ಬೆಂಗಳೂರು : ಇನ್ನು ಬೇಸಿಗೆ ಬರ್ತಾ ಇದೆ. ಈ ಹೊತ್ತಿನಲ್ಲಿ ಬೆವರು ಬಾಯಾರಿಕೆ ಎರಡೂ ಸಹಜ. ಬಾಯಾರಿದಾಗ ನಿಂಬೂ ಜ್ಯೂಸ್ (Lemonade) , ನಿಂಬೂ ಪಾನಕ ಕುಡಿಯುವುದು ಸಹಜ. ಊಟದಲ್ಲೂ ನಾನ್ ವೆಜ್ (Non-veg) ಇದ್ದರೆ ಅದರ ಮೇಲೆ ನಿಂಬೂ ರಸ ಹಾಕಿ ತಿನ್ನುವ ಅಭ್ಯಾಸ ಕೆಲವರಿಗುಂಟು. ನಿಂಬೂ ಉಪ್ಪಿನ ಕಾಯಿಯನ್ನು ಕೂಡಾ ಚಪ್ಪರಿಸಿ ತಿನ್ನುವವರಿಗೇನೂ ಕಡಿಮೆ ಇಲ್ಲ. ನಿಂಬೂ ಆರೋಗ್ಯಕ್ಕೆ ತುಂಬಾ ಉತ್ತಮ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆಯುರ್ವೇದದಲ್ಲಿ Ayurveda) ಲಿಂಬೆಗೆ ಅತಿ ಮಹತ್ವವಿದೆ. ಹಲವಾರು ರೋಗಗಳಿಗೆ ನಿಂಬು ರಾಮಬಾಣ. ಲಿಂಬೆ ರಸ, ನಿಂಬೆ ಸಿಪ್ಪೆಯಲ್ಲಿ ಸಾಕಷ್ಟು ಔಷಧೀಯ (Medicinal) ಗುಣಗಳಿವೆ. ಆದರೆ, ಗೊತ್ತಿರಲಿ ಅತಿಯಾದರೆ ಅಮೃತ ಕೂಡಾ ವಿಷವಾಗುತ್ತದೆ. ಅದೇ ರೀತಿ ಒಂದು ಲಿಮಿಟ್ ಮೀರಿ ಲಿಂಬೆಕಾಯಿ ತಿಂದರೆ ಆರೋಗ್ಯ ಹದಗೆಡುತ್ತದೆ ನೆನಪಿರಲಿ. ಲಿಂಬೆಕಾಯಿಯನ್ನು ಎಷ್ಟು ತಿನ್ನಬೇಕು. ಯಾರು ತಿನ್ನ ಬಾರದು. ಯಾವಾಗ ತಿನ್ನಬಾರದು ಎಂಬ ಮಾಹಿತಿ ನಿಮಗೆ ಗೊತ್ತಿರಬೇಕು.
1. ನಿಮಗೆ ತಿಳಿದಿರಲಿ..ಲಿಂಬೆ ಹಣ್ಣಿನ ಅಧಿಕ ಸೇವನೆಯಿಂದ ಹಲ್ಲು (Dental) ಮತ್ತು ಒಸಡು ದುರ್ಬಲವಾಗುತ್ತದೆ. ಹಾಗಾಗಿ ಒಸಡಿನ ಸಮಸ್ಯೆ ಇರುವವರು ಲಿಂಬೆಯಿಂದ (Lemon) ದೂರ ಇರಿ.
2. ನಿಂಬೂ ಜ್ಯೂಸ್ ಅತಿಯಾಗಿ ಕುಡಿದರೆ ಡಿಹೈಡ್ರೇಶನ್ (Dehydration) ಉಂಟಾಗುತ್ತದೆ. ಪದೇ ಪದೇ ಟಾಯ್ಲೆಟ್ (toilet) ಸುತ್ತಬೇಕಾಗಿ ಬರಬಹುದು. ದೇಹಕ್ಕೆ ನೀರು ಅತಿಮುಖ್ಯ. ಡಿಹೈಡ್ರೇಶನ್ ಹೆಚ್ಚಾದರೆ ಅದು ಸಾವಿಗೂ ಕಾರಣವಾಗಬಹುದು. ಗೊತ್ತಿರಲಿ.
ಇದನ್ನೂ ಓದಿ : Googleನ ನೂತನ ವೈಶಿಷ್ಟ್ಯ, ಶೀಘ್ರವೇ ಸ್ಮಾರ್ಟ್ ಫೋನ್ ಮೂಲಕ Heart Rate ಪರೀಕ್ಷೆ
3. ನಿಂಬೂ ಜ್ಯೂಸ್ ಹೆಚ್ಚಾದ್ರೆ ಕಿಡ್ನಿ ಸ್ಟೋನ್ (Kidney Stone) ಕಾಣಿಸಿಕೊಳ್ಳಬಹುದು. ಯಾಕಂದರೆ ಇದರಲ್ಲಿ ಸಿಟ್ರಿಸ್ ಆಮ್ಲದ (Citric Acid) ಜೊತೆ ಅಕ್ಸಿಲೇಟ್ ಕೂಡಾ ಇರುತ್ತದೆ. ಇದು ಹರಳಿನ (Crystal) ರೂಪದಲ್ಲಿ ಕಿಡ್ನಿಯಲ್ಲಿ ಶೇಖರವಾಗುತ್ತದೆ. ಮುಂದೆ ಇದು ಕಿಡ್ನಿ ಸ್ಟೋನ್ ಆಗಿ ಪರಿವರ್ತನೆ ಆಗಬಹುದು.
4. ಲಿಂಬೆ ಹಣ್ಣು ಸೇವನೆ ಹೆಚ್ಚಾದರೆ ಅಸಿಡಿಟಿ (Acidity) ಮತ್ತು ಗ್ಯಾಸ್ ಹೆಚ್ದಾಗುತ್ತದೆ. ಇದರ ನೇರ ಪರಿಣಾಮ ಜೀರ್ಣಾಂಗವ್ಯೂಹದ ಮೇಲೆ ಬೀರುತ್ತದೆ. ಅಸಿಡಿಟಿ ಇರುವವರು ಲಿಂಬೆ ಹಣ್ಣಿನಿಂದ ದೂರ ಇರುವುದು ಉತ್ತಮ.
ಇದನ್ನೂ ಓದಿ : Corona Vaccination ಬಳಿಕ ನಾಪತ್ತೆಯಾದ 1800 ಕ್ಕೂ ಅಧಿಕ ಆರೋಗ್ಯ ಕಾರ್ಯಕರ್ತರು
5. ಲಿಂಗೆ ಹಣ್ಣು ಅಥವಾ ಲಿಂಬೆ ಜ್ಯೂಸ್ ಅತಿಯಾದರೆ ನಿಮ್ಮ ಮೂಳೆಗಳು ದುರ್ಬಲಗೊಳ್ಳುವ ಸಾಧ್ಯತೆಗಳಿವೆ. ಯಾಕೆಂದರೆ ಲಿಂಬೆಯಲ್ಲಿ ಸಾಕಷ್ಟು ಸಿಟ್ರಿಸ್ ಆಮ್ಲ ಇದೆ. ಇದು ಮೂಳೆಯನ್ನು ದುರ್ಬಲಗೊಳಿಸುತ್ತದೆ. ಹಾಗಾಗಿ, ಮೂಳೆ ಸಮಸ್ಯೆ ಇದ್ದರೆ ಯೋಚನೆ ಮಾಡಿ ಲಿಂಬೆ ಜ್ಯೂಸ್ ಕುಡಿಯಿರಿ.
6. ಲಿಂಬೆ ಚರ್ಮದ ಆರೋಗ್ಯಕ್ಕೆ ತುಂಬಾ ಬೆಸ್ಟ್. ಆದರೆ, ಅತಿಯಾದರೆ ಸನ್ಸೆಟಿವ್ ಸ್ಕಿನ್ ಇರುವವರಿಗೆ ಚರ್ಮದ ಸಮಸ್ಯೆ ಸೃಷ್ಟಿಸಬಹುದು (Skin irritation). ಅಲರ್ಜಿ ಗೆ ಕಾರಣವಾಗಬಹುದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.