ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ ಉಪರಾಜ್ಯಪಾಲರು ಆಗಿರುವ ದೆಹಲಿ ಡಿಸಾಸ್ಟರ್ ಮ್ಯಾನೇಜ್ಮೆಂಟ್ ಅಥಾರಿಟಿ(DDMA) ಅಧ್ಯಕ್ಷರು ಆಗಿರುವ ಅನಿಲ್ ಬೈಜಲ್ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಅವರ ನಿರ್ಣಯವನ್ನು ತಿರುವಿ ಹಾಕಿದ್ದಾರೆ. ಇದಕ್ಕೂ ಮೊದಲು ದೆಹಲಿ ಸರ್ಕಾರದ ನಿರ್ಣಯವನ್ನು ಪ್ರಕಟಿಸಿದ್ದ ಕೆಜ್ರಿವಾಲ್, ದೆಹಲಿ ರಾಜ್ಯಸರ್ಕಾರದ ಆಸ್ಪತ್ರೆಗಳು ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೆಹಲಿ ನಿವಾಸಿಗಳಾಗಿರದ ರೋಗಿಗಳ ಚಿಕಿತ್ಸೆ ನಡೆಸಲಾಗುವುದಿಲ್ಲ ಎಂದಿದ್ದರು. ಈ ನಿರ್ಣಯಕ್ಕೆ ತಡೆ ನೀಡಿರುವ ಉಪರಾಜ್ಯಪಾಲರು ದೆಹಲಿಯ ಆಸ್ಪತ್ರೆಗಳಿಗೆ ಬರುವ ಯಾವುದೇ ರೋಗಿಗಳಿಗೆ ಚಿಕಿತ್ಸೆ ನಿರಾಕರಿಸುವಂತಿಲ್ಲ ಮತ್ತು ಎಲ್ಲರಿಗೂ ಚಿಕಿತ್ಸೆ ಒದಗಿಸಬೇಕು ಎಂದು ಹೇಳಿದ್ದಾರೆ.
ಇದಕ್ಕೂ ಮೊದಲು ಹೇಳಿಕೆ ಪ್ರಕಟಿಸಿದ್ದ ರಾಜ್ಯ ಸರ್ಕಾರ, ದೆಹಲಿ ಹೊರಗಿನಿಂದ ಬರುವ ರೋಗಿಗಳ ಚಿಕಿತ್ಸೆ ಇನ್ಮುಂದೆ ದೆಹಲಿಯ ಆಸ್ಪತ್ರೆಗಳಲ್ಲಿ ನಡೆಯುವುದಿಲ್ಲ ಮತ್ತು ಈ ಆಸ್ಪತ್ರೆಗಳಲ್ಲಿ ದೆಹಲಿ ಸ್ಥಳೀಯ ಜನರಿಗೆ ಮಾತ್ರ ಚಿಕಿತ್ಸೆ ನೀಡಲಾಗುವುದು ಎಂದು ಹೇಳಿತ್ತು. ಆದರೆ, ಕೇಂದ್ರ ಸರ್ಕಾರದ ಆಧೀನಕ್ಕೆ ಒಳಪಡುವ AIIMS ಸೇರಿದಂತೆ ಇತರೆ ಆಸ್ಪತ್ರೆಗಳಲ್ಲಿ ಯಾರು ಬೇಕಾದರೂ ಚಿಕಿತ್ಸೆ ಪಡೆಯಬಹುದು ಎಂದು ಸರ್ಕಾರ ಹೇಳಿತ್ತು.
ಸರ್ಕಾರದ ಈ ನಿರ್ಣಯವನ್ನು ತಿರುಚಿರುವ ದೆಹಲಿ ರಾಜ್ಯಪಾಲರಾಗಿರುವ ಅನಿಲ್ ಬೈಜಲ್, ದೆಹಲಿ ನಿವಾಸಿಗಳಾಗಿಲ್ಲ ಎಂಬ ಒಂದೇ ಒಂದು ಕಾರಣಕ್ಕೆ ಯಾವುದೇ ಓರ್ವ ರೋಗಿಯ ಚಿಕಿತ್ಸೆಯನ್ನು ದೆಹಲಿಯ ಆಸ್ಪತ್ರೆಗಳು ನಿರಾಕರಿಸುವಂತಿಲ್ಲ ಮತ್ತು ಅಧಿಕಾರಿಗಳು ಇದನ್ನು ಸುನಿಶ್ಚಿತಗೊಳಿಸಬೇಕು ಎಂದು ಆದೇಶ ನೀಡಿದ್ದಾರೆ.
CM ಅರವಿಂದ್ ಕೆಜ್ರಿವಾಲ್ ಪ್ರತಿಕ್ರಿಯೆ ಏನು?
ದೆಹಲಿ ರಾಜ್ಯಪಾಲರಾಗಿರುವ ಅನಿಲ್ ಬೈಜಲ್ ಹೊರಡಿಸಿರುವ ಆದೇಶಕ್ಕೆ ದೆಹಲಿ CM ಅರವಿಂದ್ ಕೆಜ್ರಿವಾಲ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಕುರಿತು ಟ್ವೀಟ್ ಮಾಡುವ ಮೂಲಕ ಹೇಳಿಕೆ ನೀಡಿರುವ ಅವರು, LG ಸಾಹೇಬರ ಆದೇಶ ದೆಹಲಿಯ ಜನರಿಗೆ ದೊಡ್ಡ ಸಮಸ್ಯೆ ಹಾಗೂ ಸವಾಲನ್ನು ತಂದೊಡ್ಡಿದೆ. ದೇಶದ ವಿವಿಧ ಭಾಗಗಳಿಂದ ಬರುವ ಕೊರೊನಾ ರೋಗಿಗಳಿಗೆ ಚಿಕಿತ್ಸೆಯ ವ್ಯವಸ್ಥೆ ಮಾಡುವುದು ಒಂದು ಸವಾಲಾಗಲಿದೆ ಎಂದಿದ್ದಾರೆ.
ಅಷ್ಟೇ ಅಲ್ಲ ಇಡೀ ದೇಶಾದ್ಯಂತ ಇರುವ ಕೊರೊನಾ ರೋಗಿಗಳ ಚಿಕಿತ್ಸೆ ಹಾಗೂ ಸೇವೆ ಮಾಡಿಸುವುದು ಆ ದೇವರ ಇಚ್ಛೆಯಾಗಿರಬಹುದು. ನಾವು ಎಲ್ಲರ ಚಿಕಿತ್ಸೆಗೆ ವ್ಯವಸ್ಥೆ ಮಾಡುವ ಪ್ರಯತ್ನ ನಡೆಸುವೆವು.
ರಾಜ್ಯಪಾಲರ ಈ ನಿರ್ದೇಶನದ ಬಳಿಕ ಇದೀಗ ಸಂಪೂರ್ಣ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡಿದೆ. ಈ ಕುರಿತು ಪ್ರತಿಕ್ರಿಯೆ ನೀಡಿರುವ ದೆಹಲಿಯ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ, LG ಅವರ ಈ ಆದೇಶಕ್ಕೆ BJP ನೇರ ಹೊಣೆಯಾಗಿದೆ ಎಂದು ಹೇಳಿದ್ದಾರೆ. LG ಅವರ ಮೇಲೆ BJP ಒತ್ತಡ ಹೇರಿರುವ ಕಾರಣ ರಾಜ್ಯಪಾಲರು ದೆಹಲಿ ಸರ್ಕಾರದ ಆದೇಶವನ್ನು ತಿರುಚಿದ್ದಾರೆ, ಹೀಗಾಗಿ ದೆಹಲಿ ಆಸ್ಪತ್ರೆಗಳಲ್ಲಿ ಇನ್ಮುಂದೆ ದೆಹಲಿಯ ಜನರಿಗೆ ಆದ್ಯತೆ ನೀಡಲಾಗುವುದಿಲ್ಲ. ಇದೇ ವೇಳೆ COVID19 ವಿಷಯದಲ್ಲಿ BJP ರಾಜಕೀಯ ಏಕೆ ನಡೆಸುತ್ತಿದೆ ಹಾಗೂ ರಾಜ್ಯಸರ್ಕಾರಗಳ ನೀತಿಗಳನ್ನು ವಿಫಲಗೊಳಿಸಲು ಏಕೆ ಯತ್ನಿಸುತ್ತಿದೆ? ಎಂದು ಅವರು ಪ್ರಶ್ನಿಸಿದ್ದಾರೆ.