15 ಸೆಕೆಂಡ್ ಗಳಿಗಿಂತಲೂ ಕಮ್ಮಿ ಅವಧಿಯಲ್ಲಿ No Cost EMI ಮೇಲೆ ವಸ್ತುಗಳನ್ನು ಖರೀದಿಸಿ

ಹಬ್ಬದ ಋತುವಿನ ಬಳಿಕವೂ ಕೂಡ, ನೀವು ಕೆಲವು ರೀತಿಯ ಎಲೆಕ್ಟ್ರಾನಿಕ್ ಅಥವಾ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಸಾಲವನ್ನು ಬಡ್ಡಿ ಇಲ್ಲದೆ 15 ಸೆಕೆಂಡುಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ.

Last Updated : Nov 22, 2020, 05:12 PM IST
  • ಹಬ್ಬದ ಋತುವಿನ ಬಳಿಕವೂ ಕೂಡ ವಸ್ತುಗಳ ಖರೀದಿಗೆ ಯೋಜನೆ ರೂಪಿಸಿದ್ದೀರಾ?
  • ಈ ಹೊಸ ಕಂಪನಿ ನಿಮಗೆ ನೀಡಲಿದೆ No Cost EMI ಆಯ್ಕೆ.
  • ಎಂ-ಸ್ವೈಪ್ ತನ್ನ ಪ್ರಿಪೇಯ್ಡ್ ಮನಿಬ್ಯಾಕ್ ಕಾರ್ಡ್ ಅನ್ನು ಸಹ ನೀಡುತ್ತಿದೆ.
15 ಸೆಕೆಂಡ್ ಗಳಿಗಿಂತಲೂ ಕಮ್ಮಿ ಅವಧಿಯಲ್ಲಿ No Cost EMI ಮೇಲೆ ವಸ್ತುಗಳನ್ನು ಖರೀದಿಸಿ title=

ನವದೆಹಲಿ: ಹಬ್ಬದ ಋತುವಿನ ಬಳಿಕವೂ ಕೂಡ, ನೀವು ಕೆಲವು ರೀತಿಯ ಎಲೆಕ್ಟ್ರಾನಿಕ್ ಅಥವಾ ಗೃಹೋಪಯೋಗಿ ಉತ್ಪನ್ನಗಳನ್ನು ಖರೀದಿಸಲು ಯೋಜಿಸುತ್ತಿದ್ದರೆ, ನಿಮ್ಮ ಸಾಲವನ್ನು ಬಡ್ಡಿ ಇಲ್ಲದೆ 15 ಸೆಕೆಂಡುಗಳಲ್ಲಿ ಪ್ರಕ್ರಿಯೆಗೊಳಿಸಲಾಗುತ್ತದೆ. ಅದನ್ನು ನೀವು No Cost EMI ರೂಪದಲ್ಲಿ ಮರುಪಾವತಿಸಬಹುದು. ಕನ್ಸ್ಯೂಮರ್ ಡಿಮಾಂಡ್ ಹೆಚ್ಚಾದ ಕಾರಣ ಹಲವು ಹೊಸ ಕಂಪನಿಗಳು ಗ್ರಾಯಕರಿಗೆ Buy now, Pay later ಆಪ್ಶನ್ ನೀಡುತ್ತಿವೆ.

ಇದನ್ನು ಓದಿ- Home Loan ಇಎಂಐನಲ್ಲಿ ನಿಮಗೆ ಪರಿಹಾರ ಸಿಗುತ್ತದೆಯೇ?

M-Swipe ಆರಂಭಿಸಿದೆ ಈ ಕೊಡುಗೆ
ಪಾಯಿಂಟ್ ಆಫ್ ಸೆಲ್ ಕಂಪನಿಯಾಗಿರುವ M-Swipe ಕೇವಲ 15 ಸೆಕೆಂಡ್ ಗಿಂತಲೂ ಕಡಿಮೆ ಅವಧಿಯಲ್ಲಿ ವ್ಯಾಪಾರಿಗಳಿಗೆ ಶೂನ್ಯ ಬಡ್ಡಿದರದಲ್ಲಿ ವ್ಯಾಪಾರಿಗಳಿಗೆ EMI ಲೋನ್ ಆಯ್ಕೆಯನ್ನು ನೀಡುತ್ತಿದೆ. ಇದರಿಂದ ಸಣ್ಣ ವ್ಯಾಪಾರಿಗಳಿಗೆ ತಮ್ಮ ಸರಕು ಮಾರಾಟ ಮಾಡಲು ಅನುಕೂಲವಾಗಲಿದೆ. ಇದಕ್ಕಾಗಿ ಕಂಪನಿ ತನ್ನ ನೂತನ ಉತ್ಪನ್ನ Brand EMI ಬಿಡುಗಡೆಗೊಳಿಸಿದೆ.  ವಿವಿಧ ಬ್ಯಾಂಕುಗಳು ನೀಡುವ ಎಲ್ಲಾ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಶೇಕಡಾ 95 ರಷ್ಟು ವ್ಯಾಪ್ತಿಯನ್ನು ಹೊಂದಿರುವ ಎಂ-ಸ್ವೈಪ್, ಗ್ರಾಹಕರಿಗೆ ಬ್ರ್ಯಾಂಡ್ ಇಎಂಐ ಹೆಚ್ಚಿನ ಆಯ್ಕೆ ಮತ್ತು ಫ್ಲೆಕ್ಸಿಬಿಲಿಟಿ ಒದಗಿಸುತ್ತದೆ, ಆಗಾಗ್ಗೆ ಖರೀದಿ ನಿರ್ಧಾರಗಳ ಚೆಕ್ ಔಟ್ ಸಮಯದಲ್ಲಿ ನೆಚ್ಚಿನ ಇಎಂಐ ಆಯ್ಕೆಗಳ ಕೊರತೆಯಿಂದಾಗಿ ಖರೀದಿ ನಿರ್ಣಯಗಳಲ್ಲಿ ವಿಳಂಬವಾಗುತ್ತದೆ.

ಇದನ್ನು ಓದಿ- Home Loan ಗ್ರಾಹಕರಿಗೆ ಎಸ್‌ಬಿಐ ನೀಡುತ್ತಿದೆ ಆಕರ್ಷಕ ಕೊಡುಗೆ, EMI ಎಷ್ಟು ಕಡಿಮೆಯಾಗಲಿದೆ?

ಈ ಉತ್ಪನ್ನಗಳಿಗೆ ಶೀಘ್ರದಲ್ಲಿಯೇ ಸಾಲ
ಬ್ರಾಂಡ್ EMI ಆಯ್ಕೆ ಮೊಬೈಲ್, ಕನ್ಸ್ಯೂಮರ್ ಡ್ಯುರೆಬಲ್ಸ್,, ಶಿಕ್ಷಣ, ಆರೋಗ್ಯ, ಪೀಠೋಪಕರಣಗಳು, ವೆಲ್ನೆಸ್ ಹಾಗೂ ಲಕ್ಷುರಿ ಸೆಗ್ಮೆಂಟ್ ನಲ್ಲಿ ಸರಕು ಖರೀದಿಗಾಗಿ ಬಂದ ಗ್ರಾಹಕರಿಗೆ ಸ್ಟೋರ್ ವತಿಯಿಂದ ನೀಡಲಾಗುವುದು. ಇದರಿಂದ ಗ್ರಾಹಕರು ಯಾವುದೇ ರೀತಿಯ ಬಡ್ಡಿ ಇಲ್ಲದೆ, ಸುಲಭವಾದ ಕಂತುಗಳಲ್ಲಿ ತಮ್ಮ ನೆಚ್ಚಿನ ವಸ್ತುವನ್ನು ಮನೆಗೆ ಖರೀಸಿಸಿ ಕೊಂಡೊಯ್ಯಬಹುದು. ಭಾರತದಲ್ಲಿ ಎಸ್‌ಎಂಇ ಗಳಿಗಾಗಿ ಪೂರ್ಣ ಪ್ರಮಾಣದ ಡಿಜಿಟಲ್ ಪಾವತಿ ಪರಿಹಾರಗಳನ್ನು ಹೊಂದಿರುವ ಏಕೈಕ ಪ್ಲೇಯರ್ ಎಂ-ಸ್ವೈಪ್ ಆಗಿದೆ. ಇದರಲ್ಲಿ ಯುಪಿಐ ಕ್ಯೂಆರ್, ಎನ್‌ಎಫ್‌ಸಿ ಆಧಾರಿತ ಟ್ಯಾಪ್ ಮತ್ತು ಪೇ, ಪಿಒಎಸ್ ಮತ್ತು ಪಾವತಿ ಲಿಂಕ್‌ಗಳು ಸೇರಿವೆ. 6.75 ಲಕ್ಷ ಪಿಓಎಸ್ ಮತ್ತು 1.1 ಮಿಲಿಯನ್ ಕ್ಯೂಆರ್ ವ್ಯಾಪಾರಿಗಳನ್ನು ಹೊಂದಿರುವ ಭಾರತದ ಅತಿದೊಡ್ಡ ಪಿಓಎಸ್ ಸ್ವಾಧೀನಪಡಿಸಿಕೊಂಡಿರುವ  ಎಂ-ಸ್ವೈಪ್ ತನ್ನ ಪ್ರಿಪೇಯ್ಡ್ ಮನಿಬ್ಯಾಕ್ ಕಾರ್ಡ್ ಅನ್ನು ಸಹ ನೀಡುತ್ತಿದೆ.

Trending News