ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ 'ಸೆಡ್ಡು ಹೊಡೆದ' ಕೇರಳ ಸರ್ಕಾರ!

ರೈತರ ವಿರೋಧ ಹೊಂದಿರುವ ಕೃಷಿ ಮಸೂದೆಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ ಹಾಗೂ ಈ ವಾರವೇ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ

Last Updated : Dec 8, 2020, 01:10 PM IST
  • ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧ ತೊಡೆ ತಟ್ಟಿದ ಕೇರಳ ಸರ್ಕಾರ
  • ರೈತರ ವಿರೋಧ ಹೊಂದಿರುವ ಕೃಷಿ ಮಸೂದೆಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ ಹಾಗೂ ಈ ವಾರವೇ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ
  • ಕೇರಳ ಕೃಷಿ ಸಚಿವ ವಿ.ಎಸ್​. ಸುನೀಲ್​ ಕುಮಾರ್​ ತ್ರಿಶೂರ್​ನಲ್ಲಿ ಹೇಳಿಕೆ
ಕೇಂದ್ರ ಸರ್ಕಾರದ ಕೃಷಿ ಮಸೂದೆಗೆ 'ಸೆಡ್ಡು ಹೊಡೆದ' ಕೇರಳ ಸರ್ಕಾರ! title=

ಕೇರಳ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿವಾದಾತ್ಮಕ ಕೃಷಿ ಮಸೂದೆ ವಿರುದ್ಧ ಕೇರಳ ಸರ್ಕಾರ ತೊಡೆ ತಟ್ಟಿದೆ.

ರೈತರ ವಿರೋಧ ಹೊಂದಿರುವ ಕೃಷಿ ಮಸೂದೆ(Agriculture Amendment)ಯನ್ನ ನಮ್ಮ ರಾಜ್ಯದಲ್ಲಿ ಜಾರಿಗೆ ತರೋದಿಲ್ಲ ಹಾಗೂ ಈ ವಾರವೇ ಮಸೂದೆ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಅಂತಾ ಕೇರಳ ಕೃಷಿ ಸಚಿವ ವಿ.ಎಸ್​. ಸುನೀಲ್​ ಕುಮಾರ್​ ತ್ರಿಶೂರ್​ನಲ್ಲಿ ಹೇಳಿದ್ದಾರೆ.

Jio 5G: ಜಿಯೋ ಮೂಲಕ ನಾವು ಸ್ವಾವಲಂಬಿ ಭಾರತದ ಕನಸನ್ನು ಈಡೇರಿಸುತ್ತೇವೆ- ಮುಖೇಶ್ ಅಂಬಾನಿ

ಕೇರಳದಲ್ಲಿ ನಾವು ಕೃಷಿ ಕಾನೂನುಗಳನ್ನ ಜಾರಿಗೆ ತರೋದಿಲ್ಲ. ಇದಕ್ಕಾಗಿ ಕೇಂದ್ರ ಸರ್ಕಾರ ನಮ್ಮ ವಿರುದ್ಧ ಯಾವುದೇ ಕ್ರಮ ಕೈಗೊಂಡರೂ ಸಹ ಅದನ್ನ ಎದುರಿಸೋಕೆ ರಾಜ್ಯ ಸರ್ಕಾರ ಸಿದ್ಧವಾಗಿದೆ. ಕೇಂದ್ರದ ಈ ಕಾನೂನು ರಾಜ್ಯ ಸರ್ಕಾರಗಳ ಅಧಿಕಾರ ಕಸಿದುಕೊಳ್ಳುವುದಕ್ಕೆ ಪೂರಕವಾಗಿದೆ. ಈ ಕಾನೂನುಗಳ ವಿರುದ್ಧ ನಾವು ಈ ವಾರವೇ ಸುಪ್ರೀಂ ಕೋರ್ಟ್ ಮೆಟ್ಟಿಲೇರಲಿದ್ದೇವೆ ಅಂತಾ ಸುನೀಲ್​ ಕುಮಾರ್​ ಗುಡುಗಿದ್ದಾರೆ.

ಸಿಎಂ ಅರವಿಂದ್ ಕೇಜ್ರಿವಾಲ್ ರನ್ನು ಅರೆಸ್ಟ್ ಮಾಡಿದ ದೆಹಲಿ ಪೊಲೀಸರು!

Trending News