Google Play Music ಬಳಕೆದಾರರಿಗೆ ಬ್ಯಾಡ್ ನ್ಯೂಸ್..! ಅದೇನು ಓದಿ

ಆಂಡ್ರಾಯ್ಡ್  ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗುವ ಗೂಗಲ್ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್  ಅನ್ನು ಇನ್ನು ಕೆಲವೇ ದಿನಗಳವೆರೆಗ ಮಾತ್ರ ಬಳಸಬಹುದು. ಯಾಕೆಂದರೆ, ಫೆಬ್ರವರಿ 24 ರ ನಂತರ  ಆಪ್ ಕಾರ್ಯನಿರ್ವಹಿಸುವುದಿಲ್ಲ. 

Written by - Ranjitha R K | Last Updated : Feb 7, 2021, 04:03 PM IST
  • Google Play Music ಆಪ್ ಬಳಕೆದಾರರಿಗೊಂದು ನಿರಾಸೆಯ ಸುದ್ದಿ
  • ಫೆಬ್ರವರಿ 24 ರ ನಂತರ ಕಾರ್ಯನಿರ್ವಹಿಸುವುದಿಲ್ಲ Play Music
  • ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್‌ನೊಂದಿಗೆ ರಿಪ್ಲೇಸ್ ಆಗಲಿದೆ ಪ್ಲೇ ಮ್ಯೂಸಿಕ್
Google Play Music ಬಳಕೆದಾರರಿಗೆ ಬ್ಯಾಡ್ ನ್ಯೂಸ್..! ಅದೇನು ಓದಿ  title=
ಫೆಬ್ರವರಿ 24 ರ ನಂತರ ಕಾರ್ಯನಿರ್ವಹಿಸುವುದಿಲ್ಲ Play Music (file photo)

ನವದೆಹಲಿ: ನೀವು ಸ್ಮಾರ್ಟ್‌ಫೋನ್‌ನಲ್ಲಿ ಗೂಗಲ್ ಪ್ಲೇ ಮ್ಯೂಸಿಕ್ (Google Play Music) ಅಪ್ಲಿಕೇಶನ್ ಬಳಸ್ತಾ ಇದ್ದೀರಾ? ಹೌದು ಎಂದಾದರೆ ನಿಮಗೊಂದು ನಿರಾಸೆಯ ಸುದ್ದಿ ಇದೆ. ಹೆಚ್ಚಿನ ಆಂಡ್ರಾಯ್ಡ್ (Android) ಸ್ಮಾರ್ಟ್‌ಫೋನ್‌ಗಳಲ್ಲಿ ಬಳಸಲಾಗುವ ಗೂಗಲ್ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್  ಅನ್ನು ಇನ್ನು ಕೆಲವೇ ದಿನಗಳವೆರೆಗ ಮಾತ್ರ ಬಳಸಬಹುದು. ಯಾಕೆಂದರೆ, ಫೆಬ್ರವರಿ 24 ರ ನಂತರ  ಆಪ್ ಕಾರ್ಯನಿರ್ವಹಿಸುವುದಿಲ್ಲ. 

ಕಳೆದ 8 ವರ್ಷಗಳಿಂದ ಬಳಕೆಯಲ್ಲಿರುವ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ :
ಮಾಹಿತಿಯ ಪ್ರಕಾರ, ಗೂಗಲ್ ತನ್ನ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ (Google Play Music) ಅನ್ನು ಯೂಟ್ಯೂಬ್ ಮ್ಯೂಸಿಕ್ ಅಪ್ಲಿಕೇಶನ್‌ನೊಂದಿಗೆ (YouTube Music) ರೀಪ್ಲೇಸ್ ಮಾಡುತ್ತಿದೆ.  ಕಳೆದ ವರ್ಷವೇ ಗೂಗಲ್ ಈ ಬಗ್ಗೆ ಘೋಷಿಸಿತ್ತು. ಈ ಅಪ್ಲಿಕೇಶನ್ ಕಳೆದ ಸುಮಾರು 8 ವರ್ಷಗಳಿಂದ ಚಾಲನೆಯಲ್ಲಿದೆ.

ಇದನ್ನೂ ಓದಿ : Googleನ ನೂತನ ವೈಶಿಷ್ಟ್ಯ, ಶೀಘ್ರವೇ ಸ್ಮಾರ್ಟ್ ಫೋನ್ ಮೂಲಕ Heart Rate ಪರೀಕ್ಷೆ

ಹೆಚ್ಚಿನ ಆಂಡ್ರಾಯ್ಡ್ ಪೋನ್ ಗಳಲ್ಲಿ ಈ ಅಪ್ಲಿಕೇಶನ್ ಓಪನ್ ಮಾಡುವಾಗ ಆಪ್ ಸ್ಥಗಿತಗೊಳಿಸುವ ಸಂದೇಶ ಬರುತ್ತಿದೆ. 'ಫೆಬ್ರವರಿ 24, 2021 ರ ನಂತರ, ಎಲ್ಲಾ ಡೇಟಾವನ್ನು ತೆಗೆದುಹಾಕಲಾಗುವುದಾಗಿ ಸಂದೇಶದಲ್ಲಿ ತಿಳಿಸಲಾಗುತ್ತಿದೆ.  ಇದು ಮ್ಯೂಸಿಕ್ ಲೈಬ್ರೆರಿ, ಎಲ್ಲಾ ಅಪ್‌ಲೋಡ್‌ಗಳು, ಖರೀದಿಗಳು ಅಥವಾ Google Play Music ಆಪ್ ನಲ್ಲಿರುವ ಎಲ್ಲಾ ಡೇಟಾಗಳಿಗೂ ಇದು ಅನ್ವಯವಾಗುತ್ತದೆ. ಫೆ. 24ರ ನಂತರ  ಆಪ್ ನಲ್ಲಿರುವ ಯಾವ ಡೇಟಾವನ್ನೂ (Data) ಮರುಪಡೆಯಲು ಸಾಧ್ಯವಾಗುವುದಿಲ್ಲ. 

2011 ರಲ್ಲಿ  ಆರಂಭವಾದ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ :
ಸ್ವಲ್ಪ ಸಮಯದ ಹಿಂದಷ್ಟೇ ಗೂಗಲ್, ಯೂಟ್ಯೂಬ್ ಮ್ಯೂಸಿಕ್ ಅನ್ನು ಪ್ರಾರಂಭಿಸಿದೆ.  ಇದಾದ ನಂತರ ಕಂಪನಿಯು Google Play Music ಅಪ್ಲಿಕೇಶನ್ ಅನ್ನು ಕೊನೆಗೊಳಿಸಬಹುದು ಎಂದೇ ಹೇಳಲಾಗಿತ್ತು.  ಈಗ ಗೂಗಲ್ (Google) ತನ್ನ ಬ್ಲಾಗ್ ಪೋಸ್ಟ್ ನಲ್ಲಿ  ಯೂಟ್ಯೂಬ್ ಮ್ಯೂಸಿಕ್ ಅನ್ನು Google Play Music ನೊಂದಿಗೆ  ರಿಪ್ಲೆಸ್ ಮಾಡುವುದಾಗಿ ಹೇಳಿದೆ. 2011 ರಲ್ಲಿ ಗೂಗಲ್ ಪ್ಲೇ ಮ್ಯೂಸಿಕ್ ಅಪ್ಲಿಕೇಶನ್ ಆರಂಭವಾಗಿತ್ತು.

ಇದನ್ನೂ ಓದಿ : Data Leak - Airtel Network ಭೇದಿಸಿ ಸೇನಾ ಆರ್ಮಿ ಜವಾನರ ದತ್ತಾಂಶಕ್ಕೆ ಕನ್ನ, ಹ್ಯಾಕರ್ ಕೈಸೇರಿದ ದೇಶಾದ್ಯಂತದ ಚಂದಾದಾರರ ಮಾಹಿತಿ

ಮ್ಯೂಸಿಕ್ ಟ್ರ್ಯಾಕ್‌ಗಳನ್ನು Google Play Musicನಿಂದ YouTubeಗೆ ಮೈಗ್ರೇಟ್ ಮಾಡಬಹುದು. Google Play Music ಅಪ್ಲಿಕೇಶನ್ ತೆರೆದಾಗ, Google Play Music No longer Available ಅನ್ನುವ ಸಂದೇಶ ಬರುತ್ತದೆ. ಆದರೆ ಇಲ್ಲಿಂದ ಮ್ಯೂಸಿಕ್ ಅನ್ನು ಯುಟ್ಯೂಬ್ ಗೆ (Yutube) ವರ್ಗಾಯಿಸಿಕೊಳ್ಳಬಹುದು.  ಅಲ್ಲದೆ ಬಳಕೆದಾರರ ರೆಕಮಂಡೇಶನ್ ಹಿಸ್ಟರಿಯನ್ನು ಕೂಡಾ ಅಳಿಸಿಹಾಕಬಹುದು. ಯೂಟ್ಯೂಬ್ ಮ್ಯೂಸಿಕ್ ನಲ್ಲಿ ಚಂದಾದಾರಿಕೆಯ ಆಯ್ಕೆ ಇದೆ. ಹಣವನ್ನು ಪಾವತಿಸುವ ಮೂಲಕ ನೀವು ಚಂದಾದಾರರಾಗಬಹುದು.  ಅಲ್ಲದೆ, ಇಂಟರ್ನೆಟ್‌ಗೆ ಸಂಪರ್ಕಿಸುವ ಮೂಲಕ ಉಚಿತವಾಗಿ ಸಂಗೀತವನ್ನು ಆನಂದಿಸಲೂ ಬಹುದು. ಆದರೆ ಉಚಿತ ಆವೃತ್ತಿಯನ್ನು ಬಳಸಿದರೆ ಆಪ್ ನ ಎಲ್ಲಾ ಎಲ್ಲಾ ವೈಶಿಷ್ಟ್ಯಗಳನ್ನು ಪಡೆಯುವುದು ಸಾಧ್ಯವಾಗುವುದಿಲ್ಲ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News