ಸಿಹಿ ಸುದ್ದಿ! ಕೇಂದ್ರ ಸರ್ಕಾರದ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ

Jobs in MSME: ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಹಾಯದ ವ್ಯಾಪ್ತಿಯನ್ನು ವಿಸ್ತರಿಸಬೇಕು, ಇದರಿಂದ ಹೊಸ ಪ್ರತಿಭೆಗಳಿಗೆ ಮುಂದುವರಿಯಲು ಅವಕಾಶಗಳು ಸಿಗುತ್ತವೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದರು.

Last Updated : Sep 11, 2020, 09:51 AM IST
  • ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಹಾಯದ ವ್ಯಾಪ್ತಿಯನ್ನು ವಿಸ್ತರಿಸಬೇಕು.
  • ಪ್ರಸ್ತುತ ಎಂಎಸ್ಎಂಇ ವಲಯವು ಸುಮಾರು 11 ಮಿಲಿಯನ್ ಜನರನ್ನು ನೇಮಿಸಿಕೊಂಡಿದೆ
  • ಮುಂದಿನ ಐದು ವರ್ಷಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ ವಲಯ) ಕ್ಷೇತ್ರದಲ್ಲಿ ಸರ್ಕಾರ 5 ಕೋಟಿ ಹೆಚ್ಚುವರಿ ಉದ್ಯೋಗ ನೀಡುವ ಗುರಿ ಹೊಂದಿದೆ
ಸಿಹಿ ಸುದ್ದಿ! ಕೇಂದ್ರ ಸರ್ಕಾರದ ಹೊಸ ಯೋಜನೆ, ನಿರುದ್ಯೋಗಿಗಳಿಗೆ ಇಲ್ಲಿದೆ ಸುವರ್ಣಾವಕಾಶ title=

ನವದೆಹಲಿ : Jobs in MSME: ದೇಶದ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು ಮತ್ತು ಉದ್ಯೋಗವನ್ನು ಬಲಪಡಿಸಲು ಸರ್ಕಾರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಏತನ್ಮಧ್ಯೆ, ಕೇಂದ್ರ ಸಚಿವ ನಿತಿನ್ ಗಡ್ಕರಿ (Nitin Gadkari) ನಿರುದ್ಯೋಗಿಗಳಿಗೆ ಒಳ್ಳೆಯ ಸುದ್ದಿ ನೀಡಿದ್ದಾರೆ. ಇದಕ್ಕಾಗಿ ಕೇಂದ್ರ ಸರ್ಕಾರ ಯೋಜನೆಯನ್ನು ಸಿದ್ಧಪಡಿಸಿದೆ. ಮುಂದಿನ ಐದು ವರ್ಷಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ (ಎಂಎಸ್‌ಎಂಇ ವಲಯ) ಕ್ಷೇತ್ರದಲ್ಲಿ ಸರ್ಕಾರ 5 ಕೋಟಿ ಹೆಚ್ಚುವರಿ ಉದ್ಯೋಗ ನೀಡುವ ಗುರಿ ಹೊಂದಿದೆ ಎಂದು ಗಡ್ಕರಿ ಹೇಳಿದ್ದಾರೆ.

ಎಂಎಸ್‌ಎಂಇ (MSME), ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಮಾತನಾಡಿ ಒಟ್ಟು ದೇಶೀಯ ಉತ್ಪನ್ನಕ್ಕೆ (ಜಿಡಿಪಿ) ಎಂಎಸ್‌ಎಂಇ ಕೊಡುಗೆಯನ್ನು ಶೇಕಡಾ 30 ರಿಂದ 50ಕ್ಕೆ ಮತ್ತು ರಫ್ತಿನಲ್ಲಿ ಶೇಕಡ 49 ರಿಂದ 60ಕ್ಕೆ ಹೆಚ್ಚಿಸುವುದು ಅವರ ಗುರಿಯಾಗಿದೆ. ಪ್ರಸ್ತುತ ಎಂಎಸ್ಎಂಇ ವಲಯವು ಸುಮಾರು 11 ಮಿಲಿಯನ್ ಜನರನ್ನು ನೇಮಿಸಿಕೊಂಡಿದೆ ಎಂದು ತಿಳಿಸಿದರು.

ನಾವೀನ್ಯತೆ ಮತ್ತು ಉದ್ಯಮಶೀಲತೆಗೆ ಸಹಾಯದ ವ್ಯಾಪ್ತಿಯನ್ನು ವಿಸ್ತರಿಸಬೇಕು. ಇದರಿಂದ ಹೊಸ ಪ್ರತಿಭೆಗಳಿಗೆ ಮುಂದುವರಿಯಲು ಅವಕಾಶಗಳು ಸಿಗುತ್ತವೆ ಎಂದು ಗಡ್ಕರಿ ಹೇಳಿದರು. ಎಂಎಸ್‌ಎಂಇ ಸಚಿವಾಲಯದ ಪ್ರಕಾರ ನಾವೀನ್ಯತೆಗಳಲ್ಲಿ ಅಪಾಯಗಳನ್ನು ತೆಗೆದುಕೊಳ್ಳುವ ಮತ್ತು ಹೊಸ ಪರಿಹಾರಗಳನ್ನು ಕಂಡುಕೊಳ್ಳುವ ಪ್ರವೃತ್ತಿಯನ್ನು ಹೆಚ್ಚಿಸುವ ಅವಶ್ಯಕತೆಯಿದೆ. ಈ ಪ್ರಕ್ರಿಯೆಯಲ್ಲಿ ಡೀಫಾಲ್ಟ್ ಆಗಿರುವವರನ್ನು ಸಮರ್ಥಿಸಬೇಕಾಗಿದೆ ಎಂದು ಅವರು ಹೇಳಿದರು.

MSMEಗಳಿಗೆ ಕೇಂದ್ರದ ರೀತಿ ವಿನಾಯಿತಿ ನೀಡಲು ಕ್ರಮ ಕೈಗೊಳ್ಳುವಂತೆ ಎಚ್.ಡಿ. ಕುಮಾರಸ್ವಾಮಿ ಒತ್ತಾಯ

ಬುಧವಾರ ನಡೆದ ವರ್ಚುವಲ್ ಸಭೆಯನ್ನುದ್ದೇಶಿಸಿ ಮಾತನಾಡಿದ ಗಡ್ಕರಿ, ನೀತಿ ಆಯೋಗದ ಉಪಕ್ರಮ 'ಅರಿಸ್ ಅಟಲ್ ನ್ಯೂ ಇಂಡಿಯಾ ಚಾಲೆಂಜ್' ಅನ್ನು ಶ್ಲಾಘಿಸಿದರು. ವಿವಿಧ ಪ್ರದೇಶಗಳಲ್ಲಿ ಸಂಭವಿಸುವ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸ ತಂತ್ರಜ್ಞಾನದ ಬಳಕೆಯನ್ನು ಉತ್ತೇಜಿಸಲು ಮತ್ತು ಮೌಲ್ಯವರ್ಧನೆಯನ್ನು ಖಚಿತಪಡಿಸಿಕೊಳ್ಳಲು ಅವರು ಮನವಿ ಮಾಡಿದರು. 

ಹೆಚ್ಚುವರಿ ಅಕ್ಕಿಯ ಉದಾಹರಣೆಯನ್ನು ನೀಡಿದ ಅವರು ಇದನ್ನು ಎಥೆನಾಲ್ ಉತ್ಪಾದನೆಯಲ್ಲಿ ಬಳಸಬಹುದು. ಇದು ಶೇಖರಣಾ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚುವರಿಯಾಗಿ ಹಸಿರು ಇಂಧನದ ಸಂದರ್ಭದಲ್ಲಿ ದೇಶವು ಪಳೆಯುಳಿಕೆ ಇಂಧನಗಳ ಆಯ್ಕೆಯನ್ನು ಪಡೆಯುತ್ತದೆ ಎಂದರು.

ಯಾವುದೇ ಗ್ಯಾರಂಟಿ ಇಲ್ಲದೆ ಸಿಗಲಿದೆ ಲಕ್ಷಾಂತರ ರೂ. ಸಾಲ: ಸರ್ಕಾರದ ತಯಾರಿ ಬಗ್ಗೆ ಇಲ್ಲಿದೆ ಮಾಹಿತಿ

ಎಂಎಸ್ಎಂಇ ದೇಶದ ಅಭಿವೃದ್ಧಿಯ ಎಂಜಿನ್ ಆಗಿದ್ದು ಅದರಿಂದ ಹಲವು ನಿರೀಕ್ಷೆಗಳಿವೆ ಎಂದು ನಿತಿನ್ ಗಡ್ಕರಿ ಹೇಳಿದರು. ಈ ವಲಯವನ್ನು ಉತ್ತೇಜಿಸಲು ಅಗತ್ಯವಾದ ಆವಿಷ್ಕಾರಗಳನ್ನು ಗುರುತಿಸಲು ಮತ್ತು ಉತ್ತೇಜಿಸಲು ಈ ಉಪಕ್ರಮವು ಸಹಾಯ ಮಾಡುತ್ತದೆ ಎಂದು ನನಗೆ ಖಾತ್ರಿಯಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ವೈಜ್ಞಾನಿಕ ಸಂಶೋಧನೆಗೆ ಪ್ರಧಾನಿ ಮೋದಿಯವರ ಕೇಂದ್ರೀಕೃತ ವಿಧಾನವನ್ನು ಉಲ್ಲೇಖಿಸಿದ ಅವರು ಸಾಮಾಜಿಕ-ಆರ್ಥಿಕ ಸಮಸ್ಯೆಗಳನ್ನು ಪರಿಹರಿಸಲು ವಿಜ್ಞಾನವು ಸಹಾಯ ಮಾಡಬೇಕು ಮತ್ತು ವೈಜ್ಞಾನಿಕ ಸಂಶೋಧನೆಗಳನ್ನು ಪ್ರಯೋಗಾಲಯಗಳಿಂದ ಭೂಮಿಗೆ ತೆಗೆದುಕೊಳ್ಳಬೇಕು ಎಂದು ವಿವರಿಸಿದರು.
 

Trending News