E-Cycle: Petrol-Diesel ಬೆಲೆ ಏರಿಕೆಯಿಂದ ಚಿಂತಿತರಾಗಿದ್ದೀರಾ! ಚಿಂತೆಬಿಡಿ ಇಲ್ಲಿದೆ ಪರಿಹಾರ

ನೆಕ್ಸ್ಜು ಮೊಬಿಲಿಟಿ ರೊಂಪಸ್ + ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಇದರರ್ಥ ಮೇಕ್ ಇನ್ ಇಂಡಿಯಾ ಮತ್ತು ವೋಕಲ್ ಫಾರ್ ಲೋಕಲ್ (Vocal for Local) ಎರಡೂ ಉದ್ದೇಶವನ್ನು ಪೂರೈಸುತ್ತವೆ. 

Written by - Yashaswini V | Last Updated : Feb 22, 2021, 02:25 PM IST
  • ನೆಕ್ಸ್ಜು ಮೊಬಿಲಿಟಿ ಭಾರತದಲ್ಲಿ ಹೊಸ ರೊಂಪಸ್ + ಇ ಸೈಕಲ್ ಅನ್ನು ಬಿಡುಗಡೆ ಮಾಡಿದೆ
  • ಈ ಇ-ಸೈಕಲ್ ಅನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿ 35 ಕಿ.ಮೀ.ವರೆಗೆ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ
  • ರೊಂಪಸ್ + ಬೈಸಿಕಲ್ ತುಂಬಾ ಆರ್ಥಿಕವಾಗಿದೆ ಎಂದೂ ಕೂಡ ಹೇಳಲಾಗಿದೆ
E-Cycle: Petrol-Diesel ಬೆಲೆ ಏರಿಕೆಯಿಂದ ಚಿಂತಿತರಾಗಿದ್ದೀರಾ! ಚಿಂತೆಬಿಡಿ ಇಲ್ಲಿದೆ ಪರಿಹಾರ title=
Nexzu mobility rompus +

ಬೆಂಗಳೂರು : ದಿನೇ ದಿನೇ ಪೆಟ್ರೋಲ್ ಡೀಸೆಲ್ ಬೆಲೆ ಏರುತ್ತಿರುವುದರಿಂದ ಪ್ರತಿಯೊಬ್ಬ ವ್ಯಕ್ತಿಯು ಭಾದಿತರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಪ್ರತಿಯೊಬ್ಬ ವ್ಯಕ್ತಿಯು ಕನಿಷ್ಠ ಮೊತ್ತದಲ್ಲಿ ಕಚೇರಿಯನ್ನು ಹೇಗೆ ತಲುಪಬೇಕು ಎಂದು ಯೋಚಿಸುತ್ತಿರುತ್ತಾರೆ. ನೆಕ್ಸ್ಜು ಮೊಬಿಲಿಟಿ ರೊಂಪಸ್ + ಸೈಕಲ್ (Nexzu Mobility rompus plus) ಅನ್ನು ಪ್ರಾರಂಭಿಸಿದೆ, ಇದು ನಿಮಗೆ ಬಹಳ ಕಡಿಮೆ ಮೊತ್ತದಲ್ಲಿ ನಿಮ್ಮ ಗಮ್ಯ ಸ್ಥಾನವನ್ನು ತಲುಪಲು ಅನುವು ಮಾಡಿಕೊಡುತ್ತದೆ.

* ನೆಕ್ಸ್ಜು ಮೊಬಿಲಿಟಿಯ ರೊಂಪಸ್ ಪ್ಲಸ್ (Nexzu Mobility's Rompus Plus) :

Top Speed 35 KM
ನೆಕ್ಸ್ಜು ಮೊಬಿಲಿಟಿ ಭಾರತದಲ್ಲಿ ಹೊಸ ರೊಂಪಸ್ + ಇ ಸೈಕಲ್ (e-Cycle)ಅನ್ನು ಬಿಡುಗಡೆ ಮಾಡಿದೆ. ಈ ಇ-ಸೈಕಲ್ ಅನ್ನು ಒಂದು ಬಾರಿ ಪೂರ್ಣ ಚಾರ್ಜ್ ಮಾಡಿ 35 ಕಿ.ಮೀ.ವರೆಗೆ ಚಲಿಸಬಹುದು ಎಂದು ಕಂಪನಿ ಹೇಳಿಕೊಂಡಿದೆ. ಇದರರ್ಥ ನಿಮ್ಮ ಕಚೇರಿಯ ಅಂತರವು 35 ಕಿ.ಮೀ ವ್ಯಾಪ್ತಿಯಲ್ಲಿದ್ದರೆ, Rompus+ ನಿಮಗೆ ಉತ್ತಮ ಆಯ್ಕೆಯಾಗಿದೆ.

* ಇ-ಸೈಕಲ್ ಅನ್ನು ಎಲ್ಲಿ ಖರೀದಿಸಬಹುದು? ಇದರ ಬೆಲೆ ಎಷ್ಟು?
How to buy for how much

How to Buy and Cost
ನೀವು ರೊಂಪಸ್ ಪ್ಲಸ್ ಸೂಪರ್ ಸೈಕಲ್ ಖರೀದಿಸಲು ಬಯಸಿದರೆ, ನೀವು ಅಧಿಕೃತ ವ್ಯಾಪಾರಿಗಳಿಂದ Nexzu Mobility ಖರೀದಿಸಬಹುದು ಅಥವಾ ನೀವು ಆನ್‌ಲೈನ್‌ನಲ್ಲಿಯೂ ಬುಕ್ ಮಾಡಬಹುದು. ಇದಲ್ಲದೆ ಇ-ಕಾಮರ್ಸ್ ಕಂಪನಿ ಅಮೆಜಾನ್ (Amazon) ಮತ್ತು ಪೇಟಿಎಂ (Paytm)ಮಾಲ್‌ನಂತಹ ಆನ್‌ಲೈನ್ ಶಾಪಿಂಗ್ ಸೈಟ್‌ಗಳಿಂದಲೂ ಇದನ್ನು ಬುಕ್ ಮಾಡಬಹುದು. ಸ್ಟೈಲಿಶ್ ಬೈಸಿಕಲ್ ರೊಂಪಸ್ + ಬೆಲೆ 31,980 ರೂ.

ಇದನ್ನೂ ಓದಿ - ಹೊಸ ಲುಕ್ ಜೊತೆಗೆ ಮತ್ತೆ ನಿಮ್ಮ ಮನ ಗೆಲ್ಲಲು ಬರುತ್ತಿದೆ Bajaj Pulsar 180

* ವೋಕಲ್ ಫಾರ್ ಲೋಕಲ್ (Vocal for Local) :

Environment Saver and Vocal for Local
ನೆಕ್ಸ್ಜು ಮೊಬಿಲಿಟಿ ರೊಂಪಸ್ + ಅನ್ನು ಸಂಪೂರ್ಣವಾಗಿ ಭಾರತದಲ್ಲಿ ತಯಾರಿಸಲಾಗಿದೆ. ಇದರರ್ಥ ಮೇಕ್ ಇನ್ ಇಂಡಿಯಾ (Make In India) ಮತ್ತು ವೋಕಲ್ ಫಾರ್ ಲೋಕಲ್ (Vocal for Local) ಎರಡೂ ಉದ್ದೇಶವನ್ನು ಪೂರೈಸುತ್ತವೆ. ಇದಲ್ಲದೆ, ಈ ಸೈಕಲ್ ನಿಮ್ಮ ಹಣ ಮತ್ತು ಪರಿಸರವನ್ನು ಸಹ ಉಳಿಸುತ್ತದೆ.

ಇದನ್ನೂ ಓದಿ - ಪೆಟ್ರೋಲ್ ಡೀಸೆಲ್ ಜಂಜಾಟವೇ ಬೇಡ, ಶೀಘ್ರ ರಸ್ತೆಗಿಳಿಯಲಿದೆ ಈ ಅತ್ಯದ್ಭುತ ಹೈಡ್ರೋಜನ್ ಬಸ್..!

* ಇ ಬೈಕ್‌ಗಿಂತ ಎಷ್ಟು ಉತ್ತಮ (How much better than e bike) :

Better and Economic from e Bike
ಇಂದಿನ ಯುಗವು ಇ ಬೈಕ್‌ನಿಂದ ಕೂಡಿದೆ. ಅಂತಹ ಪರಿಸ್ಥಿತಿಯಲ್ಲಿ, ಈ ರೊಂಪಸ್ + ಬೈಸಿಕಲ್ ತುಂಬಾ ಆರ್ಥಿಕವಾಗಿದೆ. ನೀವು ಇದನ್ನು ಈ ಬೈಕ್‌ನ ಮೂರನೇ ಒಂದು ಭಾಗದಷ್ಟು ಬೆಲೆಗೆ ಖರೀದಿಸಬಹುದು ಮತ್ತು ಅದನ್ನು ಚಲಾಯಿಸುವ ವೆಚ್ಚವೂ ತುಂಬಾ ಕಡಿಮೆ ಇರುತ್ತದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News