ನವದೆಹಲಿ: ಹೈ ಸ್ಪೀಡ್ (High Speed Train), ಬುಲೆಟ್ ಟ್ರೈನ್ (Bullet Train) ಆಯ್ತು. ಈಗ ಡ್ರೈವರ್ ಲೆಸ್ ರೈಲಿನ (Driverless Train) ಸರದಿ. ಹೌದು, ಚಾಲಕನೇ ಇಲ್ಲದೆ ಚಲಿಸುವ ರೈಲಿಗೆ ಇಂದು ಚಾಲನೆ ನೀಡಲಾಗುತ್ತಿದೆ.
ನಂಬೋದಿಕ್ಕೆ ಸ್ವಲ್ಪ ಕಷ್ಟ. ಆದರೆ ನಿಜವಾಗಿಯೂ ಇಂಥ ಪ್ರಯೋಗ ಆಗುತ್ತಿದೆ. ದೆಹಲಿ ಮೆಟ್ರೊ ರೈಲು ನಿಗಮವು (Delhi Metro Rail Corporation) ಇಂಥ ಪ್ರಯೋಗಕ್ಕೆ ಮುಂದಾಗಿದೆ. ಇದರಿಂದಾಗಿ ದೇಶದ ಮೊಟ್ಟ ಮೊದಲ ಪೂರ್ಣ ಆಟೊಮ್ಯಾಟಿಕ್ ಚಾಲಕರಹಿತ ಮೆಟ್ರೊ ರೈಲು ಸೇವೆಗೆ ಚಾಲನೆ ಸಿಗಲಿದೆ.
ಪ್ರಧಾನ ಮಂತ್ರಿ ನರೇಂದ್ರ ಮೋದಿ (Narendra Modi) ಇಂದು ದೆಹಲಿಯಲ್ಲಿ ಆಟೊಮ್ಯಾಟಿಕ್ ಚಾಲಕರಹಿತ ಮೆಟ್ರೊ ರೈಲು ಸೇವೆಗೆ ಚಾಲನೆ ನೀಡಲಿದ್ದಾರೆ. ಮಧ್ಯಾಹ್ನ 12.30ಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲಕರಹಿತ ಮೆಟ್ರೊ ರೈಲು ಸೇವೆಗೆ ಚಾಲನೆ ಸಿಗಲಿದೆ ಎಂದು ದೆಹಲಿ ಮೆಟ್ರೊ ರೈಲು ನಿಗಮವು (DMRC) ತಿಳಿಸಿದೆ.
ಇದನ್ನೂ ಓದಿ: 'ದೆಹಲಿಯಲ್ಲಿನ ಕೆಲವು ಜನರು ನನಗೆ ಪ್ರಜಾಪ್ರಭುತ್ವದ ಪಾಠ ಹೇಳಲು ಬಯಸುತ್ತಿದ್ದಾರೆ'
ಮೊದಲ ಆಟೊಮ್ಯಾಟಿಕ್ ಮೆಟ್ರೋ ರೈಲು ದೆಹಲಿಯ ಜನಕಪುರಿ ವೆಸ್ಟ್ ಮೆಟ್ರೋ ಸ್ಟೇಷನ್ ನಿಂದ ಬೊಟಾನಿಕಲ್ ಗಾರ್ಡನ್ ಮೆಟ್ರೋ ಸ್ಟೇಷನ್ ವರೆಗೆ ಬ್ಲ್ಯೂ ಲೈನ್ (Blue Line) ಮಾರ್ಗದಲ್ಲಿ 37 ಕಿಲೋ ಮೀಟರ್ ದೂರ ಸಂಚರಿಸಲಿದೆ.
ಇದಲ್ಲದೆ ಇಂದು 23 ಕಿ.ಮೀ ವಿಮಾನ ನಿಲ್ದಾಣದ ಮಾರ್ಗದಲ್ಲಿ (Airport Metro Line)
ಸಂಚರಿಸಲು ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (National Common Mobility Card) ಅನ್ನೂ ಸಹ ಬಿಡುಗಡೆಗೊಳಿಸಲಾಗುವುದು. ಈ ಕಾರ್ಯಕ್ರಮ ಕೂಡ ವಿಡಿಯೊ ಕಾನ್ಫರೆನ್ಸ್ ಮುಖಾಂತರವೇ ನಡೆಯಲಿದೆ ಎಂದು ದೆಹಲಿ ಮೆಟ್ರೊ (Metro) ರೈಲು ನಿಗಮದ ಪ್ರಕಟಣೆ ತಿಳಿಸಿದೆ.
ಇದನ್ನೂ ಓದಿ: Unlock-4: ಮೆಟ್ರೋದಲ್ಲಿ ಈಗ ಯಾವುದೇ ಟೋಕನ್ ಕೆಲಸ ಮಾಡಲ್ಲ, ತಿಳಿಯಿರಿ ಹೊಸ ನಿಯಮ
ದೇಶದ ಬೇರೆ ಬೇರೆ ನಗರಗಳಲ್ಲಿ ಇರುವ ಮೆಟ್ರೊ ರೈಲು, ಬಸ್ಗಳಲ್ಲಿ ಸಂಚರಿಸಲು ಅನುಕೂಲವಾಗುವಂತೆ 2019ರಲ್ಲೇ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ ಬಳಕೆಗೆ ಚಾಲನೆ ನೀಡಲಾಗಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.