ನವದೆಹಲಿ: ಆಗಸ್ಟ್ 14 ರಿಂದ ವಿಧಾನಸಭೆ ಸಭೆ ನಡೆಸಲು ರಾಜಸ್ಥಾನ ರಾಜ್ಯಪಾಲ ಕಲ್ರಾಜ್ ಮಿಶ್ರಾ ಬುಧವಾರ (ಜುಲೈ 29) ಆದೇಶ ಹೊರಡಿಸಿದ್ದು, ಆ ಮೂಲಕ ರಾಜ್ ಭವನ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವೆ ನಡೆಯುತ್ತಿರುವ ಜಗಳಕ್ಕೆ ಅಂತ್ಯ ಹಾಡಿದ್ದಾರೆ.
ಇದನ್ನು ಓದಿ: Rajasthan: 19 ಶಾಸಕರ ವಿರುದ್ಧ SCನಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ವಾಪಸ್ ಪಡೆದ ವಿಧಾನಸಭೆ ಸ್ಪೀಕರ್
ಅಸೆಂಬ್ಲಿ ಅಧಿವೇಶನದ ಸಂದರ್ಭದಲ್ಲಿ ಕರೋನವೈರಸ್ ಹರಡುವುದನ್ನು ತಡೆಗಟ್ಟಲು ಹೊರಡಿಸಿದ ಮಾರ್ಗಸೂಚಿಗಳನ್ನು ಪಾಲಿಸುವಂತೆ ಆದೇಶವು ಗೆಹ್ಲೋಟ್ ಸರ್ಕಾರಕ್ಕೆ ನಿರ್ದೇಶನ ನೀಡಿದೆ.'ಆಗಸ್ಟ್ 14 ರಿಂದ ವಿಧಾನಸಭೆ ಅಧಿವೇಶನವನ್ನು ಕರೆಯುವ ಕ್ಯಾಬಿನೆಟ್ ಪ್ರಸ್ತಾಪವನ್ನು ರಾಜಸ್ಥಾನ ರಾಜ್ಯಪಾಲರು ಅಂಗೀಕರಿಸಿದ್ದಾರೆ ಅಧಿವೇಶನದಲ್ಲಿ COVID-19 ಹರಡುವುದನ್ನು ತಡೆಗಟ್ಟಲು ಅಗತ್ಯವಾದ ವ್ಯವಸ್ಥೆಗಳನ್ನು ಮಾಡಲು ಅವರು ಮೌಖಿಕ ನಿರ್ದೇಶನಗಳನ್ನು ಸಹ ನೀಡಿದ್ದಾರೆ ಎಂದು ರಾಜ್ ಭವನ ವಕ್ತಾರರು ಹೇಳಿದರು.
ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಸರ್ಕಾರ ವಿಧಾನಸಭೆ ಸಭೆ ಅಧಿವೇಶನ ಕರೆಯಲು ಕೋರಿ ರಾಜ್ಯಪಾಲರಿಗೆ ಮತ್ತೊಂದು ಪ್ರಸ್ತಾಪವನ್ನು ಕಳುಹಿಸಿದೆ. ಕಲ್ರಾಜ್ ಮಿಶ್ರಾ ಅವರಿಗೆ ಗೆಹ್ಲೋಟ್ ಸರ್ಕಾರ ಕಳುಹಿಸಿದ ನಾಲ್ಕನೇ ಪ್ರಸ್ತಾಪ ಇದಾಗಿದೆ.
ಸಚಿನ್ ಪೈಲೆಟ್ ನ ಹಾಗೂ ಅವರ ಬೆಂಬಲಿತ ಶಾಸಕರು ಬಂಡಾಯವೆದ್ದ ಹಿನ್ನಲೆಯಲ್ಲಿ ಈಗ ರಾಜಸ್ತಾನದಲ್ಲಿ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ಈಗ ನಡೆಯುತ್ತಿರುವ ವಿಧಾನಸಭೆ ಅಧಿವೇಶನ ಗೆಹಲೋಟ್ ಸರ್ಕಾರಕ್ಕೆ ತನ್ನ ಬಹುಮತ ಸಾಬೀತುಪಡಿಸಲು ಸೂಕ್ತವೇದಿಕೆಯಾಗಿದೆ.