ಹೂಸ್ಟನ್: ಅಮೆರಿಕದ ಅತಿದೊಡ್ಡ ರಾಜ್ಯವಾದ ಟೆಕ್ಸಾಸ್‌ನಲ್ಲಿ, ಈಗ ಮಾಸ್ಕ್ (mask)ಧರಿಸುವುದು ಕಡ್ಡಾಯವಲ್ಲ. ಕರೋನಾ ವೈರಸ್ (Coronavirus) ಪ್ರಕರಣಗಳು ಕಡಿಮೆಯಾಗುತ್ತಿದೆ. ಅಲ್ಲದೆ, ಕರೋನಾ ವ್ಯಾಕ್ಸಿನೇಷನ್ (Vaccination) ಕೂಡಾ ನಡೆಯುತ್ತಿದೆ. ಹಾಗಾಗಿ ಇನ್ನು ಮಾಸ್ಕ್ ಧರಿಸುವ ಅನಿವಾರ್ಯತೆಯಿಲ್ಲ ಎಂದು ಅಲ್ಲಿನ ಗವರ್ನರ್ ಆದೇಶಿಸಿದ್ದಾರೆ.
ಟೆಕ್ಸಾಸ್ (Texas) ಗವರ್ನರ್ ಗ್ರೆಗ್ ಅಬಾಟ್ ಮಂಗಳವಾರ ಈ ನಿರ್ಧಾರವನ್ನು ತೆಗೆದುಕೊಂಡಿದ್ದಾರೆ. ಟೆಕ್ಸಾಸ್ ರಾಜ್ಯದಲ್ಲಿ ಫೇಸ್ ಮಾಸ್ಕ್ (Mask) ಧರಿಸುವ ಅಗತ್ಯವಿಲ್ಲ ಎಂದವರು ಹೇಳಿದ್ದಾರೆ. ಈ ರಾಜ್ಯದಲ್ಲಿ 8 ತಿಂಗಳ ಮಾಸ್ಕ ಧರಿಸುವುದನ್ನು ಕಡ್ಡಾಯಗೊಳಿಸಲಾಗಿತ್ತು. ಆದರೆ ಈಗ ಮಾಸ್ಕ್ ಕಡ್ಡಾಯದ ಆದೇಶವನ್ನು ಹಿಂಪಡೆಯಲಾಗಿದೆ. ಆದರೆ ಮಾಸ್ಕ್ ಕಡ್ಡಾಯವಲ್ಲ ದ ಮಾತ್ರಕ್ಕೆ ಜನ ತಮ್ಮ ಜವಾಬ್ದಾರಿಯಿಂದ ಮುಕ್ತರಾಗಿದ್ದಾರೆ ಎಂದಲ್ಲ,. ತಮ್ಮ ಸುರಕ್ಷೆಗಾಗಿ ಜನ ಮಾಸ್ಕ್ ಧರಿಸುವುದಾದರೆ ಧರಿಸಬಹುದು. ಆದರೆ ಮಾಸ್ಕ್ ಕಡ್ಡಾಯವಲ್ಲ ಎಂದು ಗ್ರೆಗ್ ಅಬಾಟ್ ಹೇಳಿದ್ದಾರೆ. ಕರೋನಾ (coronavirus) ಸಾಂಕ್ರಾಮಿಕ ರೋಗದಿಂದಾಗಿ ಟೆಕ್ಸಾಸ್ ರಾಜ್ಯದಲ್ಲಿ 42 ಸಾವಿರಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಆದರೆ ಈಗ ಟೆಕ್ಸಾಸ್‌ನಲ್ಲಿ ಕರೋನಾ ಪ್ರಕರಣಗಳು ಕಡಿಮೆಯಾಗತೊಡಗಿವೆ.
ಇದನ್ನೂ ಓದಿ : Indian Driving Licence: ಈ 15 ದೇಶಗಳಲ್ಲಿ ಚಿಂತೆ ಬಿಟ್ಟು ವಾಹನ ಓಡಿಸಿ, ಆದ್ರೆ Indian DL ನಿಮ್ಹತ್ರ ಇರಲಿ
ಮಾಸ್ಕ್ ಕಡ್ಡಾಯವನ್ನು ಕೊನೆಗೊಳಿಸುವುದರಿಂದ ಕರೋನಾ (COVID-19) ಭೀತಿ ಕೊನೆಯಾಗಿದೆ ಎಂದಲ್ಲ, ಎಂದು ಟೆಕ್ಸಾಸ್ ವಿಶ್ವವಿದ್ಯಾಲಯದ ಇಂಟಿಗ್ರೇಟಿವ್ ಬಯಾಲಜಿ ಪ್ರಾಧ್ಯಾಪಕ ಡಾ. ಲಾರೆನ್ ಏಂಜಲ್ ಮೇಯರ್ಸ್ ತಿಳಿಸಿದ್ದಾರೆ. ಕರೋನಾ ಕಡಿಮೆಯಾಗಿದೆಯೇ ಹೊರತು ಸಂಪೂರ್ಣ ನಿರ್ನಾಮವಾಗಿಲ್ಲ ಎಂದವರು ಹೇಳಿದ್ದಾರೆ. ಇನ್ನು ಕೆಲ ಸಮಯದವರೆಗೆ ಮಾಸ್ಕ್ ಧರಿಸುವುದು ಉತ್ತಮ ಎಂದವರು ಅಭಿಪ್ರಾಯಪಟ್ಟಿದ್ದಾರೆ.
ಇನ್ನು, ಕರೋನಾ (Corona) ಸಾಂಕ್ರಾಮಿಕ ರೋಗ ಹರಡುವುದನ್ನು ತಡೆಗಟ್ಟಲು ಮಾಸ್ಕ್ ಕಡ್ಡಾಯವನ್ನು ಮುಂದುವರಿಸಬೇಕು ಎಂದು ಡೆಮಾಕ್ರಟಿಕ್ ಪಕ್ಷದ (Democratic party) ಸದಸ್ಯರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ :Viral vedio : 12ನೇ ಮಹಡಿಯಿಂದ ಕೆಳಗೆ ಬಿದ್ದರೂ ಕಿಲಕಿಲ ನಗುತ್ತಿತ್ತು ಮುದ್ದು ಕಂದ..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.