ನವದೆಹಲಿ: ಕೇಂದ್ರ ಸರ್ಕಾರದ ಕೊನೆಯ ಪೂರ್ಣಾವಧಿ ಬಜೆಟ್ ಹಲವು ಕುತೂಹಲ ಮೂಡಿಸಿದೆ. ಮುಂಬರುವ ಸಾರ್ವತ್ರಿಕ ಮತ್ತು ವಿವಿಧ ರಾಜ್ಯಗಳ ವಿಧಾನಸಭಾ ಚುನಾವಣೆ ದೃಷ್ಟಿಯಲ್ಲಿ ಈ ಬಜೆಟ್ ದೊಡ್ಡ ಮಟ್ಟದ ಮಹತ್ವವನ್ನು ಪಡೆದುಕೊಂಡಿದೆ. ಜಿಎಸ್ಟಿ ಜಾರಿಯಾದ ಬಳಿಕ ಮಂಡನೆಯಾಗುತ್ತಿರುವ ಪ್ರಥಮ ಬಜೆಟ್ ಇದಾಗಿದ್ದು, ಜನಸಾಮಾನ್ಯರು ಹಲವು ಆಕಾಂಕ್ಷೆ ಮತ್ತು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದಾರೆ.
ಹಾಗಾದರೆ, ಕೇಂದ್ರ ಬಜೆಟ್ 2018ರ ಬಗ್ಗೆ ಜನಸಾಮಾನ್ಯರ ಮುಖ್ಯ ನಿರೀಕ್ಷೆಗಳೇನು...? ಅದರ ಕೆಲವು ಅಂಶಗಳನ್ನು ನೋಡೋಣಾ...
* ಆದಾಯ ತೆರಿಗೆಯಲ್ಲಿ ವಿನಾಯಿತಿ; ಈಗ 3 ಲಕ್ಷದವರೆಗೆ ಇರುವ ಆದಾಯ ತೆರಿಗೆ ಮಿತಿಯನ್ನು ಈ ಬಾರಿಯ ಬಜೆಟ್ನಲ್ಲಿ 5 ಲಕ್ಷದವರೆಗೆ ಏರಿಕೆಮಾಡಬಹುದು ಎನ್ನುವ ನಿರೀಕ್ಷೆಯಿದೆ.
* ರಾಷ್ಟ್ರೀಯ ಪಿಂಚಣಿ ಯೋಜನೆಯಡಿ ಹಿಂತೆಗೆದುಕೊಳ್ಳುವಿಕೆಯ ಮೇಲೆ ಸಂಪೂರ್ಣ ವಿನಾಯಿತಿಯನ್ನು ಜನತೆ ನಿರೀಕ್ಷಿಸಿದ್ದಾರೆ. ಪಿಂಚಣಿ ನಿಧಿ ನಿಯಂತ್ರಣ ಮತ್ತು ಅಭಿವೃದ್ಧಿ ಪ್ರಾಧಿಕಾರ (ಪಿಎಫ್ಆರ್ಡಿಎ) ಈಗಾಗಲೇ ಎನ್ಪಿಎಸ್ ಅನ್ನು ಹೆಚ್ಚು ಆಕರ್ಷಕವಾಗಿ ಮಾಡಲು ಸಂಪೂರ್ಣ ವಿನಾಯತಿಯನ್ನು ಬಯಸಿದೆ.
* ಮೂಲಭೂತ ಸೌಕರ್ಯಗಳ ಬಾಂಡ್ಗಳ ಮರು ಪರಿಚಯವನ್ನು ಜನತೆ ನಿರೀಕ್ಷಿಸುತ್ತಿದೆ.
* ಉದ್ಯೋಗಿಗೆ ನೀಡಲಾಗುತ್ತಿರುವ ವೈದ್ಯಕೀಯ ಖರ್ಚುಗಳ ಮೇಲಿನ ವಿನಾಯಿತಿಯ ಮಿತಿ ಹೆಚ್ಚಳವನ್ನು ಈ ವರ್ಷದ ಬಜೆಟ್ನಲ್ಲಿ ನಿರೀಕ್ಷಿಸಲಾಗಿದೆ. ಇದು ಪ್ರಸ್ತುತ ರೂ. 15,000 ಇದ್ದು, ಇದನ್ನು ಅಸಮರ್ಪಕ ಎಂದು ಪರಿಗಣಿಸಲಾಗಿದೆ.
* ಮನೆ ಸಾಲದ ಬಡ್ಡಿ ಮೇಲಿನ ಕಡಿತವನ್ನು ಜನ ನಿರೀಕ್ಷಿಸುತ್ತಿದ್ದಾರೆ.
* ಬರಗಾಲದಿಂದ ಬೇಸತ್ತ ರೈತರು ಈ ಬಜೆಟ್ನಲ್ಲಿ ಪರಿಹಾರ ಘೋಷಣೆಯನ್ನು ಬಯಸುತ್ತಿದ್ದಾರೆ.
* ಉನ್ನತ ಶಿಕ್ಷಣವನ್ನು ಪಡೆದುಕೊಳ್ಳಲು ಶಿಕ್ಷಣದ ಸಾಲವನ್ನು ದೇಶದ ಯುವಜನರ ಬಹುಪಾಲು ಅವಲಂಬಿಸಿದೆ. ಶಿಕ್ಷಣ ಸಾಲದ ಮೇಲಿನ ಬಡ್ಡಿಯನ್ನು 100% ಕಡಿತವನ್ನು ನಿರೀಕ್ಷಿಸಲಾಗಿದೆ.
* ಉಚಿತ ಆರೋಗ್ಯ ವಿಮೆಯನ್ನು ಜನ ಎದುರುನೋಡುತ್ತಿದ್ದಾರೆ.
ಇವೆಲ್ಲವೂ ಕೇಂದ್ರ ಬಜೆಟ್ 2018ರ ಕೆಲವು ಪ್ರಮುಖ ನಿರೀಕ್ಷೆಗಳಾಗಿವೆ. ನೋಟು ರದ್ಧತಿ ಹಾಗೂ GSTಯಿಂದಾಗಿ ಬಳಲಿರುವ ಸಾಮಾನ್ಯ ಜನತೆಯ ಮುಖದಲ್ಲಿ ಈ ಬಾರಿಯ ಬಜೆಟ್ ಮಂದಹಾಸ ತರಿಸುವುದೇ ಎಂಬುದನ್ನು ಕಾದುನೋಡಬೇಕಿದೆ.