ಬೆಂಗಳೂರು : ಪದೇ ಪದೇ ಪಕ್ಷದ ನಾಯಕತ್ವದ ಬಗ್ಗೆ ಹೇಳಿಕೆಗಳನ್ನು ನೀಡುತ್ತಿದ್ದ ಬಸನಗೌಡ ಪಾಟೀಲ್ ಯತ್ನಾಳ್ ವಿರುದ್ಧ ಕೇಂದ್ರ ಸಮಿತಿಗೆ ಎಲ್ಲಾ ಮಾಹಿತಿಗಳನ್ನು ನೀಡಲಾಗಿದೆ. ಯತ್ನಾಳ್ ವಿರುದ್ಧ ನಾನು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು, ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಬಸನಗೌಡ ಪಾಟೀಲ್ ಯತ್ನಾಳ್ (Basavana gowda Patil Yatnal) ಪಕ್ಷದ ನಾಯಕತ್ವದ ಬಗ್ಗೆ ಹೆಳಿಕೆ ನೀಡುತ್ತಿದ್ದದ್ದು ಪಕ್ಷಕ್ಕೆ ಮುಜುಗರವನ್ನು ಉಂಟು ಮಾಡಿತ್ತು. ಈ ಬಗ್ಗೆ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯವೂ ಕೇಳಿ ಬಂದಿತ್ತು. ಅಲ್ಲದೆ, ಪಕ್ಷದ ರಾಜ್ಯಾಧ್ಯಕ್ಷರಾಗಿ ಯತ್ನಾಳ್ ವಿರುದ್ಧ ಕ್ರಮಕೈಗೊಳ್ಳದಿರುವ ಬಗ್ಗೆ ನಳೀನ್ ಕುಮಾರ್ ಕಟೀಲ್ (Nalin Kumar Kateel) ಬಗ್ಗೆ ಪಕ್ಷದಲ್ಲಿ ಅಸಮಾಧಾನವೂ ಕೇಳಿ ಬಂದಿತ್ತು. ಇದೀಗ ಇವೆಲ್ಲದ್ದಕ್ಕೂ ನಳೀನ್ ಕುಮಾರ್ ಕಟೀಲ್ ಉತ್ತರ ನೀಡಿದ್ದಾರೆ.
ALSO READ : D.K.Shivakumar: 'ರಾಜ್ಯದಲ್ಲಿ 'ತುಘಲಕ್ ಸರ್ಕಾರ' ನಡೆಯುತ್ತಿದೆ'
ಯತ್ನಾಳ್ ಪಕ್ಷದ ಬಿಫಾರಂ (B Farm) ಪಡೆದು ಗೆದ್ದವರು ಹಾಗಾಗಿ ಅವರು ಕೇಂದ್ರ ಶಿಸ್ತು ಸಮಿತಿಯ ಕೆಳಗಡೆ ಬರುತ್ತಾರೆ. ಯತ್ನಾಳ್ ವಿರುದ್ಧ ನಾನು ಶಿಸ್ತು ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ ಎಂದು ನಳಿನ್ ಕುಮಾರ್ ಕಟೀಲ್ ಸ್ಪಷ್ಟಪಡಿಸಿದ್ದಾರೆ. ಶಾಸಕಾಂಗ ಪಕ್ಷದ ಸಭೆ ಕರೆಯುವಂತೆ ಯತ್ನಾಳ್ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಅವರು ಹೇಳಿದ್ದಾರೆ. ಇದೇ ವೇಳೆ ಶಾಸಕರ ಸಭೆ ಕರೆಯಿರಿ ಎಂದು ಸುನಿಲ್ ಕುಮಾರ್ (Sunil Kumar) ಪತ್ರ ಬರೆದಿರುವುದು ನಿಜ ಎಂದು ನಳಿನ್ ಕುಮಾರ್ ಕಟೀಲ್ ಒಪ್ಪಿಕೊಂಡಿದ್ದಾರೆ. ಅಲ್ಲದೆ, ಸುನಿಲ್ ಕುಮಾರ್ ಪತ್ರ ಬರೆದಿರುವುದರಲ್ಲಿಯೂ ತಪ್ಪಿಲ್ಲ ಎಂದು ಹೇಳಿದ್ದಾರೆ. ಇನ್ನು ಯತ್ನಾಳ್ ವಿಚಾರವಾಗಿ ಅರುಣ್ ಸಿಂಗ್ (Arun Singh) ಮಾತನಾಡಿಯೇ ಇಲ್ಲ ಎಂದು ಕಟೀಲ್ ಸ್ಪಷ್ಟಪಡಿಸಿದ್ದಾರೆ.
ಬಿಎಸ್ ಯಡಿಯೂರಪ್ಪ ( B S Yadiyurappa) ಅವರೇ ನಮ್ಮ ನಾಯಕ. ನಾಯಕತ್ವ ಬದಲಾವಣೆಯ ಬಗ್ಗೆ ಚರ್ಚೆ ನಡೆದೇ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಶಾಸಕಾಂಗ ಸಭೆಯಲ್ಲಾಗಲೀ ಕೋರ್ ಕಮಿಟಿ ಸಭೆಯಲ್ಲಾಗಲೀ ನಾಯಕತ್ವ ಬದಲವಣೆಯ ಬಗ್ಗೆ ಚರ್ಚೆ ನಡೆದಿಲ್ಲ ಎಂದು ನಳಿನ್ ಕುಮರ್ ಕಟೀಲ್ ಹೇಳಿದ್ದಾರೆ.
ಶಾಸಕರ ಸಭೆಯಲ್ಲಿ ಎಲ್ಲಾ ಶಾಸಕರು ತಮ್ಮ ಸಮಸ್ಯೆ ಬಗ್ಗೆ ಮಾತನಾಡಿದ್ದಾರೆ. ಶಾಸಕರ ಸಮಸ್ಯೆಗಳನ್ನು ಸಿಎಂ ಕೇಳಿದ್ದಾರೆ. ಅವರ ಪ್ರಶ್ನೆಗಳಿಗೂ ಉತ್ತರಿಸಿದ್ದಾರೆ. ಎಂದು ಅವರು ತಿಳಿಸಿದ್ದಾರೆ. ಮಂಗಳವಾರವೂ ಶಾಸಕರ ಜೊತೆಗೆ ಸಿಎಂ ಸಭೆ ನಡೆಯಲಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಆಪ್ ಡೌನ್ ಲೋಡ್ ಮಾಡಿ
Android Link - https://bit.ly/3hDyh4G
iOS Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಕ್ಕೆ ಸಬ್ ಸ್ಕ್ರೈಬ್ ಮಾಡಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.