ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ 73 ನೇ ಮನ್ ಕಿ ಬಾತ್ ಕಾರ್ಯಕ್ರಮದ ಸಂದರ್ಭದಲ್ಲಿ ಆಸ್ಟ್ರೇಲಿಯಾದಲ್ಲಿ ಭಾರತದ ಟೆಸ್ಟ್ ಸರಣಿ ಗೆಲುವನ್ನು ಶ್ಲಾಘಿಸಿದ ನಂತರ, ಭಾರತದ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಕಾರ್ಯದರ್ಶಿ ಜೇ ಶಾ ಭಾನುವಾರ ಅವರ ಪ್ರೋತ್ಸಾಹದಾಯಕ ಮಾತುಗಳು ಸ್ಥೈರ್ಯ ಮತ್ತು ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಇದನ್ನೂ ಓದಿ: BCCI ನಲ್ಲಿ Ganguly ಹಾಗೂ ಜಯ್ ಶಾಹ್ ಭವಿಷ್ಯದ ಮೇಲೆ ತೂಗುಗತ್ತಿ
'ನಿಮ್ಮ ಪ್ರೋತ್ಸಾಹದಾಯಕ ಮಾತುಗಳಿಗೆ ಧನ್ಯವಾದಗಳು, ಪ್ರಧಾನಿ ಮೋದಿಜಿ . ಇದು ಭವಿಷ್ಯದ ಸವಾಲುಗಳಿಗಾಗಿ ಇಡೀ ಭಾರತೀಯ ಕ್ರಿಕೆಟ್ನ ಸ್ಥೈರ್ಯ ಮತ್ತು ಶಕ್ತಿಯ ಮಟ್ಟವನ್ನು ಹೆಚ್ಚಿಸುತ್ತದೆ" ಎಂದು ಜೇ ಶಾ (Jay Shah) ಟ್ವೀಟ್ ಮಾಡಿದ್ದಾರೆ.
Thank you for your encouraging words, Hon’ble PM Shri @narendramodi Ji. This will boost the morale and energy level of entire Indian cricket for future challenges.🇮🇳 @imVkohli @ajinkyarahane88 @ImRo45 @RaviShastriOfc @RishabhPant17 @Jaspritbumrah93 @SGanguly99 @ThakurArunS https://t.co/ivgmDeweXR
— Jay Shah (@JayShah) January 31, 2021
ಈ ವರ್ಷದ ತನ್ನ ಮೊದಲ ರೇಡಿಯೊ ಕಾರ್ಯಕ್ರಮದ ಸಂದರ್ಭದಲ್ಲಿ, ಪ್ರಧಾನಿ ಮೋದಿ (Narendra Modi) ಮಾತನಾಡಿ 'ಈ ತಿಂಗಳು, ಕ್ರಿಕೆಟ್ ಪಿಚ್ನಿಂದ ನಮಗೆ ಒಳ್ಳೆಯ ಸುದ್ದಿ ಸಿಕ್ಕಿತು. ಆರಂಭಿಕ ಬಿಕ್ಕಟ್ಟಿನ ನಂತರ, ಭಾರತೀಯ ತಂಡವು ವೈಭವಯುತವಾಗಿ ಆಸ್ಟ್ರೇಲಿಯಾದಲ್ಲಿ ಸರಣಿಯನ್ನು ಗೆದ್ದಿತು. ನಮ್ಮ ತಂಡದ ಕಠಿಣ ಪರಿಶ್ರಮ ಮತ್ತು ತಂಡದ ಕೆಲಸ ಸ್ಪೂರ್ತಿದಾಯಕ' ಎಂದು ಶ್ಲಾಘಿಸಿದ್ದರು.
ಇದನ್ನೂ ಓದಿ: ಬಿಸಿಸಿಐ ಅಧ್ಯಕ್ಷರಾಗಿ ಸೌರವ್ ಗಂಗೂಲಿ ಅಧಿಕಾರ ಸ್ವೀಕಾರ
'ನಮ್ಮ ಪ್ರಧಾನಿ ನರೇಂದ್ರ ಮೋದಿ ಕ್ರಿಕೆಟ್ ಕ್ಷೇತ್ರದಲ್ಲಿ ನಮ್ಮ ಹುಡುಗರ ಪ್ರಯತ್ನವನ್ನು ಶ್ಲಾಘಿಸುತ್ತಿರುವುದು ಹೃದಯಸ್ಪರ್ಶಿಯಾಗಿದೆ. ಯುವ ತಂಡವು ದೇಶದ ಯುವಕರಿಗೆ ಯಾವುದೇ ಸವಾಲನ್ನು ಅತ್ಯಂತ ಆತ್ಮವಿಶ್ವಾಸದಿಂದ ತೆಗೆದುಕೊಳ್ಳಲು ಪ್ರೇರೇಪಿಸಿದೆ" ಎಂದು ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಟ್ವೀಟ್ ಮಾಡಿದ್ದಾರೆ.
ಆರಂಭಿಕ ಸೋಲು ಹಾಗೂ ಮಹತ್ವದ ಆಟಗಾರರ ಗಾಯದ ನಡುವೆಯೂ ಅನನುಭವಿ ಯುವ ಭಾರತೀಯ ತಂಡವು ಆಸ್ಟ್ರೇಲಿಯಾವನ್ನು ನಾಲ್ಕನೇ ಟೆಸ್ಟ್ನಲ್ಲಿ ಮೂರು ವಿಕೆಟ್ಗಳಿಂದ ಮೂರು ವಿಕೆಟ್ಗಳಿಂದ ಸೋಲಿಸಿ ಸರಣಿಯನ್ನು 2-1ರಿಂದ ಗೆದ್ದುಕೊಂಡಿತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.