ರಾಜಸ್ಥಾನದಲ್ಲಿನ ತಮಾಶಾವನ್ನು ಪ್ರಧಾನಿ ಮೋದಿ ನಿಲ್ಲಿಸಲಿ-ಸಿಎಂ ಅಶೋಕ್ ಗೆಹ್ಲೋಟ್

ಕಾಂಗ್ರೆಸ್ ನೇತೃತ್ವದ ರಾಜಸ್ಥಾನ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಆಪಾದಿತ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಕೊನೆಗಾಣಿಸಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೈಸಲ್ಮೇರ್ನಲ್ಲಿ ಹೇಳಿದ್ದಾರೆ. 

Last Updated : Aug 1, 2020, 06:21 PM IST
ರಾಜಸ್ಥಾನದಲ್ಲಿನ ತಮಾಶಾವನ್ನು ಪ್ರಧಾನಿ ಮೋದಿ ನಿಲ್ಲಿಸಲಿ-ಸಿಎಂ ಅಶೋಕ್ ಗೆಹ್ಲೋಟ್ title=
file photo

ನವದೆಹಲಿ: ಕಾಂಗ್ರೆಸ್ ನೇತೃತ್ವದ ರಾಜಸ್ಥಾನ್ ಸರ್ಕಾರವನ್ನು ಉರುಳಿಸಲು ಬಿಜೆಪಿಯ ಆಪಾದಿತ ಪ್ರಯತ್ನಗಳನ್ನು ಪ್ರಧಾನಿ ನರೇಂದ್ರ ಮೋದಿ ಕೊನೆಗಾಣಿಸಬೇಕು ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಜೈಸಲ್ಮೇರ್ನಲ್ಲಿ ಹೇಳಿದ್ದಾರೆ. 

ಇದೇ ವೇಳೆ ಪಕ್ಷದ ಹೈಕಮಾಂಡ್ ಅವರನ್ನು ಕ್ಷಮಿಸಿದರೆ ಮಾಜಿ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ನೇತೃತ್ವದ ಬಂಡಾಯ ಶಿಬಿರವನ್ನು ಮರಳಿ ಸ್ವಾಗತಿಸುವುದಾಗಿ ಅವರು ಹೇಳಿದರು.

ಇದನ್ನು ಓದಿ: ಆಗಸ್ಟ್ 14 ರಿಂದ ವಿಧಾನಸಭೆ ಅಧಿವೇಶನ ಕರೆಯಲು ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಆದೇಶ

ಮೋದಿಜಿ ದೇಶದ ಪ್ರಧಾನ ಮಂತ್ರಿ. ಜನರು ಅವರಿಗೆ ಎರಡು ಬಾರಿ ದೇಶವನ್ನು ಮುನ್ನಡೆಸಲು ಅವಕಾಶ ನೀಡಿದರು. ಅವರು ಜನರನ್ನು ಚಪ್ಪಾಳೆ, ಖಣಿಲು ಪಾತ್ರೆಗಳನ್ನು ತಟ್ಟುವಂತೆ ಮಾಡಿದರು...ಜನರು ಅವರನ್ನು ನಂಬಿದ್ದರು - ಇದು ನಿಜಕ್ಕೂ ಒಂದು ದೊಡ್ಡ ವಿಷಯ.ಅವರು ರಾಜಸ್ಥಾನದ ನಾಟಕಕ್ಕೆ ಒಂದು ಅಂತ್ಯ ಹಾಡಬೇಕು. ಅವರು ಅಸೆಂಬ್ಲಿ ಅಧಿವೇಶನಕ್ಕೆ ಮುಂಚಿತವಾಗಿ ಕುದುರೆ ವ್ಯಾಪಾರದ ರೇಟಿನ ಪ್ರಮಾಣವನ್ನು ಹೆಚ್ಚಿಸಿದ್ದಾರೆ. ಏನಿದು ನಾಟಕ ? ಎಂದು ಗೆಹಲೋಟ್ ಪ್ರಶ್ನಿಸಿದ್ದಾರೆ.

ಇದನ್ನು ಓದಿ: ಶಾಸಕರು ಕರೆ ಮಾಡಿ ನಮ್ಮನ್ನು ಬಂಧಮುಕ್ತರನ್ನಾಗಿಸಿ ಎಂದು ಗೋಗರಿಯುತ್ತಿದ್ದಾರೆ: ಅಶೋಕ್ ಗೆಹ್ಲೋಟ್

ಪೈಲಟ್ ಅವರ ಬಹಿರಂಗ ದಂಗೆಯ ನಂತರ ರಾಜಸ್ಥಾನ್ ಅಸೆಂಬ್ಲಿಯಲ್ಲಿ ವಿಶ್ವಾಸಾರ್ಹ ಮತದಾನದ ಮೂಲಕ ತಮ್ಮ ಬಹುಮತವನ್ನು ಸಾಬೀತುಪಡಿಸಲು ಗೆಹ್ಲೋಟ್ ಉತ್ಸುಕರಾಗಿದ್ದಾರೆ.
 

Trending News