ಭಾರತದಲ್ಲಿನ Twitter ಕಾರ್ಯಾಚರಣೆಯಲ್ಲಿ ಕುಸಿತ, ಬಳಕೆದಾರರ ದೂರು

ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಅನ್ನು ಬಳಸುವ ಜನರು ಭಾರತದಲ್ಲಿ ವೆಬ್‌ಸೈಟ್ ಕುಸಿದಿರುವುದರಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶುಕ್ರವಾರ ಸಂಜೆ ಬಳಕೆದಾರರು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ (ಆಂಡ್ರಾಯ್ಡ್ ಮತ್ತು ಐಒಎಸ್) ಎರಡರಲ್ಲೂ ಸಮಸ್ಯೆಯನ್ನು ಎದುರಿಸಿದ್ದಾರೆ. ರಾತ್ರಿ 9.35 ರಿಂದ ಟ್ವಿಟರ್ ಕುಸಿದಿದೆ.

Last Updated : Feb 5, 2021, 11:10 PM IST
  • ರಾತ್ರಿ 9 ರಿಂದ ಟ್ವಿಟರ್ ದೇಶಾದ್ಯಂತ ಕುಸಿದಿರುವ ಬಗ್ಗೆ 870 ಕ್ಕೂ ಹೆಚ್ಚು ವರದಿಗಳು ಬಂದಿವೆ.
  • ಶುಕ್ರವಾರ ಸಂಜೆ ಬಳಕೆದಾರರು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ (ಆಂಡ್ರಾಯ್ಡ್ ಮತ್ತು ಐಒಎಸ್) ಎರಡರಲ್ಲೂ ಸಮಸ್ಯೆಯನ್ನು ಎದುರಿಸಿದ್ದಾರೆ.

Trending Photos

ಭಾರತದಲ್ಲಿನ Twitter ಕಾರ್ಯಾಚರಣೆಯಲ್ಲಿ ಕುಸಿತ, ಬಳಕೆದಾರರ ದೂರು  title=

ನವದೆಹಲಿ: ಮೈಕ್ರೋ-ಬ್ಲಾಗಿಂಗ್ ಸೈಟ್ ಟ್ವಿಟರ್ ಅನ್ನು ಬಳಸುವ ಜನರು ಭಾರತದಲ್ಲಿ ವೆಬ್‌ಸೈಟ್ ಕುಸಿದಿರುವುದರಿಂದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಶುಕ್ರವಾರ ಸಂಜೆ ಬಳಕೆದಾರರು ವೆಬ್‌ಸೈಟ್ ಮತ್ತು ಮೊಬೈಲ್ ಅಪ್ಲಿಕೇಶನ್ (ಆಂಡ್ರಾಯ್ಡ್ ಮತ್ತು ಐಒಎಸ್) ಎರಡರಲ್ಲೂ ಸಮಸ್ಯೆಯನ್ನು ಎದುರಿಸಿದ್ದಾರೆ. ರಾತ್ರಿ 9.35 ರಿಂದ ಟ್ವಿಟರ್ ಕುಸಿದಿದೆ.

ಜನರು ತಮ್ಮ ಟ್ವಿಟ್ಟರ್ (Twitter) ಫೀಡ್‌ಗಳನ್ನು ರಿಫ್ರೆಶ್ ಮಾಡುವುದು, ಖಾತೆಗಳನ್ನು ಪ್ರವೇಶಿಸುವುದು ಮತ್ತು ನಿರ್ದಿಷ್ಟ ಪುಟಗಳನ್ನು ತೆರೆಯುವಲ್ಲಿ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ.ರಾತ್ರಿ 9 ರಿಂದ ಟ್ವಿಟರ್ ದೇಶಾದ್ಯಂತ ಕುಸಿದಿರುವ ಬಗ್ಗೆ 870 ಕ್ಕೂ ಹೆಚ್ಚು ವರದಿಗಳು ಬಂದಿವೆ.

ಇದನ್ನೂ ಓದಿ: Farmers Protest ಗೆ ಸಂಬಂಧಿಸಿದ ಟ್ವೀಟ್ ಲೈಕ್ ಮಾಡಿದ Twitter CEO ಜ್ಯಾಕ್ ಡಾರ್ಸೆ

ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಪಾಟ್ನಾ, ಲಕ್ನೋ, ಕೋಲ್ಕತಾ, ಜೈಪುರ, ಅಹಮದಾಬಾದ್, ಮಧುರೈ, ಮತ್ತು ಬೆಂಗಳೂರು ಸೇರಿದಂತೆ ದೇಶಾದ್ಯಂತ ಈ ಸಮಸ್ಯೆಯನ್ನು ಎದುರಿಸಲಾಗುತ್ತಿದೆ ಎಂದು ಡೌಂಡೆಟೆಕ್ಟರ್ ತಿಳಿಸಿದೆ."ಬಳಕೆದಾರ ವರದಿಗಳು ಟ್ವಿಟರ್ ರಾತ್ರಿ  9:35 ರಿಂದ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಸೂಚಿಸುತ್ತದೆ" ಎಂದು ಅದು ಹೇಳಿದೆ.

ಇದನ್ನೂ ಓದಿ: Twitter ನಿಯಮ ಉಲ್ಲಂಘಿಸಿದ್ದಕ್ಕೆ ನಟಿ ಕಂಗನಾ ರನೌತ್ ಟ್ವೀಟ್ ಡಿಲಿಟ್

ಟ್ವಿಟರ್ ಮೈಕ್ರೋಬ್ಲಾಗ್ ಆಗಿದ್ದು, ಇದು ಬಳಕೆದಾರರಿಗೆ 280 ಅಥವಾ ಅದಕ್ಕಿಂತ ಕಡಿಮೆ ಅಕ್ಷರಗಳ ಕಿರು ಸಂದೇಶಗಳನ್ನು ಪ್ರಕಟಿಸಲು ಅನುವು ಮಾಡಿಕೊಡುತ್ತದೆ. ಟ್ವಿಟರ್ ಬಳಕೆದಾರರು ತಮ್ಮ ಟ್ವೀಟ್‌ಗಳನ್ನು ಐಫೋನ್, ಆಂಡ್ರಾಯ್ಡ್, ಬ್ಲ್ಯಾಕ್‌ಬೆರಿ, ಅಥವಾ ವಿಂಡೋಸ್ ಫೋನ್ ಸಾಧನಗಳು ಮತ್ತು ಸಾಂಪ್ರದಾಯಿಕ ಕಂಪ್ಯೂಟರ್‌ಗಳು ಸೇರಿದಂತೆ ಹಲವಾರು ಸಾಧನಗಳು ಮತ್ತು ಪ್ಲಾಟ್‌ಫಾರ್ಮ್‌ಗಳಿಂದ ಪೋಸ್ಟ್ ಮಾಡಲು ಸಾಧ್ಯವಾಗುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
 

Trending News