28 ಸಾವಿರ ರೂ.ಗೆ 1 ಲೋಟ ಕಾಫಿ..! ಇದರ ವಿಶೇಷತೆ ಕೇಳಿದ್ರೆ ಸಾಲ ಮಾಡಿಯಾದ್ರೂ ಮುಗಿಬಿದ್ದು ಕುಡಿತೀರಾ..

28000 rs coffee : ಅಬ್ಬಬ್ಬಾ ಅಂದ್ರೆ ಒಂದು ಕಪ್ ಕಾಫಿ ಬೆಲೆ 2000 ಇರಬಹುದಾ.. ಆದರೆ ಈಗ ನಾವು ಹೇಳುತ್ತಿರುವ ಈ ಕಾಫಿ ತುಂಬಾ ದುಬಾರಿ, ಅದು ಸಾವಿರ ರೂಪಾಯಿಯೋ ಅಥವಾ ಎರಡು ಸಾವಿರ ರೂಪಾಯಿಯೋ ಅಲ್ಲ, ಒಂದು ಕಪ್ ಕಾಫಿ ಬಲೆ 28 ಸಾವಿರ..

Written by - Krishna N K | Last Updated : Nov 26, 2024, 11:55 AM IST
    • ಒಂದು ಕಪ್ ಕಾಫಿ ಬೆಲೆ 2000 ಇರಬಹುದಾ..?
    • ಸಾವಯವ ಡೈರಿ ಬ್ರಿಟನ್‌ನ ಅತ್ಯಂತ ದುಬಾರಿ ಕಪ್ ಕಾಫಿಯನ್ನು ಪರಿಚಯಿಸಿದೆ.
    • ಈ ಒಂದು ಕಪ್ ಕಾಫಿಯ ಬೆಲೆ 28 ಸಾವಿರ ರೂಪಾಯಿ.
28 ಸಾವಿರ ರೂ.ಗೆ 1 ಲೋಟ ಕಾಫಿ..! ಇದರ ವಿಶೇಷತೆ ಕೇಳಿದ್ರೆ ಸಾಲ ಮಾಡಿಯಾದ್ರೂ ಮುಗಿಬಿದ್ದು ಕುಡಿತೀರಾ.. title=

Most expensive coffee : ಸ್ಕಾಟ್ಲೆಂಡ್‌ನ ಮಾಸ್‌ಗಿಲ್ ಸಾವಯವ ಡೈರಿ ಬ್ರಿಟನ್‌ನ ಅತ್ಯಂತ ದುಬಾರಿ ಕಪ್ ಕಾಫಿಯನ್ನು ಪರಿಚಯಿಸಿದೆ. ಈ ಒಂದು ಕಪ್ ಕಾಫಿಯ ಬೆಲೆ 28 ಸಾವಿರ ರೂಪಾಯಿ. ಈ ಕಾಫಿಯ ಸಿದ್ಧಪಡಿಸುವ ವಿಧಾನ ಸೇರಿದಂತೆ ಇದರ ಬೆಲೆ ದುಬಾರಿಯಾಗಲು ಹಲವಾರು ವಿಶೇಷ ಕಾರಣಗಳಿವೆ..  

ಹೌದು.. ಈ ಫ್ಲಾಟ್ ವೈಟ್ ಕಾಫಿಯನ್ನು 2 ಶಾಟ್‌ ಎಸ್ಪ್ರೆಸೊ ಮತ್ತು ಬೇಯಿಸಿದ ಹಾಲಿನ ತೆಳುವಾದ ಪದರದಿಂದ ತಯಾರಿಸಲಾಗುತ್ತದೆ. ಇದನ್ನು ತಯಾರಿಸುವ ತಂತ್ರ ಬಹಳ ವಿಶೇಷವಾಗಿದೆ. ಈ ವಿಶಿಷ್ಟ ಕಾಫಿಯ ಬೆಲೆ 272 ಪೌಂಡ್‌ಗಳು (ಸುಮಾರು 28,000 ರೂ.) ಇದು ಬ್ರಿಟನ್‌ನ ಅತ್ಯಂತ ದುಬಾರಿ ಕಾಫಿಯಾಗಿದೆ. ಈ ಕಾಫಿ 13 ಕೆಫೆಗಳಲ್ಲಿ ಮಾತ್ರ ಲಭ್ಯವಿದೆ.

ಇದನ್ನೂ ಓದಿ:ಈ ಎಲೆಯನ್ನು ಜಗಿದು ತಿನ್ನಿ.. ರಕ್ತನಾಳಗಳಲ್ಲಿ ಅಂಟಿಕುಳಿತ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸುಟ್ಟು ಹಾಕುವುದು!

ವಾಸ್ತವವಾಗಿ, ಈ ಕಾಫಿಯ ಬೆಲೆ ಕ್ರೌಡ್‌ಫಂಡಿಂಗ್ ಯೋಜನೆಯ ಒಂದು ಭಾಗ. 28,000 ಹೂಡಿಕೆ ಮಾಡಿದ್ರೆ, ಹೂಡಿಕೆದಾರರಿಗೆ ಡೈರಿ ಪ್ರಮಾಣಪತ್ರ, ಕೃಷಿ ಭೇಟಿ ಮತ್ತು ಇತರ ಹಲವಾರು ಪ್ರಯೋಜನಗಳನ್ನು ಒಳಗೊಂಡಂತೆ 34 ಷೇರುಗಳನ್ನೂ ಸಹ ನೀಡುತ್ತದೆ. ಅಲ್ಲದೆ, ಹಾಲಿನ ಹೋಮ್ ಡೆಲಿವರಿ, ಫಾರ್ಮ್ ಭೇಟಿ ಸೇರಿ ಇತ್ಯಾದಿಗಳ ಮೇಲೆ ರಿಯಾಯಿತಿ ದೊರೆಯುತ್ತದೆ..

ಕೃಷಿ ಉಳಿಸುವ ಪ್ರಯತ್ನ : ಡೈರಿ ಮಾಲೀಕ ಬ್ರೈಸ್ ಕನ್ನಿಂಗ್ಹ್ಯಾಮ್ ಹೇಳುವಂತೆ.. ಇದು ಕೇವಲ ಕಾಫಿ ಅಲ್ಲ, ಕೃಷಿಯ ಭವಿಷ್ಯವನ್ನು ಉಳಿಸುವ ಪ್ರಯತ್ನ ಎನ್ನುತ್ತಾರೆ. ಈ ಯೋಜನೆಯ ಮೂಲಕ, ಅವರು 3 ಲಕ್ಷ ಪೌಂಡ್‌ಗಳನ್ನು (ಸುಮಾರು ರೂ. 3 ಕೋಟಿ) ಸಂಗ್ರಹಿಸುವ ಯೋಚನೆ ಹೊಂದಿದ್ದಾರೆ. 9 ಲಕ್ಷ ಪೌಂಡ್‌ಗಳ (ರೂ. 9 ಕೋಟಿ) ಸಾಲವನ್ನು ತೆಗೆದುಕೊಳ್ಳುತ್ತಾರೆ, ಅದರೊಂದಿಗೆ ತಮ್ಮ ಡೈರಿ ಉತ್ಪಾದನೆಯನ್ನು ದ್ವಿಗುಣಗೊಳಿಸಬಹುದು ಮತ್ತು ಅವರ ಉತ್ಪನ್ನಗಳನ್ನು ಲಂಡನ್‌ಗೆ ವರೆಗೂ ಕೊಂಡೊಯ್ಯಬಹುದು.

ಇದನ್ನೂ ಓದಿ:History: ಇಂದು ಪಾಕಿಸ್ತಾನಕ್ಕೆ ಬಹಳ ವಿಶೇಷವಾದ ದಿನ, 2007ರಲ್ಲಿ ಏನಾಯಿತು ಗೊತ್ತಾ..?

18ನೇ ಶತಮಾನದಲ್ಲಿ ಈ ಡೈರಿ ಫಾರ್ಮ್‌ನಲ್ಲಿ  ಪ್ರಸಿದ್ಧ ಸ್ಕಾಟಿಷ್ ಕವಿ ರಾಬರ್ಟ್ ಬರ್ನ್ಸ್ ಎರಡು ವರ್ಷಗಳ ಕಾಲ ಕೆಲಸ ಮಾಡುವಾಗ "ಓಲ್ಡ್ ಲ್ಯಾಂಗ್ ಸೈನೆ" ಮತ್ತು ಇತರ ಅನೇಕ ಪ್ರಸಿದ್ಧ ಕೃತಿಗಳನ್ನು ಬರೆದರು. ಬರ್ನ್ಸ್ ಅನ್ನು ಸ್ಕಾಟ್ಲೆಂಡ್ನ ರಾಷ್ಟ್ರೀಯ ಕವಿ ಎಂದು ಪರಿಗಣಿಸಲಾಗಿದೆ.  

ಈ ಯೋಜನೆಯಲ್ಲಿ ಹೂಡಿಕೆದಾರರಿಗೆ ಷೇರುಗಳನ್ನು ನೀಡಲಾಗುತ್ತಿದೆ ಆದರೆ ಅದೇ ಸಮಯದಲ್ಲಿ ಅವರ ಹಣವನ್ನು ಕಳೆದುಕೊಳ್ಳಬಹುದು ಎಂದು ಎಚ್ಚರಿಸಲಾಗಿದೆ. ಈ ಕ್ರೌಡ್‌ಫಂಡಿಂಗ್‌ನ ಉದ್ದೇಶ ಲಾಭ ಗಳಿಸುವುದಲ್ಲ, ಸುಸ್ಥಿರ ಕೃಷಿಯನ್ನು ಉತ್ತೇಜಿಸುವುದು ಎಂದು ಹೇಳಲಾಗುತ್ತದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News