ಬೆಂಗಳೂರು: ಕೆಪಿಎಸ್ ಸಿ ಮುಖ್ಯ ಪರೀಕ್ಷೆ ಹಾಗೂ ಯುಪಿಎಸ್ಸಿ ಪರೀಕ್ಷೆಗಳು ಒಂದು ತಿಂಗಳಲ್ಲಿಯೇ ಹಿಂದೆ ಮುಂದೆ ಇದ್ದ ಕಾರಣ, ಉದ್ಯೋಗಾಕಾಂಕ್ಷಿಗಳಿಗೆ ಗೊಂದಲಕ್ಕೆ ಎಡೆ ಮಾಡಿಕೊಟ್ಟಿತ್ತು. ಅಲ್ಲದೇ ಪರೀಕ್ಷೆ ತಯಾರಿಗೂ ಸಮಸ್ಯೆ ಉಂಟಾಗಿತ್ತು. ಇಂತಹ ಪರೀಕ್ಷೆ ಮುಂದೂಡಿಕೆಗೆ ಸಿಎಂ ಯಡಿಯೂರಪ್ಪ ಕಳೆದ ನಿನ್ನೆ ಸೂಚಿಸಿದ್ದರು. ಈ ಹಿನ್ನಲೆಯಲ್ಲಿ ಕೆಪಿಎಸ್ ಸಿ(KPSC) ಯ ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಗ್ರೂಪ್ ಬಿ ವೃಂದದ ಹುದ್ದೆಗಳ ಪರೀಕ್ಷೆಯನ್ನು ಫೆಬ್ರವರಿ 13, 2021ಕ್ಕೆ ಮುಂದೂಡಿಕೆ ಮಾಡಲಾಗಿದೆ.
ಬಿಜೆಪಿಯಲ್ಲಿ 'ಹೊಸ ಬಾಂಬ್' ಸಿಡಿಸಿದ ರೇಣುಕಾಚಾರ್ಯ..!
ಗೆಜೆಟೆಡ್ ಪ್ರೊಬೇಷನರಿ ಗ್ರೂಪ್ ಎ ಮತ್ತು ಬಿ ವೃಂದದ ಹುದ್ದೆಗಳಿಗೆ ನಡೆಯಲಿರುವ ಮುಖ್ಯ ಪರೀಕ್ಷೆಯನ್ನು ದಿನಾಂಕ 13-02-2021ರಿಂದ ದಿನಾಂಕ 16-02-2021ರವರೆಗೆ 4 ದಿನಗಳ ಕಾಲ ನಡೆಸಲಿರುವುದಾಗಿ ದಿನಾಂಕವನ್ನು ಪ್ರಕಟಿಸಿದೆ.
ತಾಕತ್ತಿದ್ರೆ ಬೈ ಎಲೆಕ್ಷನ್ ನಲ್ಲಿ EVM ಇಲ್ದೆ ಗೆದ್ದು ತೋರಿಸಲಿ: ಬಿಜೆಪಿಗೆ ಸವಾಲು ಹಾಕಿದ ಮಾಜಿ ಸಚಿವ
ಅಂದಹಾಗೇ, ಕೇಂದ್ರ ಲೋಕಸೇವಾ ಅಯೋಗ ಪರೀಕ್ಷೆಗಳು 2021 ರ ಜನವರಿ 8 ರಿಂದ 10 ರವರೆ ಹಾಗೂ 16, 17 ರಂದು ನಡೆಯಲಿವೆ. ಕರ್ನಾಟಕ ಲೋಕಸೇವಾ ಆಯೋಗ ಪರೀಕ್ಷೆಗಳು 2020 ರ ಡಿಸೆಂಬರ್ 21 ರಿಂದ 24 ಮತ್ತು ಜನವರಿ 02 ರಿಂದ 05 ರವರೆಗೆ ನಿಗದಿಯಾಗಿದ್ದವು.
ಇಂದು ಬೆಂಗಳೂರು ಟೆಕ್ ಶೃಂಗಸಭೆ ಉದ್ಘಾಟಿಸಲಿರುವ ಮೋದಿ
ಯುಪಿಎಸ್ಸಿ ಸಿವಿಲ್ ಪರೀಕ್ಷೆಗಳಿಗೆ ತಯಾರಿ ನಡೆಸುವವರು ಕೆಎಎಸ್ ಪರೀಕ್ಷೆಗಳಿಗೂ ಸಿದ್ಧತೆ ನಡೆಸುತ್ತಿರುತ್ತಾರೆ. ಆದರೆ ಸಿದ್ಧತೆ ಸಂಪೂರ್ಣವಾಗಿ ಭಿನ್ನವಾಗಿರುತ್ತದೆ. ನಿರಂತರವಾಗಿ ಪರೀಕ್ಷೆಗಳನ್ನು ಎದುರಿಸಬೇಕಾದಾಗ ತಯಾರಿಯಲ್ಲಿ ಭಿನ್ನತೆ ಕಾರಣ, ಕೆಪಿಎಸ್ಸಿ ಗಮನದಲ್ಲಿಟ್ಟುಕೊಂಡು ವೇಳಾಪಟ್ಟಿ ನಿಗದಿ ಪಡಿಸಬೇಕಿತ್ತು ಎಂಬುದು ಅಭ್ಯರ್ಥಿಗಳ ಒತ್ತಾಯಿಸಿದ್ದರು. ಇಂತಹ ಒತ್ತಾಯಕ್ಕೆ ಮಣಿದು, ಇದೀಗ ಕೆಪಿಎಸ್ಸಿಯ ಗೆಜೆಟೆಡ್ ಪ್ರೊಬೇಷನರಿ ಮುಖ್ಯ ಪರೀಕ್ಷೆಯನ್ನು ದಿನಾಂಕ 13-02-2021ರಿಂದ ದಿನಾಂಕ 16-02-2021ರವರೆಗೆ ನಡೆಸಲು ಮುಂದೂಡಿಕೆ ಮಾಡಲಾಗಿದೆ.