಿಸುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗುತ್ತಿದೆ.
RBI ಮೂಲಗಳ ಪ್ರಕಾರ ಕೊವಿಡ್ 19 ಕಾರಣ ಬಂಡವಾಳ ಮಾರುಕಟ್ಟೆಗೆ ಭಾರಿ ಪೆಟ್ಟು ಬಿದ್ದಿದೆ. ಇದರಿಂದ ಬಂಡವಾಳ ಮಾರುಕಟ್ಟೆಯಲ್ಲಿ ಭಾರಿ ಪ್ರಮಾಣದ ಅನಿಶ್ಚಿತತೆ ಕಾಣಲು ಸಿಗುತ್ತಿದೆ. ಇದರಿಂದ ಮ್ಯೂಚವಲ್ ಫಂಡ್ ವಿಭಾಗದಲ್ಲಿ ಲಿಕ್ವಿಡಿಟಿ ಸಮಸ್ಯೆ ಎದುರಾಗಿದೆ.
ಆದರೆ ಸಂಪೂರ್ಣ ಉದ್ಯಮದಲ್ಲಿ ಯಾವುದೇ ಅಡಚಣೆ ಇಲ್ಲ
ಆದರೆ ಈ ಅಡಚಣೆ ಕೇವಲ ಹೈ ರಿಸ್ಕ್ ಡೆಟ್ ಫಂಡ್ ಸೆಗ್ಮೆಂಟ್ ಗೆ ಮಾತ್ರ ಸೀಮಿತವಾಗಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಸ್ಪಷ್ಟಪಡಿಸಿದೆ. ಸಂಪೂರ್ಣ ಉದ್ಯಮದ ಕುರಿತು ಹೇಳುವುದಾದರೆ ಅಲ್ಲಿ ಯಾವುದೇ ರೀತಿಯ ಬಿಕ್ಕಟ್ಟು ಎದುರಾಗಿಲ್ಲ. ಹೀಗಾಗಿ RBI ಸದ್ಯ 50 ಸಾವಿರ ಕೋಟಿ ರೂ.ಗಳ ಸ್ಪೆಷಲ್ ಲಿಕ್ವಿಡಿಟಿ ಸೌಲಭ್ಯ ಒದಗಿಸಿದೆ. ಜೊತೆಗೆ ಕೊವಿಡ್ 19 ಹಿನ್ನೆಲೆ ಉಂಟಾಗುತ್ತಿರುವ ಅಡಚಣೆಗಳನ್ನು ದೂರಗೊಳಿಸಲು ಸಾಧ್ಯವಾದ ಎಲ್ಲಾ ಪ್ರಯತ್ನಗಳನ್ನು ಮಾಡಲಾಗುವುದು ಎಂದು RBI ಹೇಳಿದೆ.
ಫ್ರಾಂಕ್ಲಿನ್ ಟೆಂಪಲ್ ಟನ್ ನ ಬಂದ್ ಮಾಡಲಾಗಿರುವ ಆರು ಯೋಜನೆಗಳು
ಫ್ರಾಂಕ್ಲಿನ್ ಇಂಡಿಯಾ ಟೆಂಪಲ್ ಟನ್ ಲೋ ಡ್ಯುರೇಶನ್ ಫಂಡ್
ಫ್ರಾಂಕ್ಲಿನ್ ಇಂಡಿಯಾ ಟೆಂಪಲ್ ಟನ್ ಶಾರ್ಟ್ ಬಾಂಡ್ ಫಂಡ್
ಫ್ರಾಂಕ್ಲಿನ್ ಇಂಡಿಯಾ ಟೆಂಪಲ್ ಟನ್ ಶಾರ್ಟ್ ಟರ್ಮ್ ಇನ್ಕಮ್ ಪ್ಲಾನ್
ಫ್ರಾಂಕ್ಲಿನ್ ಇಂಡಿಯಾ ಟೆಂಪಲ್ ಟನ್ ಕ್ರೆಡಿಟ್ ರಿಸ್ಕ್ ಫಂಡ್
ಫ್ರಾಂಕ್ಲಿನ್ ಇಂಡಿಯಾ ಟೆಂಪಲ್ ಟನ್ ಡೈನಾಮಿಕ್ ಏಕ್ಚ್ಯೂರಿಯಲ್ ಫಂಡ್
ಫ್ರಾಂಕ್ಲಿನ್ ಇಂಡಿಯಾ ಟೆಂಪಲ್ ಟನ್ ಇನ್ಕಮ್ ಅಪಾರ್ಚ್ಯುನಿಟಿ ಫಂಡ್