ಪ್ರತಿದಿನ ಒಂದು ಕಪ್ ಕಾಫಿ ಕುಡಿದರೆ.. ಈ ಸಮಸ್ಯೆ ಎಂದಿಗೂ ಬರುವುದಿಲ್ಲ

Coffee Health Benefits: ಕಳಪೆ ನಿದ್ರೆ ಮತ್ತು ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬಂದರೆ ನಮ್ಮ ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿರಬಹುದು ಎಂದು ಕೆಲವು ಸಂಶೋಧನೆಗಳು ತೋರಿಸುತ್ತವೆ. 

Written by - Chetana Devarmani | Last Updated : Jul 6, 2024, 01:38 PM IST
  • ಮೆಗ್ನೀಸಿಯಮ್ ಕೊರತೆಯ ಲಕ್ಷಣಗಳು
  • ಮೆಗ್ನೀಸಿಯಮ್ ಕೊರತೆ ನೀಗಿಸುವ ಆಹಾರ
  • ಪ್ರತಿದಿನ ಒಂದು ಕಪ್ ಕಾಫಿ ಕುಡಿಯುವುದರ ಲಾಭ
ಪ್ರತಿದಿನ ಒಂದು ಕಪ್ ಕಾಫಿ ಕುಡಿದರೆ.. ಈ ಸಮಸ್ಯೆ ಎಂದಿಗೂ ಬರುವುದಿಲ್ಲ title=

Coffee Health Benefits: ಕಳಪೆ ನಿದ್ರೆ ಮತ್ತು ಹಸಿವಿನ ಕೊರತೆಯಂತಹ ಲಕ್ಷಣಗಳು ಕಂಡುಬಂದರೆ ನಮ್ಮ ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿರಬಹುದು ಎಂದು ಕೆಲವು ಸಂಶೋಧನೆಗಳು ತೋರಿಸುತ್ತವೆ. ಇದಕ್ಕಾಗಿ ಸರಿಯಾದ ಸಮಯಕ್ಕೆ ಉತ್ತಮ ಪೌಷ್ಠಿಕ ಆಹಾರ ಸೇವಿಸುವುದು ಉತ್ತಮ ಎನ್ನುತ್ತಾರೆ ತಜ್ಞರು. ದೇಹದಲ್ಲಿ ಮೆಗ್ನೀಸಿಯಮ್ ಹೆಚ್ಚಿಸಲು ಯಾವ ರೀತಿಯ ಆಹಾರವನ್ನು ಸೇವಿಸಬೇಕು ಎಂದು ಈಗ ನೋಡೋಣ.

ನಮ್ಮ ದೇಹವು ಫಿಟ್ ಆಗಿರಬೇಕಾದರೆ ಮೆಗ್ನೀಸಿಯಮ್ ದೇಹದಲ್ಲಿ ಹೆಚ್ಚಿರಬೇಕು. ಕಾರ್ಬೋಹೈಡ್ರೇಟ್‌ಗಳು, ಕೊಬ್ಬು ಮತ್ತು ಪ್ರೋಟೀನ್‌ಗಳಿಂದ ಶಕ್ತಿಯನ್ನು ಪಡೆಯುವಲ್ಲಿ ಮೆಗ್ನೀಸಿಯಮ್ ಮುಖ್ಯವಾಗಿ ಉಪಯುಕ್ತವಾಗಿದೆ. ಇದು ಉತ್ತಮ ಶಕ್ತಿ ಮತ್ತು ಉತ್ತಮ ನಿದ್ರೆ ನೀಡುತ್ತದೆ. ರಕ್ತದಲ್ಲಿನ ಸಕ್ಕರೆ ಮತ್ತು ಹಾರ್ಮೋನುಗಳನ್ನು ನಿಯಂತ್ರಿಸುತ್ತದೆ. 

ಇದನ್ನೂ ಓದಿ : ಒಂದು ತಿಂಗಳು ಈರುಳ್ಳಿ ತಿನ್ನದಿದ್ದರೆ ಏನಾಗುತ್ತದೆ? ದೇಹದಲ್ಲಿ ಆಗುವ ಬದಲಾವಣೆಗಳೇನು ಗೊತ್ತಾ? 

ಅಸಮರ್ಪಕ ಮೆಗ್ನೀಸಿಯಮ್ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಮಾನವ ದೇಹದಲ್ಲಿ ಮೆಗ್ನೀಸಿಯಮ್ ಕೊರತೆಯಿದ್ದರೆ, ಹಸಿವು ಇರುವುದಿಲ್ಲ. ವಾಕರಿಕೆ ಮತ್ತು ವಾಂತಿ ಸಂಭವಿಸಬಹುದು. ಹೃದಯ ಬಡಿತದಲ್ಲಿ ಏರುಪೇರು ಕಂಡುಬರುತ್ತದೆ. ಮಸುಕಾದ ದೃಷ್ಟಿ ಮತ್ತು ಸ್ನಾಯು ನೋವು ಜೊತೆಗೆ, ಒತ್ತಡ ಹೆಚ್ಚಾಗುತ್ತದೆ. ನಿದ್ರೆ ಸರಿಯಾಗಿಲ್ಲ, ಅಧಿಕ ಬಿಪಿ ಬರುತ್ತದೆ. .

ದೇಹದಲ್ಲಿ ಮೆಗ್ನೀಸಿಯಮ್ ಅನ್ನು ಹೆಚ್ಚಿಸಬೇಕಾದರೆ ಹಸಿರು ತರಕಾರಿಗಳು, ಆವಕಾಡೊ, ಬಾಳೆಹಣ್ಣು, ರಾಸ್ಪ್ಬೆರಿ ಮತ್ತು ಅಂಜೂರದಂತಹ ಹಣ್ಣುಗಳನ್ನು ಹೆಚ್ಚು ತಿನ್ನಬೇಕು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಇವುಗಳ ಹೊರತಾಗಿ ಬ್ರೊಕೊಲಿ, ಎಲೆಕೋಸು, ಹಸಿರು ಬಟಾಣಿ ಮತ್ತು ಮೊಗ್ಗುಗಳಲ್ಲಿಯೂ ಮೆಗ್ನೀಸಿಯಮ್ ಕಂಡುಬರುತ್ತದೆ. ಮೆಗ್ನೀಸಿಯಮ್ ಕಂದು ಅಕ್ಕಿ, ಓಟ್ಸ್ ನಲ್ಲಿ ಕಂಡುಬರುತ್ತದೆ. 

ಒಂದು ಕಪ್ ಕಾಫಿ ಕುಡಿಯುವುದು ಅಥವಾ ಡಾರ್ಕ್ ಚಾಕೊಲೇಟ್ ತಿನ್ನುವುದು ದೇಹದಲ್ಲಿ ಮೆಗ್ನೀಸಿಯಮ್ ಅನ್ನು ತಕ್ಷಣವೇ ಉತ್ಪಾದಿಸಲು ಉತ್ತಮ ಮಾರ್ಗವಾಗಿದೆ ಎಂದು ತಜ್ಞರು ಹೇಳುತ್ತಾರೆ. ಮೆಗ್ನೀಸಿಯಮ್ ಕೊರತೆಯ ಬಗ್ಗೆ ತಕ್ಷಣವೇ ಕಾಳಜಿ ವಹಿಸದಿದ್ದರೆ ಅನಾರೋಗ್ಯಕ್ಕೆ ಕಾರಣವಾಗಬಹುದು ಎಂದು ವೈದ್ಯರು ಹೇಳುತ್ತಾರೆ. ಸಬ್ಜಾ ಸೀಡ್ಸ್, ಪ್ರೊಟೀನ್, ಕ್ಯಾಲ್ಸಿಯಂ, ಫೈಬರ್, ಆ್ಯಂಟಿಆಕ್ಸಿಡೆಂಟ್, ಒಮೆಗಾ 3 ಫ್ಯಾಟಿ ಆಸಿಡ್ ಇರುವ ಆಹಾರ ಪದಾರ್ಥಗಳನ್ನು ಹೆಚ್ಚು ಸೇವಿಸಬೇಕು.

ಇದನ್ನೂ ಓದಿ : ಮಧುಮೇಹಿಗಳು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ನೀರು ಕುಡಿದರೆ ಸಾಕು.. ಬ್ಲಡ್‌ ಶುಗರ್‌ ದಿನವಿಡಿ ಹೆಚ್ಚಾಗಲ್ಲ !

ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ. ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತಪ್ಪದೇ ತೆಗೆದುಕೊಳ್ಳಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News