ಬೆಂಗಳೂರು : ಭಾರತೀಯ ಕಿಚನ್ ನಲ್ಲಿ ಕರಿಬೇವಿನಸೊಪ್ಪಿಗೆ ( Curry Leaves) ಅದರದ್ದೇ ಆದ ಮಹತ್ವ ಇದೆ. ಒಗ್ಗರಣೆ ಹಾಕುವಾಗ ಕರಿಬೇವಿನ ಸೊಪ್ಪು ಇಲ್ಲದೇ ಹೋದರೆ, ಅಡುಗೆ ಅಪೂರ್ಣ. ಕರಿಬೇವಿನ ಸೊಪ್ಪು ಅಡುಗೆಗೆ ನೀಡುವ ರುಚಿಯೇ ಬೇರೆ. ಆದರೆ, ಸುವಾಸನೆ ಅಡುಗೆಯ ರುಚಿಯನ್ನು ಇನ್ನೂ ಹೆಚ್ಚಿಸುತ್ತದೆ. ಆರೋಗ್ಯ ವಿಚಾರದಲ್ಲೂ ಕರಿಬೇವಿನ ಸೊಪ್ಪಿಗೆ ಸಾಕಷ್ಟು ಮಹತ್ವ ಇದೆ. ಕರಿಬೇವಿನ ಸೊಪ್ಪು ತಿಂದರೆ, ಅದು ಹೃದ್ರೋಗ, ಕ್ಯಾನ್ಸರ್ (Cancer) ವಿರುದ್ಧ ರಕ್ಷಾ ಕವಚವಾಗಿ ವರ್ತಿಸುತ್ತದೆ ಎಂದು ಹೇಳುತ್ತದೆ ಹೈದರಾಬಾದಿನ ಸೆಂಟ್ರಲ್ ಇನ್ಸಿಟ್ಯೂಟ್ ಆಫ್ ಮೆಡಿಸಿನಲ್ ಮತ್ತು ಅರೋಮಾಟಿಕ್ ಪ್ಲಾಂಟ್ಸ್ ಸಂಸ್ಥೆಯ ವರದಿ.
ಕರಿಬೇವಿನ ( Curry Leaves) ಸೊಪ್ಪಿನ ರಸ ದೇಹದಲ್ಲಿ ಕೊಲೆಸ್ಟರಾಲ್ (cholesterol) ಮತ್ತು ಟ್ರೈಗ್ಲಿಸರೈಡ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಹೃದ್ರೋಗ (Heart disease) ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಸ್ತನ ಮತ್ತು ಶ್ವಾಸಕೋಶ ಕ್ಯಾನ್ಸರ್ ನಿಂದ (Cancer) ರಕ್ಷಣೆ ನೀಡುತ್ತದೆ. ಇದು ಸಂಶೊಧನೆಯಲ್ಲಿ ದೃಢಪಟ್ಟಿದೆ ಎಂದು ಹೇಳಿದೆ ಸಂಸ್ಥೆ.
ಇದನ್ನೂ ಓದಿ : Computer Vision Syndrome - ಅತಿಯಾದ ಗ್ಯಾಜೆಟ್ ಗಳ ಬಳಕೆಈ ಕಾಯಿಲೆಗೆ ಕಾರಣ
ಕರಿಬೇವಿನ ಸೊಪ್ಪಿನ ಮೂರು ಅತಿ ದೊಡ್ಡ ಪ್ರಯೋಜನ ಇಲ್ಲಿದೆ :
ಕರಿಬೇವಿನ ಸೊಪ್ಪಿನ ಸುವಾಸನೆ ರುಚಿ ಅಷ್ಟೇ ಅಲ್ಲ. ಅದರ ರಸದಲ್ಲಿ ಕಬ್ಬಿಣದಾಂಶ, ಕ್ಯಾಲ್ಸಿಯಂ (Calcium), ಪಾಸ್ಪರಸ್, ಪ್ರೊಟೀನ್, ವಿಟಮಿನ್ ಬಿ2, ವಿಟಮಿನ್ ಬಿ6, ವಿಟಮಿನ್ ಬಿ12 ಸಾಕಷ್ಟು ಪ್ರಮಾಣದಲ್ಲಿ ದೇಹಕ್ಕೆ ಸಿಗುತ್ತದೆ.
ಹೃದಯದ ಆರೋಗ್ಯಕ್ಕೆ ಒಳ್ಳೆಯದು :
ಕರಿಬೇವಿನ ಸೊಪ್ಪಿನ ರಸದಲ್ಲಿ ಕೊಲೆಸ್ಟರಾಲ್ ಮತ್ತು ಟ್ರೈಗ್ಲಿಸರೈಡ್ ಕಡಿಮೆ ಮಾಡುವ ಸಾಮರ್ಥ್ಯ ಇದೆ. ಹಾಗಾಗಿ, ಹೃದ್ರೋಗಿಗಳು ಊಟ ತಿಂಡಿಗಳಲ್ಲಿ ಕರಿಬೇವಿನ ಸೊಪ್ಪು ಹೆಚ್ಚು ತಿಂದರೆ ಉತ್ತಮ ಎಂದು ಹೇಳುತ್ತಾರೆ ಆರೋಗ್ಯ ತಜ್ಞರು.
ಹೊಟ್ಟೆಯ ಸಮಸ್ಯೆ, ವಾಂತಿ (Vomiting), ಮೂಲವ್ಯಾಧಿ ಇತ್ಯಾದಿ ಕಾಯಿಲೆಗಳನ್ನು ಗುಣಪಡಿಸಲು ಕರಿಬೇವಿನ ಸೊಪ್ಪನ್ನು ಬಳಸಲಾಗುತ್ತದೆ. ಇದು ಅನೇಕ ರೀತಿಯ ಬ್ಯಾಕ್ಟೀರಿಯಾಗಳಿಂದಲೂ ರಕ್ಷಿಸುತ್ತದೆ.
ಇದನ್ನೂ ಓದಿ : Garlic: ತಿಳಿಯಿರಿ ಪುರುಷರಲ್ಲಿ ಒಂದು ಎಸಳು ಬೆಳ್ಳುಳ್ಳಿಯ ಪ್ರಯೋಜನ.!
ಒಗ್ಗರಣೆ ಅಲ್ಲದೆ ಬೇರೆ ಎಲ್ಲಿ ಬೇವು ಬಳಸಬಹುದು:
ಟೊಮೊಟೋ ಚಟ್ನಿ, ಬ್ರೆಡ್ ಪಕೋಡಾ, ಮಿಕ್ಸರ್, ಪಕೋಡಾ, ಸಾಂಬಾರ್,ಉಪ್ಮಾ ಇತ್ಯಾದಿ ಎಲ್ಲಾ ಆಹಾರಗಳಲ್ಲಿ ಕರಿಬೇವು ಸೇರಿಸಿ ತಿನ್ನಬಹುದು. ರುಚಿಯೂ ಇರುತ್ತದೆ. ಆರೊಗ್ಯಕ್ಕೂ (health) ಒಳ್ಳೆಯದು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.