ತನ್ನ ಈ ವೈಶಿಷ್ಟ್ಯವನ್ನು ತೆಗೆದು ಹಾಕಿದ TWITTER, ಇನ್ಮುಂದೆ ನೀವು ಈ ರೀತಿ TWEET ಮಾಡುವ ಹಾಗಿಲ್ಲ

ವಿಶ್ವದ ಖ್ಯಾತ ಮೈಕ್ರೋ ಬ್ಲಾಗಿಂಗ್ ಪ್ಲಾಟ್ ಫಾರಂ ಆಗಿರುವ ಟ್ವಿಟ್ಟರ್ ಇತ್ತೀಚೆಗಷ್ಟೇ ತನ್ನ ಅತ್ಯದ್ಭುತ ಸೇವೆಯೊಂದನ್ನು ತೆಗೆದು ಹಾಕಿದೆ. ಕಂಪನಿ ಮೆಸೇಜ್ ಮಾಧ್ಯಮದ ಟ್ವೀಟ್ (twitter via SMS)ಮಾಡುವ ಮೂಲಕ ಈ ಸೇವೆಯನ್ನು ಸ್ಥಗಿತಗೊಳಿಸಿದೆ.

Last Updated : Apr 29, 2020, 05:30 PM IST
ತನ್ನ ಈ ವೈಶಿಷ್ಟ್ಯವನ್ನು ತೆಗೆದು ಹಾಕಿದ TWITTER, ಇನ್ಮುಂದೆ ನೀವು ಈ ರೀತಿ TWEET ಮಾಡುವ ಹಾಗಿಲ್ಲ title=

ನವದೆಹಲಿ: ಮೈಕ್ರೋಬ್ಲಾಗಿಂಗ್ ಪ್ಲಾಟ್‌ಫಾರ್ಮ್ ಟ್ವಿಟರ್ (ಟ್ವಿಟರ್) ಇತ್ತೀಚೆಗೆ ತನ್ನ ಬಹಳ ಮುಖ್ಯವಾದ ಸೇವೆಯಿಂದನ್ನು ಬಂದ್ ಮಾಡಿದೆ.  ಹೌದು, ಕಂಪನಿ ಮೆಸೇಜ್ ಮೂಲಕ ಟ್ವೀಟ್ ಮಾಡುವ (twitter via SMS) ಸೇವೆಯನ್ನು ನಿಲ್ಲಿಸಿದೆ. ಕಂಪನಿಯು ಈ ಸೇವೆಯನ್ನು (ಟ್ವಿಟರ್ ಮೂಲಕ ಎಸ್‌ಎಂಎಸ್ ಮೂಲಕ) 2010 ರಲ್ಲಿ ಪ್ರಾರಂಭಿಸಿತು.ಈ ಸೇವೆಯನ್ನು ಬಳಸಿ ಬಳಕೆದಾರರು ಇಂಟರ್ನೆಟ್ ಸೇವೆ ಇಲ್ಲದೆ ಟ್ವೀಟ್ ಮಾಡಬಹುದಾಗಿತ್ತು. ಆದರೆ, ಈ ಸೇವೆ ಇದೀಗ ಬಂದ್ ಆದ ಕಾರಣ ಇನ್ಮುಂದೆ ಬಳಕೆದಾರರಿಗೆ ಇಂಟರ್ನೆಟ್ ಇಲ್ಲದೆ ಟ್ವೀಟ್ ಮಾಡಲು ಸಾಧ್ಯವಿಲ್ಲ. ಆದರೆ, ಕೆಲವೇ ಕೆಲ ದೇಶಗಳಲ್ಲಿ ಕಂಪನಿ ತನ್ನ ಈ ಸೇವೆಯನ್ನು ಬಂದ್ ಮಾಡಿದೆ.

ಟ್ವಿಟ್ಟರ್ ತನ್ನ ಸಪೋರ್ಟ್ ಹ್ಯಾಂಡಲ್ ಬಳಸಿ ಟ್ವೀಟ್ ಮಾಡುವ ಮೂಲಕ ತನ್ನ ಬಳಕೆದಾರರಿಗೆ ಈ ಸೇವೆ ಬಂದ್ ಮಾಡಿರುವ ಕುರಿತು ಮಾಹಿತಿ ನೀಡಿದೆ. ಮೂಲಗಳ ಪ್ರಕಾರ ಇತ್ತೀಚೆಗಷ್ಟೇ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜ್ಯಾಕ್ ಡೋರ್ಸ್ ಅವರ ಖಾತೆಯನ್ನೂ ಕೂಡ ಹ್ಯಾಕ್ ಮಾಡಲಾಗಿತ್ತು. ಟ್ವಿಟ್ಟರ್ ನ ಇದೇ ಸೇವೆಯನ್ನು ಬಳಸಿ ಹ್ಯಾಕರ್ ಈ ಕೃತ್ಯ ಎಸಗಿದ್ದ ಎನ್ನಲಾಗಿದೆ.

ಈ ಸೇವೆಯನ್ನು ನಿಲ್ಲಿಸುವುದರ ಹಿಂದೆ ಕಂಪನಿ ಕೆಲವು ಕಾರಣಗಳನ್ನು ಸಹ ನೀಡಿದೆ. ಈ ಕುರಿತು ಹೇಳಿಕೆ ನೀಡಿರುವ ಕಂಪನಿ ಈ ಸೇವೆಯನ್ನು ಬಳಸಿ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡಲಾಗುತ್ತಿದೆ ಎಂಬ ದೂರುಗಳು ಬಂದ ಹಿನ್ನೆಲೆ ಮತ್ತು ಈ ವೈಶಿಷ್ಟ್ಯ ಬಳಸುವಲ್ಲಿ ಕೆಲ ತಾಂತ್ರಿಕ ಅಡಚಣೆ ಇರುವ ಕಾರಣ ಈ ಸೇವೆಯನ್ನು ಸ್ಥಗಿತಗೊಳಿಸಲು ನಿರ್ಧರಿಸಲಾಗಿದೆ ಎಂದು ಹೇಳಿದೆ.

ಹೀಗಾಗಿ ಇನ್ಮುಂದೆ ಬಳಕೆದಾರರು ಕೇವಲ ಟ್ವಿಟ್ಟರ್ ಆಪ್ ಅಥವಾ ವೆಬ್ ಸೈಟ್ ಮೂಲಕವೇ ಟ್ವಿಟ್ಟರ್ ಬಳಕೆಯನ್ನು ಮಾಡಬಹುದು. ಈ ಸೇವೆಯಡಿ ಬಳಕೆದಾರರು SMS ರೀತಿಯೇ 140 ಅಕ್ಷರಗಳ ಟ್ವೀಟ್ ಮಾಡುತ್ತಿದ್ದರು. ಬಳಕೆದಾರರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಂಪನಿ ಈ ಕ್ರಮ ಕೈಗೊಂಡಿದೆ ಹಾಗೂ ಇದರಿಂದ ಬಳಕೆದಾರರ ಸುರಕ್ಷತೆಯೂ ಕೂಡ ಹೆಚ್ಚಾಗಲಿದೆ.

Trending News