Sandalwood : ಪೊಗರು ಚಿತ್ರದ ತೆಲುಗು, ತಮಿಳಿನ ಟ್ರೇಲರ್ ಬಿಡುಗಡೆ

ಪೊಗರು ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್ ಗಳನ್ನು ಬಿಡುಗಡೆ ಮಾಡಲಾಗಿದೆ.  ಕನ್ನಡದ ಟ್ರೇಲರ್ ನಂತೆಯೇ ತಮಿಳು ತೆಲುಗು ಟ್ರೇಲರ್ ಕೂಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಲಿದೆ ಎಂಬುದು ಚಿತ್ರ ತಂಡದ ನಿರೀಕ್ಷೆ.

Written by - Zee Kannada News Desk | Last Updated : Jan 1, 2021, 02:31 PM IST
  • ಪೊಗರು ಸಿನಿಮಾ ತಮಿಳು ಮತ್ತು ತೆಲುಗಿನ ಟ್ರೇಲರ್ ರಿಲೀಸ್
  • ತೆಲುಗಿನಲ್ಲಿ ಟೈಟಲ್ ಪೊಗರು, ತಮಿಳಿನಲ್ಲಿ ಸೆಮ್ಮಾ ತಿಮಿರು..!
  • ಹಿಂದಿ ಡಬ್ಬಿಂಗ್ ರೈಟ್ಸ್ 7.2 ಕೋಟಿಗೆ ಮಾರಾಟ
Sandalwood :  ಪೊಗರು ಚಿತ್ರದ ತೆಲುಗು, ತಮಿಳಿನ ಟ್ರೇಲರ್ ಬಿಡುಗಡೆ  title=
ಪೊಗರು ತಮಿಳು, ತೆಲುಗು ಡೈಲಾಗ್ ಟ್ರೇಲರ್ ರಿಲೀಜ್ (photo Dhrva Sarja Tweeter)

ಬೆಂಗಳೂರು : ಧ್ರುವ ಸರ್ಜಾ (Dhruva Sarja) ಅಭಿಮಾನಿಗಳಿಗೆ ಹೊಸ ವರ್ಷದ ಭರ್ಜರಿ ಗಿಫ್ಟನ್ನೇ ನೀಡಿದ್ದಾರೆ. ಧ್ರುವ ನಟನೆಯ ಪೊಗರು ಸಿನಿಮಾ ಕನ್ನಡದ ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ. ಈಗಾಗಲೇ ಸಿನಿಮಾದ ಟ್ರೇಲರ್, ಹಾಡು ಮತ್ತು ಡೈಲಾಗ್ ಎಲ್ಲರ ಗಮನ ಸೆಳೆದಿದೆ. ಮತ್ತು ಸಿನಿಮಾದ ಮೇಲೆ ಅಪಾರ ನಿರೀಕ್ಷೆ ಹುಟ್ಟು ಹಾಕಿದೆ. ಈ ನಡುವೆ, ಪೊಗರು ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್ ಬಿಡುಗಡೆ ಮಾಡಿದ್ದಾರೆ.

ತೆಲುಗಿನಲ್ಲಿ ಪೊಗರು, ತಮಿಳಿನಲ್ಲಿ ಸೆಮ್ಮಾ ತಿಮಿರು..!
 ಹೊಸ ವರ್ಷದ (New Year) ಮೊದಲ ದಿನ ಪೊಗರು ಚಿತ್ರದ ತೆಲುಗು ಮತ್ತು ತಮಿಳು ಟ್ರೇಲರ್ ಗಳನ್ನು ಬಿಡುಗಡೆ ಮಾಡಲಾಗಿದೆ. ತೆಲುಗಿನಲ್ಲಿ  ಪೊಗರು ಟೈಟಲ್ ನಲ್ಲಿಯೇ ಚಿತ್ರ ತೆರೆಗೆ ಬರಲಿದೆ. ಅದೇ ತಮಿಳಿನಲ್ಲಿ ಸೆಮ್ಮಾ ತಿಮಿರು ( Semma Thimiru) ಹೆಸರಿನಲ್ಲಿ ಚಿತ್ರ ಸೆಟ್ಟೇರಲಿದೆ.   ಕನ್ನಡದ ಟ್ರೇಲರ್ ನವೆಂಬರ್ ನಲ್ಲಿ ರಿಲೀಸ್ ಆಗಿತ್ತು.  ಕನ್ನಡದ ಟ್ರೇಲರ್ ಸಿಕ್ಕಾಪಟ್ಟೆ ಹಿಟ್ ಆಗಿತ್ತು. ತಮಿಳು ತೆಲುಗಿನ ಟ್ರೇ,ಲರ್ ಗೂ ಅದೇ ರೀತಿಯ ಪ್ರತಿಕ್ರಿಯೆ ಸಿಗಲಿದೆಯೇ ನೋಡಬೇಕು. 

ALSO READ : Deepika Padukone ಫೇಸ್ ಬುಕ್, ಇನ್ ಸ್ಟಾ, ಟ್ವಿಟರ್ ನ ಎಲ್ಲಾ ಪೋಸ್ಟ್ ಡಿಲೀಟ್

ಈ ಮಧ್ಯೆ, ಪೊಗರು ಚಿತ್ರದ ಹಿಂದಿ ಡಬ್ಬಿಂಗ್ ರೈಟ್ 7.2 ಕೋಟಿ ರೂಪಾಯಿಗೆ ಮಾರಾಟ ಆಗಿದೆ ಎಂಬ ಸುದ್ದಿಯಿದೆ. ತೆಲುಗು ಅವತರಣಿಕೆ ಕೂಡಾ ಒಳ್ಳೆ ಮೊತ್ತಕ್ಕೆ ಸೇಲ್ ಆಗಿದೆ ಎನ್ನಲಾಗಿದೆ.  ತಮಿಳಿನ ರೇಟ್ ಗೊತ್ತಾಗಿಲ್ಲ. 

ಕನ್ನಡದಲ್ಲಿ ಧ್ರುವ ಸರ್ಜಾ (Dhruva Sarja) ನಟನೆಯ ಪೊಗರು (Pagaru) ಇಷ್ಟೊತ್ತಿಗೆ ರಿಲೀಸ್ ಆಗಿರಬೇಕಿತ್ತು. ಲಾಕ್ ಡೌನ್ (Lock Down) ಮತ್ತು ಕರೋನಾ ಕಾರಣದಿಂದ ರಿಲೀಸ್ ಡೇಟ್ ಮುಂದೂಡಿಕೆ ಆಗುತ್ತಲೇ ಬರುತ್ತಿದೆ.  ಸದ್ಯ ರಿಲೀಸ್ ಡೇಟ್ ಬಗ್ಗೆ ಅಧಿಕೃತ ಮಾಹಿತಿ ಇಲ್ಲ.   

ಪೊಗರು ಇದು ಎಲ್ಲಾ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗುವಂತ ಸಿನಿಮಾ (Cinema) ಎಂದು ಚಿತ್ರ ತಂಡ  ಹೇಳುತ್ತಿದೆ.  ಎಲ್ಲಾ ಭಾಷಿಕರಿಗೂ ಇದು ಇಷ್ಟವಾಗಲಿದೆಯಂತೆ. ಈ ಸಿನಿಮಾದಲ್ಲಿ ದ್ರುವ ಸರ್ಜಾ ಜೊತೆ ಮಯೂರಿ, ರವಿಶಂಕರ್, ಚಿಕ್ಕಣ್ಣ ಮುಂತಾದವರಿದ್ದಾರೆ. ಹಿನ್ನೆಲೆ ಸಂಗೀತ ಹರಿಕೃಷ್ಣ, ಸಂಗೀತ ಸಂಯೋಜನೆ ಚಂದನ್ ಶೆಟ್ಟಿ, ಛಾಯಾಗ್ರಹಣ ವಿಜಯ್ ಮಿಲ್ಟನ್ ನೋಡಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G

iOS Link - https://apple.co/3loQYe
 
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News