ಸೆಪ್ಟೆಂಬರ್ 13ರಂದು ನಡೆಯಲಿವೆ ಪರೀಕ್ಷೆಗಳು
ಇದಕ್ಕೂ ಮೊದಲು ಕೊರೊನಾ ವೈರಸ್ ಪ್ರಕೋಪದ ಹಿನ್ನೆಲೆ ಎರಡು ಬಾರಿ ಈ ಪರೀಕ್ಷೆಯನ್ನು ಮುಂದೂಡಲಾಗಿದೆ. ಮೂಲ ರೂಪದಲ್ಲಿ ಈ ಪರೀಕ್ಷೆಗಳು ಮೇ 3 ರಂದು ನಡೆಯಬೇಕಿದ್ದವು, ಬಳಿಕ ಜುಲೈ 26 ರವರೆಗೆ ಮುಂದೂಡಲಾಯಿತು. ಇದೀಗ 13 ಸೆಪ್ಟೆಂಬರ್ ರಂದು ನಡೆಯಲಿವೆ.
ಕೊರೊನಾ ವೈರಸ್ ಕಾರಣ ಒಟ್ಟು 1,297 ಕೇಂದ್ರಗಳನ್ನು ಹೆಚ್ಚಿಸಲಾಗಿದೆ
ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಅಧಿಕಾರಿಗಳು ನೀಡಿರುವ ಮಾಹಿತಿ ಪ್ರಕಾರ ಸಾಮಾಜಿಕ ಅಂತರ ಕಾಯುವಿಕೆಯ ಹಿನ್ನೆಲೆ ಪರೀಕ್ಷಾ ಕೇಂದ್ರಗಳ ಸಂಖ್ಯೆಯನ್ನು 2546 ರಿಂದ 3843 ವರೆಗೆ ಹೆಚ್ಚಿಸಲಾಗಿದೆ. ಇದೇವೇಳೆ ಪ್ರತಿಯೊಂದು ಕೊಠಡಿಯಲ್ಲಿನ ಅಭ್ಯರ್ಥಿಗಳ ಸಂಖ್ಯೆಯನ್ನು 24 ರಿಂದ 12 ಕ್ಕೆ ಇಳಿಸಲಾಗಿದೆ.
ಸೋಂಕಿನಿಂದ ಬಚಾವಾಗಲು ಕಠಿಣ ನಿಯಮಗಳು
ATAಯ ಹಿರಿಯ ಅಧಿಕಾರಿ ನೀಡಿರುವ ಮಾಹಿತಿ ಪ್ರಕಾರ ಪರೀಕ್ಷಾ ಕೊಠಡಿಯ ಹೊರಗಡೆ ಸಾಮಾಜಿಕ ಅಂತರ ನಿಯಮವನ್ನು ಸುನಿಶ್ಚಿತಗೊಳಿಸಲು ಎಂಟ್ರನ್ಸ್ ಹಾಗೂ ಎಕ್ಸಿಟ್ ಗಾಗಿ ಪ್ರತ್ಯೇಕ ವ್ಯವಸ್ಥೆಯನ್ನು ಮಾಡಲಾಗಿದೆ. ಸ್ಥಳೀಯ ಮಟ್ಟದಲ್ಲಿ ವಿದ್ಯಾರ್ಥಿಗಳ ಬರುವಿಕೆ ಹಾಗೂ ಹೋಗುವಿಕೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳಿಗೂ ಕೂಡ ಪತ್ರ ಬರೆದಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಪರೀಕ್ಷೆಗೆ ಹಾಜರಾಗಲು ಬರುವ ಅಭ್ಯರ್ಥಿಗಳಿಗೆ ಮಾಸ್ಕ್ ಹಾಗೂ ಸ್ಯಾನಿಟೈಸರ್ ಇಟ್ಟುಕೊಂಡು ಪರೀಕ್ಷಾ ಕೇಂದ್ರಕ್ಕೆ ಬರಲು ಸೂಚಿಸಲಾಗಿದೆ. ಪರೀಕ್ಷಾ ಕೇಂದ್ರ ಪ್ರವೇಶಿಸಿದ ಬಳಿಕ ಕೇಂದ್ರದ ಅಧಿಕಾರಿಗಳು ನೀಡುವ ಮಾಸ್ಕ್ ಬಳಸುವುದು ಅನಿವಾರ್ಯವಾಗಿದೆ. ಅಭ್ಯರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ಪ್ರವೇಶಿಸುತ್ತಿದ್ದಂತೆ ಅವರಿಗೆ ಮೂರು ಲೇಯರ್ ಗಳನ್ನು ಹೊಂದಿರುವ ಮಾಸ್ಕ್ ಗಳನ್ನು ನೀಡಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ.