ಬೆಂಗಳೂರು: ರಾಜ್ಯದಲ್ಲಿ ಭಾರೀ ಸದ್ದು ಮಾಡಿರುವ ಡ್ರಗ್ಸ್ ಮಾಫಿಯಾ (Drugs Mafia)ದೊಂದಿಗೆ ಬಿಜೆಪಿ ನಾಯಕರ ಸಂಪರ್ಕ ಇದೆ ಎನ್ನುವುದನ್ನು ಕಾಂಗ್ರೆಸ್ ಇನ್ನೊಮ್ಮೆ ಬಯಲು ಮಾಡಿದೆ.
ಮಾಜಿ ಉಪ ಮುಖ್ಯಮಂತ್ರಿ, ಮಾಜಿ ಗೃಹ ಸಚಿವರೂ ಆದ ಹಾಲಿ ಕಂದಾಯ ಸಚಿವ ಆರ್. ಅಶೋಕ್ (R Ashok) ಕಿಂಗ್ ಪಿನ್ ರಾಹುಲ್ ಜತೆ ಇರುವ ವಿವಿಧ ಫೋಟೋಗಳನ್ನು ಟ್ವೀಟ್ ಮಾಡಿರುವ ಕಾಂಗ್ರೆಸ್, ಡ್ರಗ್ಸ್ ಮಾಫಿಯಾ (Drugs Mafia)ದೊಂದಿಗೆ ಬಿಜೆಪಿ ನಾಯಕರ ಸಂಪರ್ಕದಲ್ಲಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯತ್ನಿಸಿದೆ.
ಡ್ರಗ್ಸ್ ಹಗರಣದ ಕಿಂಗ್ ಪಿನ್ ರಾಹುಲ್ ಜೊತೆಯಲ್ಲಿನ @RAshokaBJP ಅವರ ಈ ಚಿತ್ರಗಳು ಆಕಸ್ಮಿಕ ಭೇಟಿಯಾಗಿರದೆ ಹೆಚ್ಚಿನ ನಿಕಟ ಸಂಬಂಧವಿರುವುದನ್ನ ಸೂಚಿಸುತ್ತದೆ,
ತಮ್ಮ ಹಗರಣ ಮುಚ್ಚಿಕೊಳ್ಳಲು ಅನ್ಯಪಕ್ಷದವರತ್ತ ಆರೋಪಿಸುವ@BJP4Karnataka ನಾಯಕರನ್ನ ಮೊದಲು ತನಿಖೆಗೆ ಒಳಪಡಿಸುವ ಅಗತ್ಯವಿದೆ. pic.twitter.com/ov0fgOJaLV
— Karnataka Congress (@INCKarnataka) September 15, 2020
ಡ್ರಗ್ಸ್ ಮಾಫಿಯಾ (Drugs Mafia)ಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ ಪೊಲೀಸರು (CCB) ಡ್ರಗ್ ಕಿಂಗ್ ಪಿನ್ ರಾಹುಲ್ ನನ್ನು ಬಂಧಿಸಿದ್ದರು. ಈಗ ಇದೇ ರಾಹುಲ್, ಬಿಜೆಪಿ ನಾಯಕ ಅಶೋಕ್ ಜೊತೆ ಇರುವ ಪೋಟೊಗಳನ್ನು ಕಾಂಗ್ರೆಸ್ ಟ್ವೀಟರ್ ನಲ್ಲಿ ಹರಿಬಿಟ್ಟಿದೆ. ಈ ಫೋಟೋಗಳು ರಾಹುಲ್ ವಿವಿಧ ಸಂದರ್ಭದಲ್ಲಿ ಅಶೋಕ್ ಜತೆ ಇದ್ದವಾಗಿವೆ ಮತ್ತು ಅಶೋಕ್ ಹಾಗೂ ರಾಹುಲ್ ನಡುವಿನ ಸಂಬಂಧವನ್ನು ಸಾರವಂತವಾಗಿವೆ.
ಡ್ರಗ್ಸ್ ಮಾಫಿಯಾಕ್ಕೆ ಬೆಂಬಲ ನೀಡಿರುವ ಬಿಜೆಪಿ ನಾಯಕರು ಈಗ ತಮ್ಮ ಮೇಲಿನ ಆರೋಪ ಮತ್ತು ಹಗರಣ ಮುಚ್ಚಿಕೊಳ್ಳಲು ಬೇರೆ ಪಕ್ಷಗಳ ನಾಯಕರ ಮೇಲೆ ಆರೋಪ ಮಾಡುತ್ತಿದ್ದಾರೆ. ಮೊದಲು ಬಿಜೆಪಿ ನಾಯಕರನ್ನ ತನಿಖೆಗೆ ಒಳಪಡಿಸಬೇಕು ಎಂದು ಕಾಂಗ್ರೆಸ್ ಒತ್ತಾಯಪಡಿಸಿದೆ.