PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?

PNB Scam - ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB)ಗೆ ಪಂಗನಾಮ ಹಾಕಿ ವಿದೇಶಗಳಲ್ಲಿ ತಲೆ ಮರೆಸಿಕೊಂಡಿರುವ ನೀರವ್ ಮೋದಿ (Nirav Modi) ಅರ್ಜಿಯನ್ನು ತಿರಸ್ಕರಿಸಿರುವ ಲಂಡನ್ ನ್ಯಾಯಾಲಯ,  ಆತನನ್ನು ಭಾರತಕ್ಕೆ ಹಸ್ತಾಂತರಿಸಲು (Extradition) ಒಪ್ಪಿಗೆ ನೀಡಿದೆ. ಆದರೆ, ನ್ಯಾಯಾಲಯದ ಈ ತೀರ್ಪಿನಿಂದ ನಿರವ್ ಮೋದಿ ಮುಂದಿರುವ ಎಲ್ಲ ಆಯ್ಕೆಗಳು ಮುಗಿದಿವೆ ಎಂಬರ್ಥವಲ್ಲ. ಭಾರತಕ್ಕೆ ನಿರವ್ ಮೋದಿಯನ್ನು ವಾಪಸ್ ತರುವ ದಾರಿಯಲ್ಲಿ ಹಲವು ಪೇಚುಗಳಿವೆ.

Written by - Nitin Tabib | Last Updated : Feb 25, 2021, 07:48 PM IST
  • ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಒಪ್ಪಿದ ಲಂಡನ್ ನ್ಯಾಯಾಲಯ.
  • ಆದರೆ, ನಿರವ್ ಮೋದಿಯನ್ನು ಭಾರತಕ್ಕೆ ತರುವ ದಾರಿಯಲ್ಲಿ ಇನ್ನೂ ಹಲವು ಪೇಚುಗಳಿವೆ.
  • ಇದಕ್ಕಾಗಿ ಲಂಡನ್ ನಲ್ಲಿ ನಿರವ್ ಮೋದಿಗೆ ಇರುವ ಆಯ್ಕೆಗಳಾವುವು ಇಲ್ಲಿ ತಿಳಿದುಕೊಳ್ಳಿ.
PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...? title=
PNB Scam (File Photo)

ಲಂಡನ್: PNB Scam - ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ ವಂಚನೆ ಎಸಗಿ ವಿದೇಶದಲ್ಲಿ ತಲೆಮರೆಸಿಕೊಂಡಿರುವ ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು (Extradition Of Nirav Modi) ಲಂಡನ್ ನ್ಯಾಯಾಲಯ ಒಪ್ಪಿಗೆ ನೀಡಿದೆ. ಇದರಿಂದ ನಿರವ್ ಮೋದಿಯನ್ನು ಭಾರತಕ್ಕೆ ತರುವ ಸಾಧ್ಯತೆಗಳು ನಿಚ್ಚಳವಾಗಿವೆ. ವಾಸ್ತವದಲ್ಲಿ ಈ ವಿಷಯದಲ್ಲಿ ನಿರವ್ ಮೋದಿ ಸಲ್ಲಿಸಿದ್ದ ಅರ್ಜಿಯನ್ನು ಲಂಡನ್ ನ ಒಂದು ನ್ಯಾಯಾಲಯ ತಳ್ಳಿಹಾಕಿ, ಭಾರತಕ್ಕೆ ಹಸ್ತಾಂತರಿಸಲು ಒಪ್ಪಿಗೆ ನೀಡಿದೆ. ಈ ಕುರಿತು ತೀರ್ಪು ಪ್ರಕಟಿಸಿರುವ ನ್ಯಾಯಾಧೀಶರು ನಿರವ್ ಮೋದಿ ಭಾರತದಲ್ಲಿ ಹಲವು ಪ್ರಶ್ನೆಗಳನ್ನು ಉತ್ತರಿಸಬೇಕಿದೆ. ಭಾರತ ನಿರವ್ ಮೋದಿಯನ್ನು ದೋಷಿ ಎಂದು ಪ್ರಕಟಿಸುವ ಎಲ್ಲ ಸಾಧ್ಯತೆಗಳು ಇವೆ ಎಂದಿದ್ದಾರೆ.

ಇದಲ್ಲದೆ, ಭಾರತದಲ್ಲಿ ನಿರವ್ ಮೋದಿಗೆ ನ್ಯಾಯ ಸಿಗುವುದಿಲ್ಲ ಎಂಬ ವಾದದ ಹಿಂದೆ ಯಾವುದೇ ಆಧಾರವಿಲ್ಲ. ಭಾರತದ ನ್ಯಾಯಾಂಗ ವ್ಯವಸ್ಥೆ ನಿಸ್ಪಕ್ಷವಾಗಿದೆ ಎಂದು ನ್ಯಾಯಪೀಠ ಹೇಳಿದೆ. ವಾಸ್ತವದಲ್ಲಿ ನಿರವ್ ಮೋದಿ ತಮ್ಮ ಮಾನಸಿಕ ಆರೋಗ್ಯದ ಕಾರಣ ಹೇಳಿ ಹಸ್ತಾಂತರ ಪ್ರಕ್ರಿಯೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ. ಆದರೆ, ಇದರರ್ಥ ನಿರವ್ ಮೋದಿ ಮುಂದೆ ಇರುವ ಎಲ್ಲ ಆಯ್ಕೆಗಳು ಮುಗಿದುಹೋಗಿವೆ ಎಂದರ್ಥವಲ್ಲ. ಏಕೆಂದರೆ, ಭಾರತಕ್ಕೆ ನಿರವ್ ಮೋದಿಯನ್ನು ತರುವ ದಾರಿಯಲ್ಲಿ ಇನ್ನೂ ಸಾಕಷ್ಟು ಪೇಚುಗಳಿವೆ.

ಗೃಹ ಸಚಿವೆ ಪ್ರೀತಿ ಪಟೇಲ್ ಗೆ ಈ ಆದೇಶದ ಪ್ರತಿ ಕಳುಹಿಸಲಾಗುವುದು
ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನೀಡಿರುವ ಈ ತೀರ್ಪಿನ ಬಳಿಕ ಆದೇಶದ ಪ್ರತಿಯನ್ನು UK (United Kingdom) ಗೃಹ ಸಚಿವೆ  ಪ್ರೀತಿ ಪಟೇಲ್ (Preeti Patel) ಅವರ ಕಚೇರಿಗೆ ಅನುಮೋದನೆಗಾಗಿ ಕಳುಹಿಸಲಾಗುವುದು. ನೀರವ್ ಮೋದಿಯವರ ಹಸ್ತಾಂತರವನ್ನು ಅನುಮೋದಿಸಬೇಕೆ ? ಅಥವಾ ವಿನಂತಿಯನ್ನು ಉಳಿಸಿಕೊಳ್ಳಬೇಕೆ ? ಎಂದು ನಿರ್ಧರಿಸಲು ಪ್ರಿತಿ ಪಟೇಲ್ ಅವರ ಬಳಿ ಎರಡು ತಿಂಗಳ ಕಾಲಾವಕಾಶ ಇದೆ. ಇದಲ್ಲದೆ ನೀರವ್ ಕೆಳ ನ್ಯಾಯಾಲಯದ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲು ಹೈಕೋರ್ಟ್ ಗೆ ಹೋಗಬಹುದಾಗಿದೆ. ಹೈ ಕೋರ್ಟ್ ಒಂದು ವೇಳೆ ಅವರ ಮೇಲ್ಮನವಿಯನ್ನು ಅಂಗೀಕರಿಸಿದರೆ, ಅವರು ಹೈಕೋರ್ಟ್ ನಲ್ಲಿ ತಮ್ಮ ವಿರುದ್ಧದ ಪ್ರಕರಣವನ್ನು ಎದುರಿಸಲಿದ್ದಾರೆ.

ಇದನ್ನೂ ಓದಿ- 1,350 ಕೋಟಿ ರೂ. ಮೌಲ್ಯದ ನೀರವ್ ಮೋದಿ ಮತ್ತು ಮೆಹುಲ್ ಚೋಕ್ಸಿ ಆಭರಣಗಳು ಭಾರತಕ್ಕೆ ವಾಪಾಸ್

ಒಂದು ವೇಳೆ ಹೈಕೋರ್ಟ್ ಕೂಡ ನಿರವ್ ಮೋದಿ ಹಸ್ತಾಂತರಕ್ಕೆ ಒಪ್ಪಿಕೊಂಡಿದ್ದೆ ಆದಲ್ಲಿ, ನಿರವ್ ಮೋದಿ ಬ್ರಿಟನ್ ನಲ್ಲಿ ಶರಣಾಗತಿ ನೀಡಲು ಅರ್ಜಿ ಸಲ್ಲಿಸಬಹುದು. ಅಂದರೆ, ಇದಕ್ಕೂ ಭಾರತೀಯ ಬ್ಯಾಂಕ್ ಗಳಿಗೆ ಸಾವಿರಾರು ಕೋಟಿ ರೂ.ಗಳ ವಂಚನೆ ಎಸಗಿ ವಿದೇಶದಲ್ಲಿ ತಲೆಮರೆಸಿರುವ ಮದ್ಯ ದೊರೆ ವಿಜಯ್ ಮಲ್ಯ ಕೂಡ ಇದೆ ರೀತಿ ಅರ್ಜಿ ಸಲ್ಲಿಸಿದ್ದ ಎಂಬುದು ಇಲ್ಲಿ ಉಲ್ಲೇಖನೀಯ. ಬ್ರಿಟನ್ ಅವನ ಈ ಅರ್ಜಿಗೆ ತೆಗೆದುಕೊಳ್ಳುವ ಸಮಯ ಭಾರತಕ್ಕೆ ಆತನನ್ನು ಹಸ್ತಾಂತರಿಸುವ ಪ್ರಕ್ರಿಯೆಯನ್ನು ಮತ್ತಷ್ಟು ವಿಳಂಬಗೊಳಿಸಲಿದೆ. 

ಇದನ್ನೂ ಓದಿ-ಮಲ್ಯ, ಚೌಕ್ಸಿ,ಮೋದಿ ಅಷ್ಟೇ ಅಲ್ಲ ದೇಶ ಬಿಟ್ಟು ಓಡ್ಹೋದವರ ಸಂಖ್ಯೆ ಎಷ್ಟು ಗೊತ್ತಾ?

ಪ್ರಕರಣ ಏನು?
ತನಿಖಾ ಸಂಸ್ಥೆಗಳ ಪ್ರಕಾರ ನಿರವ್ ಮೋದಿ (Nirav Modi) ಹಾಗೂ ಆತನ ಸಹಚರ ಮೆಹುಲ್ ಚೋಕ್ಸಿ, (Mehul Choksi) ಕೆಲ ಬ್ಯಾಂಕ್ ಅಧಿಕಾರಿಗಳ ಜೊತೆ ಸೇರಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಗೆ 14,000 ಕೋಟಿ ರೂ. ವಂಚನೆ (PNB Scam) ಎಸಗಿ, ಭಾರತ ಬಿಟ್ಟು ಪಲಾಯನಗೈದಿದ್ದಾರೆ.

ಇದನ್ನೂ ಓದಿ-PNB ಹಗರಣ: ನಿರವ್ ಮೋದಿಗೆ ಭಾರಿ ಹಿನ್ನಡೆ, ಶೀಘ್ರದಲ್ಲೇ ಆಸ್ತಿ ವಶಕ್ಕೆ ಆದೇಶ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News