ದೆಹಲಿಯಲ್ಲಿ COVID 19 ಹೆಚ್ಚಾಗುತ್ತಿರುವದರಿಂದ ಸ್ಮಶಾನಕ್ಕೆ ಜಾಗಹುಡುಕಿ ಎಂದ ಡಿಡಿಎಂಎ

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು 'COVID 19 ವೈರಸ್ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಹೆಚ್ಚುವರಿಯಾಗಿ ಹಾಸಿಗೆಗಳನ್ನು ಸಿದ್ದಮಾಡಿ ಇಟ್ಟುಕೊಂಡಿರಿ. ಜೊತೆಗೆ COVID 19 ವೈರಸ್ ತಗುಲಿ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಕೊರೊನಾಕ್ಕೆ ಬಲಿಯಾದವರ ಶವಸಂಸ್ಕಾರಕ್ಕಾಗಿ ಜಾಗಗಳನ್ನು ಗುರುತಿಸಿ' ಎಂದು ಜಿಲ್ಲಾಡಳಿಗಳಿಗೆ ಪತ್ರ ಬರೆದಿದೆ.

Last Updated : Jun 2, 2020, 10:00 AM IST
ದೆಹಲಿಯಲ್ಲಿ COVID 19 ಹೆಚ್ಚಾಗುತ್ತಿರುವದರಿಂದ ಸ್ಮಶಾನಕ್ಕೆ ಜಾಗಹುಡುಕಿ ಎಂದ ಡಿಡಿಎಂಎ title=

ನವದೆಹಲಿ: COVID 19 ವೈರಸ್ ನಿಂದ ದೆಹಲಿಯಲ್ಲಿ ಸಾವಿನ‌ ಪ್ರಮಾಣ ಹೆಚ್ಚಾಗುತ್ತಾ? ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ದೆಹಲಿಯ ಜಿಲ್ಲಾಡಳಿತಗಳಿಗೆ ಬರೆದಿರುವ ಪತ್ರ ಇಂಥದೊಂದು ಅನುಮಾನವನ್ನು ಹುಟ್ಟುಹಾಕಿದೆ.

ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು 'ಕೋವಿಡ್-19 (Covid-19)  ವೈರಸ್ ಪೀಡಿತರ ಸಂಖ್ಯೆ ಇನ್ನೂ ಹೆಚ್ಚಾಗುವ ಸಾಧ್ಯತೆ ಇದೆ. ಆದುದರಿಂದ ಹೆಚ್ಚುವರಿಯಾಗಿ ಹಾಸಿಗೆಗಳನ್ನು ಸಿದ್ದಮಾಡಿ ಇಟ್ಟುಕೊಂಡಿರಿ. ಜೊತೆಗೆ COVID 19 ವೈರಸ್ ತಗುಲಿ ಸಾವನ್ನಪ್ಪುವವರ ಸಂಖ್ಯೆ ಕೂಡ ಹೆಚ್ಚಾಗಲಿದೆ. ಕೊರೊನಾಕ್ಕೆ ಬಲಿಯಾದವರ ಶವಸಂಸ್ಕಾರಕ್ಕಾಗಿ ಜಾಗಗಳನ್ನು ಗುರುತಿಸಿ' ಎಂದು ಜಿಲ್ಲಾಡಳಿಗಳಿಗೆ ಪತ್ರ ಬರೆದಿದೆ.

ದೇಶದಲ್ಲಿ ಅತಿಹೆಚ್ಚು COVID 19 ಪ್ರಕರಣಗಳು ಇರುವ ರಾಜ್ಯಗಳ ಪೈಕಿ‌ ಮಹಾರಾಷ್ಟ್ರ, ಗುಜರಾತ್ ಮತ್ತು ತಮಿಳುನಾಡಿನ ಬಳಿಕ ದೆಹಲಿ ನಾಲ್ಕನೇ ಸ್ಥಾನದಲ್ಲಿದೆ. ರಾಷ್ಟ್ರ ರಾಜಧಾನಿಯೂ ಅತಿ ಚಿಕ್ಕ ರಾಜ್ಯವೂ ಆದ ದೆಹಲಿಯ COVID 19 ವೈರಸ್ ಪೀಡಿತರ ಸಂಖ್ಯೆ ದೇಶದ ಅತಿದೊಡ್ಡ ರಾಜ್ಯವಾದ ಉತ್ತರ ಪ್ರದೇಶಕ್ಕಿಂತಲೂ ಹೆಚ್ಚಾಗಿದೆ. ಈ‌ ಹಿನ್ನೆಲೆಯಲ್ಲಿ ಆತಂಕ ವ್ಯಕ್ತಪಡಿಸಿರುವ ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರವು ಹೆಚ್ಚುವರಿಯಾಗಿ ಹಾಸಿಗೆಗಳನ್ನು ಸಿದ್ದಪಡಿಸಿ ಇಟ್ಟುಕೊಂಡಿರುವ ಹಾಗೂ ಶವಸಂಸ್ಕಾರಕ್ಕಾಗಿ ಜಾಗಗಳನ್ನು ಗುರುತಿಸುವ ಕೆಲಸವನ್ನು ಆದ್ಯತೆ ಮೇರೆಗೆ ಮಾಡಿ ಎಂದು ಪತ್ರದಲ್ಲಿ ತಿಳಿಸಿದೆ.

ಇದಲ್ಲದೆ COVID 19 ವೈರಸ್ ಸಂಖ್ಯೆ ಇನ್ನೂ‌ ಹೆಚ್ಚಾಗುವುದರಿಂದ ವೈರಸ್ ಪೀಡಿರನ್ನು ಕ್ವಾರಂಟೈನ್ ಮಾಡಲು ಹಾಗೂ ಚಿಕಿತ್ಸೆ ನೀಡಲು ಸಮುದಾಯ ಭವನ,  ಸಮುಚ್ಛಯಗಳು, ಕ್ರೀಡಾಂಗಣಗಳು ಮತ್ತು ಬ್ಯಾಂಕ್ವೆಟ್ ಹಾಲ್ ಗಳನ್ನು ಹುಡುಕಿ ಅವುಗಳನ್ನು COVID 19 ಕೇಂದ್ರವನ್ನಾಗಿ ಪರಿವರ್ತಿಸಿ. ಜೊತೆಗೆ COVID 19 ವೈರಸ್ ತಗುಲಿ ಮೃತಪಟ್ಟವರನ್ನು ಶವಸಂಸ್ಕಾರ ಮಾಡಲು ಜನವಾಸ ಮಾಡದೇ ಇರುವ ದೂರದ ಜಾಗಗಳನ್ನು ಕೂಡ ಪತ್ತೆ ಮಾಡಿ ಎಂದು ಹೇಳಿದೆ.

ಜಾಗತಿಕ ಪಿಡುಗಾಗಿ ಪರಿಣಮಿಸಿರುವ ಕೊರೋನಾವೈರಸ್  (Coronavirus) COVID 19 ವೈರಸ್ ಮಹಾಮಾರಿ ಈಗಾಗಲೇ ರಾಷ್ಟ್ರ ರಾಜಧಾನಿ ದೆಹಲಿಯನ್ನು ಹಿಂಡಿ ಹಿಪ್ಪೆ ಮಾಡುತ್ತಿವೆ. ಜೂನ್ ಮತ್ತು ಜುಲೈ ತಿಂಗಳಲ್ಲಿ ತಾರಕ್ಕೇರಲಿದೆ ಎಂದು  ತಿಂಗಳ ಹಿಂದೆಯೇ ದೆಹಲಿ ಸರ್ಕಾರ ರಚಿಸಿದ್ದ COVID 19 ವೈರಸ್ ರೆಸ್ಪಾನ್ಸ್ ಕಮಿಟಿಯ ಮುಖ್ಯಸ್ಥರಾದ  ಡಾ. ಎಸ್.ಕೆ. ಸರೈನ್ ಅಭಿಪ್ರಾಯಪಟ್ಟಿದ್ದರು‌. ಅವರ ಭವಿಷ್ಯ ಈಗ ನಿಜವಾಗುವಂತೆ ಕಾಣುತ್ತಿದೆ.

ಪ್ರತಿದಿನ ದೆಹಲಿಯಲ್ಲಿ 400 ರಿಂದ 500 ಮಂದಿ COVID 19 ವೈರಸ್ ಪೀಡಿತರಾದರೆ ಅವರೆಲ್ಲರಿಗೂ ಸೂಕ್ತ ಚಿಕಿತ್ಸೆ ಕೊಡಿಸುವುದು, ಕ್ವಾರಂಟೈನ್ (Quarantine) ಮಾಡುವುದು, ಐಸೋಲೇಷನ್ ಮಾಡುವುದು ದೆಹಲಿ ಸರ್ಕಾರಕ್ಕೆ ಬಹಳ ಕಷ್ಟವಾಗಲಿದೆ. ಹಾಲಿ ರೋಗಿಗಳ ಹಾರೈಕೆ ಮಾಡುವಷ್ಟರಲ್ಲಿ‌ ಹೊಸ ರೋಗಿಗಳು ಬಂದು ಇಡೀ‌ ದೆಹಲಿಯ ಆರೋಗ್ಯ ಸೇವಾ ಸಿಬ್ಬಂದಿ ಹೈರಾಣರಾಗುತ್ತಾರೆ. ಪರಿಸ್ಥಿತಿ ಕೈ ಮೀರುವ ಹಂತ ತಲುಪಲಿದೆ ಎಂದು ಡಾ. ಸರೈನ್ ದೆಹಲಿ ಸರ್ಕಾರವನ್ನು ಎಚ್ಚರಿಸಿದ್ದರು.

ರಾಷ್ಟ್ರ ರಾಜಧಾನಿ ದೆಹಲಿಗೆ ಹೊರಗಿನಿಂದ ಬರುವವರು ಹೆಚ್ಚಾಗಿರುವುದರಿಂದ ಹಾಗೂ ಅವರಿಂದ COVID 19 ವೈರಸ್ ಹರಡುವ ಸಾಧ್ಯತೆಯೂ ಹೆಚ್ಚಿರುವುದರಿಂದ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ದೆಹಲಿಯ ಬಾರ್ಡರ್ ಗಳನ್ನು ಸೀಲ್ ಡೌನ್ ಮಾಡಿದ್ದಾರೆ. ಆದರೆ ಇದಕ್ಕೆ ಪೂರ್ವ ದೆಹಲಿಯ ಬಿಜೆಪಿ ಸಂಸದ ಗೌತಮ್ ಗಂಭೀರ್ ವಿರೋಧ ವ್ಯಕ್ತಪಡಿಸಿದ್ದಾರೆ.
 

Trending News