ನವದೆಹಲಿ: ಬಾಬ್ರಿ ಮಸೀದಿ ಧ್ವಂಸ ಪ್ರಕರಣದಲ್ಲಿ ವಿಶೇಷ ಸಿಬಿಐ ನ್ಯಾಯಾಲಯದ ತೀರ್ಪಿನ ನಂತರ, ಎಐಐಎಂ ಮುಖ್ಯಸ್ಥ ಮತ್ತು ಹೈದರಾಬಾದ್ ಸಂಸದ ಅಸದುದ್ದೀನ್ ಒವೈಸಿ (Asaduddin Owaisi) ತಮ್ಮ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಟ್ವಿಟರ್ನಲ್ಲಿ ಶಾಯರಿ ಬರೆಯುವ ಮೂಲಕ ನಿರ್ಧಾರದ ಬಗ್ಗೆ ಅವರು ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಈ ಕುರಿತು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಬರೆದುಕೊಂಡಿರುವ ಅಸದುದ್ದೀನ್, " ವಹೀ ಕಾತಿಲ್, ವಹಿ ಮುಸಿಫ್ ಅದಾಲತ್ ಉಸ್ಕಿ, ವೋ ಶಹೀದ್, ಬಹುತ್ ಸೆ ಫೈಸಲೋ ಮೇ ಅಬ ತರಫ್ದಾರಿ ಭಿ ಹೋತಿ ಹೈ" ಎಂದು ಬರೆದುಕೊಂಡಿದ್ದಾರೆ. ಅಂದರೆ, " ಅದೇ ಕೊಲೆಗಾರ, ಅದೇ ನ್ಯಾಯಾಲಯ, ತುಂಬಾ ಪ್ರಕರಣಗಳಲ್ಲಿ ಇದೀಗ ಶಿಫಾರಸ್ಸು ಕೂಡ ನಡೆಯುತ್ತದೆ" ಎಂದಿದ್ದಾರೆ.
ಇದನ್ನು ಓದಿ- 'ಬಾಬ್ರಿ ಮಸೀದಿ ಇತ್ತು ಮತ್ತು ಇರಲಿದೆ, ಇನ್ಷಾ ಅಲ್ಲಾಹ್': Owaisi
वही क़ातिल वही मुंसिफ़ अदालत उस की वो शाहिद
बहुत से फ़ैसलों में अब तरफ़-दारी भी होती है— Asaduddin Owaisi (@asadowaisi) September 30, 2020
'ಸಿಬಿಐ ನ್ಯಾಯಾಲಯದ ಇಂದಿನ ನಿರ್ಧಾರವು ಭಾರತದ ನ್ಯಾಯಾಲಯದ ದಿನಾಂಕಗಳ ಕರಾಳ ದಿನವಾಗಿದೆ ಎಂದು ಅಸದುದ್ದೀನ್ ಒವೈಸಿ ಹೇಳಿದ್ದಾರೆ. ಅಷ್ಟೇ ಅಲ್ಲ ಜಾದೂ ಮೂಲಕ ಮಸೀದಿಯನ್ನು ಕಣ್ಮರೆ ಮಾಡಲಾಗಿದೆಯೇ? ಮ್ಯಾಜಿಕ್ ನಡೆಸುವ ಮೂಲಕ ಅಲ್ಲಿ ಮೂರ್ತಿಗಳನ್ನು ಇರಿಸಲಾಗಿದೆಯೇ? ಜಾದೂ ಮೂಲಕ ಅಲ್ಲಿನ ಬೀಗಗಳನ್ನು ತೆರೆಯಲಾಗಿದೆಯೇ? ಎಂದು ಪ್ರಷ್ಟಿಸಿದ್ದಾರೆ. 9 ನವೆಂಬರ್ ರಂದು ಸುಪ್ರೀಂ ನೀಡಿರುವ ತೀರ್ಪಿಗೆ ಇಂದಿನ ತೀರ್ಪು ವಿರುದ್ಧವಾಗಿದೆ. ಅಡ್ವಾಣಿ ಅವರ ರಥಯಾತ್ರೆ ಎಲ್ಲೆಲ್ಲಿ ಸಾಗಿದೆಯೋ ಅಲ್ಲಲ್ಲಿ ಹಿಂಸಾಚಾರ ನಡೆದಿದೆ, ಲೂಟಿ ನಡೆದಿದೆ' ಎಂದು ಒವೈಸಿ ಹೇಳಿದ್ದಾರೆ.
Today is a sad day in the history of Indian judiciary. Now, the court says there was no conspiracy. Please enlighten me, how many days of months of preparations are required to disqualify an action from being spontaneous?: Asaduddin Owaisi, on the #BabriMasjidDemolitionVerdict pic.twitter.com/iMumkda50l
— ANI (@ANI) September 30, 2020
ಮಸೀದಿ ಧ್ವಂಸದ ವೇಳೆ ಮತ್ತೊಂದು ಪೆಟ್ಟು ನೀಡಿ, ಮಸೀದಿಯನ್ನು ಧ್ವಂಸಗೊಳಿಸಿ ಎಂದು ಉಮಾ ಭಾರತಿ ಕರೆ ನೀಡಿರುವುದು ಸುಲ್ಲಾಗಿದೆಯೇ. ಮಸೀದಿ ಧ್ವಂಸದ ಬಳಿಕ ಉಮಾ ಭಾರತಿ, ಲಾಲಕೃಷ್ಣ ಅಡ್ವಾಣಿ ಸಿಹಿ ಸವಿಯುತ್ತಿರಲಿಲ್ಲವೇ?" ಎಂದು ಒವೈಸಿ ಪ್ರಶ್ನಿಸಿದ್ದಾರೆ. "ಸಿಬಿಐ ಈ ತೀರ್ಪಿನ್ನು ಪ್ರಶ್ನಿಸಲಿದೆಯೇ ಅಥವಾ ಇಲ್ಲವೆ ಎಂಬುದು ನನಗೆ ಗೊತ್ತಿಲ್ಲ. ಆದರೆ, ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ನ್ಯಾಯ ಮಂಡಳಿ (AIMPB) ಈ ತೀರ್ಪನ್ನು ಪ್ರಶ್ನಿಸಲಿದೆ ಎಂಬ ಭರವಸೆ ನಾನು ಹೊಂದಿದ್ದೇನೆ. ಅಂದಿನ ಪತ್ರಕರ್ತರು ಹಾಗೂ ಪೋಲೀಸ್ ಅಧಿಕಾರಿಗಳಿಗೆ ನನ್ನ ಸಾಂತ್ವನಗಳು. ಏಕೆಂದರೆ ಇದೊಂದು ಸುನಿಯೋಜಿತ ಘಟನೆಯಾಗಿತ್ತು ಎಂದು ನ್ಯಾಯಾಲಯದಲ್ಲಿ ಹೇಳಿಕೆ ನೀಡಿದ್ದಾರೆ. ಆದರೆ, ಕೋರ್ಟ್ ಅವರ ವಾದವನ್ನು ಕೂಡ ಪುರಸ್ಕರಿಸಿಲ್ಲ" ಎಂದು ಒವೈಸಿ ಹೇಳಿದ್ದಾರೆ.
ಇದನ್ನು ಓದಿ- ಕೃಷ್ಣ ಜನ್ಮಭೂಮಿ ವಿವಾದಕ್ಕೆ ಸಂಬಂಧಿಸಿದಂತೆ Asaduddin Owaisi ಗಂಭೀರ ಹೇಳಿಕೆ
ಅಯೋಧ್ಯೆಯಲ್ಲಿ ಡಿಸೆಂಬರ್ 6, 1992ರಲ್ಲಿ ವಿವಾದಿತ ಬಾಬ್ರಿ ಮಸೀದಿ ಧ್ವಂಸಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯ ಇಂದು ತನ್ನ ತೀರ್ಪು ಪ್ರಕಟಿಸಿದ್ದು, ಪ್ರಕರಣದ ಎಲ್ಲಾ 32 ಆರೋಪಿಗಳನ್ನು ಖುಲಾಸೆಗೊಳಿಸಿದೆ. ನ್ಯಾಯಾಲಯ ಈ ಪ್ರಕರಣದಲ್ಲಿ ಬಿಜೆಪಿಯ ವರಿಷ್ಠ ಮುಖಂಡ ಲಾಲ್ ಕೃಷ್ಣ ಅಡ್ವಾಣಿ, ಮುರಳಿ ಮನೋಹರ್ ಜೋಷಿ, ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್, ಉಮಾ ಭಾರತಿ , ವಿನಯ್ ಕಟಿಯಾರ್ ಸೇರಿದಂತೆ ಎಲ್ಲ 32 ಆರೋಪಿಗಳನ್ನು ಸಾಕ್ಷಾಧಾರದ ಕೊರತೆಯ ಹಿನ್ನೆಲೆ ಖುಲಾಸೆಗೊಳಿಸಿದೆ ಎಂಬುದು ಇಲ್ಲಿ ಗಮನಾರ್ಹ.