ಕರೋನಾದಿಂದ ರಕ್ಷಿಸಲು ಇಲ್ಲಿದೆ ಅಗ್ಗದ ಮತ್ತು ಪರಿಣಾಮಕಾರಿ ಔಷಧ!

ಸಂಶೋಧನಾ ಮಾಹಿತಿಯು ಡೆಕ್ಸಮೆಥಾಸನ್ ಬಳಕೆಯು ವೆಂಟಿಲೇಟರ್‌ಗಳಲ್ಲಿನ ರೋಗಿಗಳ ಮರಣ ಪ್ರಮಾಣವನ್ನು 33.33% ಮತ್ತು ಕಡಿಮೆ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ 20% ರಷ್ಟು ಕಡಿಮೆ ಮಾಡಿದೆ ಎಂದು ಸಂಶೋಧನಾ ಮಾಹಿತಿಯು ಕಂಡುಹಿಡಿದಿದೆ.

Last Updated : Jul 13, 2020, 02:51 PM IST

Trending Photos

ಕರೋನಾದಿಂದ ರಕ್ಷಿಸಲು ಇಲ್ಲಿದೆ ಅಗ್ಗದ ಮತ್ತು ಪರಿಣಾಮಕಾರಿ ಔಷಧ!   title=

ನವದೆಹಲಿ: ಕೊರೊನಾವೈರಸ್‌ನಿಂದ ರಕ್ಷಿಸಲು ಇಲ್ಲಿಯವರೆಗೆ ಅಸ್ತಿತ್ವದಲ್ಲಿರುವ ಅನೇಕ ಔಷಧಿಗಳನ್ನು ಬಳಸಲಾಗುತ್ತಿದೆ. ಕಳೆದ 6 ತಿಂಗಳುಗಳಲ್ಲಿ ವಿಜ್ಞಾನಿಗಳು ರೋಗಿಗಳನ್ನು ಉಳಿಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಮತ್ತು ಕೆಲವೊಮ್ಮೆ ಬಿಸಿಜಿ ಔಷಧಿಯನ್ನು ಉತ್ತಮ ಪರಿಗಣಿಸಿದ್ದಾರೆ. ಆದರೆ ಇತ್ತೀಚಿನ ಸಂಶೋಧನೆಯ ಪ್ರಕಾರ ಈ ಎಲ್ಲದರ ಹೊರತಾಗಿ ಸ್ಟೀರಾಯ್ಡ್ ಔಷಧ ಕರೋನಾವೈರಸ್ (Coronavirus)  ಸೋಂಕಿನ ಗಂಭೀರ ರೋಗಿಗಳಿಗೆ ಸಂಜೀವಿನಿ ಎಂದು ಸಾಬೀತಾಗಿದೆ.

ಡೆಕ್ಸಮೆಥಾಸೊನ್ ಅಗ್ಗದ ಮತ್ತು ಹೆಚ್ಚು ಪರಿಣಾಮಕಾರಿ ಔಷಧ!
ಕರೋನಾ ಸೋಂಕಿತ ರೋಗಿಗಳ ಚಿಕಿತ್ಸೆಯಲ್ಲಿ ಡೆಕ್ಸಮೆಥಾಸೊನ್ (Dexamethason) ಬಹಳ ಪರಿಣಾಮಕಾರಿ ಮತ್ತು ಅಗ್ಗದ ಔಷಧವಾಗಿದೆ ಎಂದು ಇತ್ತೀಚೆಗೆ ಇಂಗ್ಲೆಂಡ್‌ನ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಕರೋನಾವೈರಸ್ ಅನ್ನು ಗುಣಪಡಿಸಲು ಬಳಸುವ ಸ್ಟೀರಾಯ್ಡ್ ಡೆಕ್ಸಮೆಥಾಸೊನ್ ಕರೋನಾ ವೈರಸ್ ಸೋಂಕಿನಲ್ಲಿ ಮಹತ್ತರವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಂಶೋಧನೆಯೊಂದು ಹೇಳಿದೆ. ನಿರ್ಣಾಯಕವಾಗಿರುವ  ಕೋವಿಡ್ -19 (Covid-19) ರೋಗಿಗಳ ಜೀವ ಉಳಿಸುವಲ್ಲಿ ಇದು ಯಶಸ್ವಿಯಾಗಿದೆ. ಇದರ ಬಳಕೆಯು ವೆಂಟಿಲೇಟರ್‌ಗಳಲ್ಲಿನ ರೋಗಿಗಳ ಮರಣ ಪ್ರಮಾಣವನ್ನು 33.33% ಮತ್ತು ಕಡಿಮೆ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಲ್ಲಿ 20% ರಷ್ಟು ಕಡಿಮೆ ಮಾಡಿದೆ ಎಂದು ಸಂಶೋಧನಾ ಮಾಹಿತಿಯಿಂದ ತಿಳಿದುಬಂದಿದೆ.

ಕರೋನಾವೈರಸ್ ಚಿಕಿತ್ಸೆಯಲ್ಲಿ ಅಸ್ತಿತ್ವದಲ್ಲಿರುವ ಔಷಧಿಗಳ ಸುರಕ್ಷತೆಯ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆ (World Health Organization)  ಗಮನ ಹರಿಸುತ್ತಿದೆ. ಡೆಕ್ಸಮೆಥಾಸನ್ ಬಳಸಿ ಕರೋನಾ ರೋಗಿಗಳಿಗೆ ಚಿಕಿತ್ಸೆ ನೀಡುವಾಗ ಯಾವುದೇ ರೀತಿಯ ಅಡ್ಡ ಪರಿಣಾಮಗಳು ಕಂಡು ಬಂದಿಲ್ಲ ಎಂದು ಸಂಶೋಧಕರು ಸಾಬೀತು ಪಡಿಸಿದ್ದಾರೆ. ಈ ಆಧಾರದ ಮೇಲೆ ಡಬ್ಲ್ಯುಎಚ್‌ಒ ಡೆಕ್ಸಮೆಥಾಸನ್ ಅನ್ನು ಚಿಕಿತ್ಸೆಗೆ ಸುರಕ್ಷಿತವೆಂದು ಘೋಷಿಸಿದೆ.

ಅಮೆರಿಕ ವಿಶ್ವ ಆರೋಗ್ಯ ಸಂಸ್ಥೆಯಿಂದ ಹೊರಬರುವುದರಿಂದ ಎದುರಾಗುವ ಬಹುದೊಡ್ಡ ಸವಾಲು

ಈ ಮೊದಲು ರೆಮೆಡೆಸಿವಿರ್ (Remdesivir) ಎಂಬ ಔಷಧವು ಕರೋನ ಚಿಕಿತ್ಸೆಗೆ ಉತ್ತಮವೆಂದು ನಂಬಲಾಗಿತ್ತು, ಆದರೆ ನಂತರದ ಸಂಶೋಧನೆಯು ಸೌಮ್ಯ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡಲು ಮಾತ್ರ ಪರಿಣಾಮಕಾರಿಯಾಗಿದೆ ಎಂದು ಹೇಳಿದೆ. ಅಲ್ಲದೆ ಇದು ಪ್ರತಿ ರೋಗಿಗೆ ಒಂದೇ ರೀತಿಯ ಪ್ರಯೋಜನವನ್ನು ನೀಡುವುದಿಲ್ಲ ಎನ್ನಲಾಗಿದೆ. ಆದರೆ ಡೆಕ್ಸಮೆಥಾಸೊನ್‌ನ ತೀವ್ರ ರೋಗಲಕ್ಷಣಗಳನ್ನು ಹೊಂದಿರುವ ರೋಗಿಗಳು ಮೇಲೂ ಸಹ ಸಕಾರಾತ್ಮಕ ಪರಿಣಾಮ ಬೀರಿದೆ ಎಂದು ಹೇಳಲಾಗಿದೆ.
 

Trending News