Video: ತನ್ನ ಫಿಟ್ನೆಸ್ ಕುರಿತು ಜಾಗರೂಕವಾಗಿರುವ ಈ ಬಾತುಕೋಳಿಯ Exercise ನೀವೂ ನೋಡಿ

ಇಂದಿನ ಇಂಟರ್ನೆಟ್ ಯುಗದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ

Last Updated : Sep 16, 2020, 08:58 PM IST
  • ಇಂದಿನ ಇಂಟರ್ನೆಟ್ ಯುಗದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ
  • ಎಲ್ಲರನ್ನು ಆಶ್ಚರ್ಯಕ್ಕೀಡು ಮಾಡುವ ಬಾತುಕೋಳಿಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ.
  • ಈ ವಿಡಿಯೋ ನೋಡಲು ತುಂಬಾ ಹಾಸ್ಯಮಯ ಕೂಡ ಆಗಿದೆ.
Video: ತನ್ನ ಫಿಟ್ನೆಸ್ ಕುರಿತು ಜಾಗರೂಕವಾಗಿರುವ ಈ ಬಾತುಕೋಳಿಯ Exercise ನೀವೂ ನೋಡಿ title=

ನವದೆಹಲಿ: ಇಂದಿನ ಇಂಟರ್ನೆಟ್ ಯುಗದಲ್ಲಿ ಫೋಟೋಗಳು ಮತ್ತು ವೀಡಿಯೊಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಇತ್ತೀಚೆಗೆ, ಬಾತುಕೋಳಿ(Duck)ಯ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಭಾರಿ ವೈರಲ್ ಆಗುತ್ತಿದ್ದು ಈ ವಿಡಿಯೋ ನಿಮಗೂ ಕೂಡ ಆಶ್ಚರ್ಯಕ್ಕೆ ಈಡು ಮಾಡಲಿದೆ. ವಿಡಿಯೋ ಅನ್ನು ಭಾನುವಾರ ಹಂಚಿಕೊಳ್ಳಲಾಗಿರುವ ಈ ವಿಡಿಯೋದಲ್ಲಿ ಬಾತುಕೋಳಿಯೊಂದು ಸಾಮಾನ್ಯ ಮನುಷ್ಯರಂತೆ ಬಿಂದಾಸ್ ಜಿಮ್ ಮಾಡುತ್ತಿದೆ.

ತನ್ನ ಫಿಟ್ನೆಸ್ ಕುರಿತು ತುಂಬಾ ಜಾಗರೂಕವಾಗಿದೆ ಈ ಬಾತುಕೋಳಿ
ಈ ವಿಡಿಯೋದಲ್ಲಿ ಕಾಣಿಸಿಕೊಂಡಿರುವ ಬಾತುಕೋಳಿ ತನ್ನ ಫಿಟ್ನೆಸ್ ಕುರಿತಂತೆ ಜಾಗರೂಕವಾಗಿದೆ. ಈ ವಿಡಿಯೋದಲ್ಲಿ ಬಾತುಕೋಳಿ ಸ್ವಯಂ ಚಾಲಿತ ಟ್ರೇಡ್ ಮಿಲ್ ಮುಂದೆ ನಿಂತಿದೆ. ನೋಡುತ್ತಲೇ ಈ ಬಾತುಕೋಳಿ ಟ್ರೇಡ್ ಮಿಲ್ ಮೇಲೆ ಹತ್ತಿ ಕುಳಿತುಕೊಳ್ಳುತ್ತದೆ. ಈ ಟ್ರೇಡ್ ಮಿಲ್ ಚಲಿಸುತ್ತಲೇ ಬಾತುಕೋಳಿ ಕೂಡ ತನ್ನ ಕಾಲುಗಳನ್ನು ಟ್ರೇಡ್ ಮಿಲ್ ವೇಗಕ್ಕೆ ಅನುಗುಣವಾಗಿ ಚಲಿಸಲು ಪ್ರಾರಂಭಿಸುತ್ತದೆ. ಈ ವಿಡಿಯೋ ನೋಡಲು ಕೂಡ ತುಂಬಾ ಹಾಸ್ಯಮಯವಾಗಿದೆ.

ಈ ವಿಡಿಯೋ ಅನ್ನು ಭಾರತೀಯ ಒನ್ ಸೇವಾ ಅಧಿಕಾರಿಯಾಗಿರುವ ಸುಶಾಂತ್ ನಂದಾ ಸಾಮಾಜಿಕ ಮಾಧ್ಯಮಗಳ ಮೇಲೆ ಹಂಚಿಕೊಂಡಿದ್ದಾರೆ. ಈ ವಿಡಿಯೋ ಅನ್ನು ಹಂಚಿಕೊಂಡಿರುವ ಅವರು 'ಭಾನುವಾರದ ಮೂಡ್' ಎಂದು ಕ್ಯಾಪ್ಶನ್ ಬರೆದಿದ್ದಾರೆ. ಸುಶಾಂತ್ ನಂದಾ ಅವರ ಈ ವಿಡಿಯೋ ಅನ್ನು ಈಗಾಗಲೇ ಸುಮಾರು 14 ಸಾವಿರಕ್ಕೂ ಅಧಿಕ ಜನರು ವಿಕ್ಷೀಸಿದ್ದಾರೆ. 160 ಅಧಿಕ ಜನರು ಇದಕ್ಕೆ ಲೈಕ್ ನೀಡಿದ್ದಾರೆ. ಇನ್ನೊಂದೆಡೆ ಈ ವಿಡಿಯೋಗೆ ಸ್ವಾರಸ್ಯಕರ ಕಾಮೆಂಟ್ ಕೂಡ ಬರುತ್ತಿವೆ.

Trending News