ನವದೆಹಲಿ: ಕರೋನಾವೈರಸ್ ಕೋವಿಡ್-19 (Covid-19) ಸಾಂಕ್ರಾಮಿಕದ ಮೊದಲ ಐದು ತಿಂಗಳಲ್ಲಿ ಪ್ರಪಂಚದಾದ್ಯಂತ ಪ್ರಯಾಣವನ್ನು ಸ್ಥಗಿತಗೊಳಿಸಲಾಗಿದ್ದು ಟ್ರಾವೆಲ್ ಕಂಪನಿಗಳ ಮೇಲೆ ಸಾಕಷ್ಟು ಪರಿಣಾಮ ಬೀರಿವೆ. ಭಾರತದಲ್ಲಿ ಲಾಕ್ಡೌನ್ (Lockdown) ಪರಿಣಾಮಗಳು ನಿಧಾನವಾಗಿ ಮುನ್ನಲೆಗೆ ಬರುತ್ತಿದ್ದು ಕರೋನಾವೈರಸ್ ಸಾಂಕ್ರಾಮಿಕದಿಂದ ಎದುರಾದ ನಷ್ಟದ ಹಿನ್ನೆಲೆಯಲ್ಲಿ ಈಗ ಪ್ರಯಾಣ ಸಂಬಂಧಿತ ಆನ್ಲೈನ್ ಸೇವೆಗಳ ಕಂಪನಿಯಾದ ಮೇಕ್ಮೈಟ್ರಿಪ್ (MakeMyTrip) 350 ಉದ್ಯೋಗಿಗಳನ್ನು ವಜಾಗೊಳಿಸಿದೆ.
ಅಮೆಜಾನ್ ಇಂಡಿಯಾದಿಂದ 50 ಸಾವಿರ ಜನರಿಗೆ ತಾತ್ಕಾಲಿಕ ಉದ್ಯೋಗಾವಕಾಶ
ಕೆಲಸದಿಂದ ತೆಗೆದು ಹಾಕಿದ ಹೆಚ್ಚಿನ ಉದ್ಯೋಗಿಗಳು ಅಂತರರಾಷ್ಟ್ರೀಯ ರಜಾದಿನಗಳು ಮತ್ತು ಸಂಬಂಧಿತ ಸೇವೆಗಳಲ್ಲಿ ಭಾಗಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ಪರಿಸ್ಥಿತಿ ಅನಿಶ್ಚಿತವಾಗಿದೆ ಆದರೆ ಕಂಪನಿಯ ಮೇಲೆ ದೀರ್ಘಕಾಲದ ಕೋವಿಡ್ -19 ಬಿಕ್ಕಟ್ಟು ಇರುವುದು ಖಚಿತ ಎಂದು ಮೇಕ್ಮೈಟ್ರಿಪ್ ಗ್ರೂಪ್ ಕಾರ್ಯನಿರ್ವಾಹಕ ಅಧ್ಯಕ್ಷ ಮತ್ತು ಸ್ಥಾಪಕ ಡೀಪ್ ಕಲ್ರಾ ಮತ್ತು ಗ್ರೂಪ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ರಾಜೇಶ್ ಮಾಗೊ ನೌಕರರಿಗೆ ನೀಡಿದ ಇಮೇಲ್ನಲ್ಲಿ ತಿಳಿಸಿದ್ದಾರೆ.
ಕೊರೋನಾವೈರಸ್ (Coronavirus) ಕೋವಿಡ್ -19 ಸಾಂಕ್ರಾಮಿಕ ರೋಗದ ನಂತರ ಪ್ರಯಾಣ ಯಾವಾಗ ಸುರಕ್ಷಿತವಾಗಿರುತ್ತದೆ/ ಸಾಮಾನ್ಯ ಸ್ಥಿತಿಗೆ ಮರಳುತ್ತದೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಎರಡು ತಿಂಗಳಲ್ಲಿ ನಾವು ಅದರ ಪರಿಣಾಮವನ್ನು ಸೂಕ್ಷ್ಮವಾಗಿ ವಿಶ್ಲೇಷಿಸಿದ್ದೇವೆ ಮತ್ತು ವ್ಯವಹಾರದ ಬಗ್ಗೆ ಯೋಚಿಸಲು ಸಾಕಷ್ಟು ಸಮಯವನ್ನು ಕಳೆದಿದ್ದೇವೆ. ಕೆಲವು ವ್ಯವಹಾರಗಳು ಆಳವಾಗಿ ಪರಿಣಾಮ ಬೀರುತ್ತವೆ ಮತ್ತು ಅದು ಚೇತರಿಸಿಕೊಳ್ಳಲು ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ ಎಂಬುದು ಸ್ಪಷ್ಟವಾಗುತ್ತದೆ ಎಂದು ಅವರು ಹೇಳಿದ್ದಾರೆ.
ಹಳ್ಳಿಗಳಿಗೆ ಹಿಂತಿರುಗುವ ವಲಸೆ ಕಾರ್ಮಿಕರಿಗೆ ಮನ್ರೇಗಾ ಯೋಜನೆಯಡಿ ಕೆಲಸ ಕೊಡಿ: ಯಡಿಯೂರಪ್ಪ
ಈ ಬಗ್ಗೆ ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಕಂಪನಿಯ ವಕ್ತಾರರು ಈ ವಜಾಗೊಳಿಸುವಿಕೆಯಿಂದ 350 ಉದ್ಯೋಗಿಗಳಿಗೆ ತೊಂದರೆಯಾಗಿದೆ ಎಂದು ಮಾಹಿತಿ ನೀಡಿದರು.