Allu Arjun Arrest Video: ಸಂಧ್ಯಾ ಥಿಯೇಟರ್ ಕಾಲ್ತುಳಿತ ಪ್ರಕರಣದಲ್ಲಿ ನಟ ಅಲ್ಲು ಅರ್ಜುನ್ ನನ್ನು ಚಿಕ್ಕಡಪಲ್ಲಿ ಪೊಲೀಸರು ಬಂಧಿಸಿದ್ದಾರೆ. ಡಿಸೆಂಬರ್ 4ರಂದು ಪ್ರಿಮಿಯರ್ ಶೋ ವೇಳೆ ನೂಕುನುಗ್ಗಲು ಉಂಟಾಗಿದ್ದು ಘಟನೆಯಲ್ಲಿ ರೇವತಿ ಎಂಬ ಮಹಿಳೆ ಸಾವನ್ನಪ್ಪಿದ್ದಾರೆ. ಸದ್ಯ ಆಕೆಯ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಈ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದಾರೆ. ತನಿಖೆಯ ಭಾಗವಾಗಿ ಚಿಕ್ಕಡಪಲ್ಲಿ ಪೊಲೀಸರು ಅಲ್ಲು ಅರ್ಜುನ್ ಮನೆಗೆ ತೆರಳಿ ಬಂಧಿಸಿದ್ದಾರೆ.
ಅಲ್ಲು ಅರ್ಜುನ್ ಬಂಧನದ ವೇಳೆ ಹೈಡ್ರಾಮಾ ನಡೆದಿದೆ. ಪೊಲೀಸರ ವರ್ತನೆಗೆ ಅಸಹನೆ ವ್ಯಕ್ತಪಡಿಸಿದ ಅಲ್ಲು ಅರ್ಜುನ್, ಬಟ್ಟೆ ಬದಲಾಯಿಸಲೂ ಸಮಯ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಪೊಲೀಸರು ಮನೆ ಒಳಗೆ ನುಗ್ಗಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ನೇರವಾಗಿ ಮನೆ ಒಳಗೆ ಬಂದಿದ್ದಾರೆ. ಆದರೆ ಸೀದಾ ಬೆಡ್ ರೂಮ್ಗೆ ನುಗ್ಗಿರುವುದು ಅಲ್ಲು ಬೇಸರಕ್ಕೆ ಕಾರಣವಾಗಿದೆ. ಇದು ಒಳ್ಳೆಯದಲ್ಲ ಎಂದು ಅಲ್ಲು ಅರ್ಜುನ್ ಹೇಳಿದ್ದಾರೆ.
ಇದನ್ನೂ ಓದಿ: ನಾಗ ಚೈತನ್ಯ-ಶೋಭಿತಾ ವಿಚ್ಛೇದನ ಒಪ್ಪಂದ? ಅಕ್ಕಿನೇನಿ ಕುಟುಂಬದ ಅಸಲಿ ಮುಖ ಬಯಲು!?
ಅರ್ಜುನ್ ಜೊತೆ ಅಲ್ಲು ಅರವಿಂದ್ ಕೂಡ ಪೊಲೀಸ್ ವಾಹನ ಹತ್ತಿದ್ದಾರೆ. ಈ ವಿಚಾರದಲ್ಲಿ ಏನೇ ನಡೆದರೂ ಒಳ್ಳೆಯದು ಅಥವಾ ಕೆಟ್ಟದ್ದು ನನ್ನದೇ ಎಂದು ಅಲ್ಲು ಅರ್ಜುನ್ ತಂದೆಯನ್ನು ಪೊಲೀಸ್ ವಾಹನದಿಂದ ಇಳಿಸಿದ್ದಾರೆ. ಪತ್ನಿಗೆ ಮುತ್ತಿಟ್ಟು ಅಲ್ಲು ಅರ್ಜುನ್ ಪೊಲೀಸರೊಂದಿಗೆ ತೆರಳಿದ್ದಾರೆ.
ಅಲ್ಲು ಅರ್ಜುನ್ ಬಂಧನದ ಬಳಿಕ ಪೊಲೀಸರು ಚಿಕ್ಕಡಪಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ. ಸದ್ಯ ಅಲ್ಲು ಅರ್ಜುನ್ ಅವರಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
VIDEO | Tollywood actor Allu Arjun, who was arrested by Hyderabad Police earlier today, produced in Nampally Court in connection with the death of a woman during the premiere of his latest flick 'Pushpa 2: The Rise'. pic.twitter.com/y1EQIWF1bY
— Press Trust of India (@PTI_News) December 13, 2024
ಈ ಘಟನೆ ಬಗ್ಗೆ ಅಲ್ಲು ಅರ್ಜುನ್ ಪ್ರತಿಕ್ರಿಯಿಸಿದ್ದರು. ರೇವತಿ ಕುಟುಂಬಕ್ಕೆ ಅಲ್ಲು ಅರ್ಜುನ್ ಸಾಂತ್ವನ ಹೇಳಿದ್ದರು. ಸಂತ್ರಸ್ತೆಯ ಕುಟುಂಬಕ್ಕೆ ತಮ್ಮ ಪರವಾಗಿ 25 ಲಕ್ಷ ರೂಪಾಯಿ ನೀಡುವುದಾಗಿ ಹೇಳಿದ್ದರು. ಆದರೆ ಸಂಧ್ಯಾ ಥಿಯೇಟರ್ ಮ್ಯಾನೇಜ್ಮೆಂಟ್, ಅಲ್ಲು ಅರ್ಜುನ್ ಮತ್ತು ಅಲ್ಲು ಅರ್ಜುನ್ ವೈಯಕ್ತಿಕ ಭದ್ರತಾ ಸಿಬ್ಬಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಕಾಲ್ತುಳಿತಕ್ಕೆ ಥಿಯೇಟರ್ ಆಡಳಿತವೇ ಕಾರಣ ಎಂದು ಪೊಲೀಸರು ಆರೋಪಿಸಿದ್ದಾರೆ. ಪೊಲೀಸರು ಅಲ್ಲು ಅರ್ಜುನ್ನನ್ನು ಆರೋಪಿಯನ್ನಾಗಿ ಸೇರಿಸಿದ್ದಾರೆ. ಈ ಪ್ರಕರಣದಲ್ಲಿ ಈಗಾಗಲೇ ಸಂಧ್ಯಾ ಥಿಯೇಟರ್ ಮಾಲೀಕನ ವಿರುದ್ಧ ಪ್ರಕರಣ ದಾಖಲಾಗಿದ್ದು, ಅವರನ್ನು ಬಂಧಿಸಲಾಗಿದೆ.
If a Superstar can be arrested for 'Negligence' then why not Minister for the same!?
If Allu Arjun can be arrested for Negligence which resulted to 1 De@th, then why not Ashwini Vaishnaw for 100s of De@ths? #AlluArjunArrest #AlluArjun pic.twitter.com/UFzIb82uvE
— Veena Jain (@DrJain21) December 13, 2024
ಇದನ್ನೂ ಓದಿ: Allu Arjun Arrest : ಅಲ್ಲು ಅರ್ಜುನ್ಗೆ 14 ದಿನ ನ್ಯಾಯಾಂಗ ಬಂಧನ..!
ಇತ್ತೀಚಿನ ಅಪ್ಡೇಟ್ ಸುದ್ದಿಗಳನ್ನು ವೀಕ್ಷಿಸಲು ನಮ್ಮ Youtube Link - https://www.youtube.com/@ZeeKannadaNews/featured ಸಬ್ ಸ್ಕ್ರೈಬ್ಆಗಿರಿ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.