Salary Account ಖಾತೆದಾರರಿಗೆ 20 ಲಕ್ಷ ರೂ.ವಿಮೆ ಹೋಮ್ ಲೋನ್ ನಲ್ಲಿ ಡಿಸ್ಕೌಂಟ್, ಯಾವ್ ಬ್ಯಾಂಕ್ ನೀಡ್ತಿದೆ ಈ ಸೌಲಭ್ಯ?

PNB MySalary Account ಅಡಿ ಖಾತೆದಾರರಿಗೆ ಪರ್ಸನಲ್ ಆಕ್ಸಿಡೆಂಟ್ ಕವರ್ ಜೊತೆಗೆ ಲೋನ್ ಪಡೆಯುವಾಗ ಡಾಕ್ಯುಮೆಂಟೆಶನ್ ಹಾಗೂ ಪ್ರೊಸೆಸಿಂಗ್ ಶುಲ್ಕದಿಂದ ಕೂಡ ರಿಯಾಯ್ತಿ ಸಿಗಲಿದೆ.

Written by - Nitin Tabib | Last Updated : Mar 10, 2021, 03:28 PM IST
  • ಸ್ಯಾಲರಿ ಖಾತೆದಾರರಿಗೆ ವಿಶೇಷ ಸೌಕರ್ಯ ಕಲ್ಪಿಸಿದ PNB.
  • 20 ಲಕ್ಷ ರೂ.ವರೆಗೆ ವೈಯಕ್ತಿಕ ಅಪಘಾತ ವಿಮೆ.
  • ಸ್ವೀಪ್ ಸೌಕರ್ಯ ಕೂಡ ಸಿಗಲಿದೆ.
Salary Account ಖಾತೆದಾರರಿಗೆ 20 ಲಕ್ಷ ರೂ.ವಿಮೆ  ಹೋಮ್ ಲೋನ್ ನಲ್ಲಿ ಡಿಸ್ಕೌಂಟ್, ಯಾವ್ ಬ್ಯಾಂಕ್ ನೀಡ್ತಿದೆ ಈ ಸೌಲಭ್ಯ? title=
PNB Salary Account (File Photo)

ನವದೆಹಲಿ: PNB MySalary Account - ಒಂದು ವೇಳೆ ನೀವೂ ಕೂಡ ನೌಕರ ವರ್ಗಕ್ಕೆ ಸೇರಿದವರಾಗಿದ್ದರೆ ನಿಮ್ಮ ಬಳಿಯೂ ಕೂಡ ಸ್ಯಾಲರಿ ಅಕೌಂಟ್ ಇರಬಹುದು. ಈ ರೀತಿಯ ಖಾತೆಗಳಿಗೆ ಬ್ಯಾಂಕ್ ಹಲವು ರೀತಿಯ ಸೌಕರ್ಯಗಳನ್ನು ಒದಗಿಸುತ್ತವೆ. ಈ ನಿಟ್ಟಿನಲ್ಲಿ ಪಂಜಾಬ್ ನ್ಯಾಷನಲ್ ಬ್ಯಾಂಕ್ ಪ್ರಸ್ತುತಪಡಿಸುತ್ತಿರುವ ಕೊಡುಗೆ ತುಂಬಾ ಆಕರ್ಷಕವಾಗಿದೆ. ತಮ್ಮ ಬ್ಯಾಂಕ್ ನಲ್ಲಿ ಸ್ಯಾಲರಿ ಖಾತೆ ತೆರೆಯುವ ಗ್ರಾಹಕರಿಗೆ ಪಂಜಾಬ್ ನ್ಯಾಷನಲ್ ಬ್ಯಾಂಕ್ (PNB), ವೈಯಿಕ್ತಿಕ ಅಪಘಾತ ವಿಮೆಯ ಜೊತೆಗೆ ಓವರ್ ಡ್ರಾಫ್ಟ್ ಹಾಗೂ ಸ್ವೀಪ್ ಸೌಲಭ್ಯ ಒದಗಿಸುತ್ತಿದೆ. ಬ್ಯಾಂಕ್ ವೆಬ್ ಸೈಟ್ ನಲ್ಲಿ ನೀಡಿರುವ ಮಾಹಿತಿ ಪ್ರಕಾರ PNB MySalary Account ಗ್ರಾಹಕರಿಗೆ 3 ಲಕ್ಷ ರೂ.ಗಳ ವರೆಗೆ ಓವರ್ ಡ್ರಾಫ್ಟ್ ಸೌಲಭ್ಯದ ಜೊತೆಗೆ 20 ಲಕ್ಷ ರೂ.ಗಳ ವರೆಗೆ ವೈಯಕ್ತಿಕ ಅಪಘಾತ ವಿಮೆಯ ಕವರೇಜ್ ಕೂಡ ನೀಡುತ್ತಿದೆ. ಇದಲ್ಲದೆ ಈ ಖಾತೆದಾರರು ಪಡೆಯುವ ಲೋನ್ ನ ಡಾಕ್ಯುಮೆಂಟೆಶನ್ ಹಾಗೂ ನಿರ್ವಹಣಾ ಶುಲ್ಕದಲ್ಲಿಯೂ ಕೂಡ ಶೇ.100ರಷ್ಟು ವಿನಾಯ್ತಿ ನೀಡುತ್ತಿದೆ. ಈ ಯೋಜನೆಯ ಅಡಿ ಖಾತೆ ತೆರೆಯುವ ನೌಕರರನ್ನು ಬ್ಯಾಂಕ್ ಸಿಲ್ವರ್, ಗೋಲ್ಡ್, ಪ್ರಿಮಿಯಂ ಹಾಗೂ ಪ್ಲಾಟಿನಂ ಎಂಬ ನಾಲ್ಕು ಶ್ರೇಣಿಗಳಲ್ಲಿ ವಿಂಗಡಿಸಿದೆ. ಈ ವಿಂಗಡಣೆ ನೌಕರರು ಪಡೆಯುವ ವೇತನವನ್ನು ಆಧರಿಸಿ ಇರಲಿದೆ. ಪ್ರತ್ಯೇಕ ಶ್ರೇಣಿಗೆ ಓವರ್ ಡ್ರಾಫ್ಟ್ ಹಾಗೂ ವಿಮಾ ಕವರೇಜ್ ವಿಭಿನ್ನವಾಗಿದೆ.

ಯಾರು ಖಾತೆ ತೆರೆಯಬಹುದು?
PNB ನೀಡುತ್ತಿರುವ ಈ ಸೌಲಭ್ಯದ ಅಡಿ ಕೇಂದ್ರ/ರಾಜ್ಯ  ಸರ್ಕಾರ/   PSU/  ಸರ್ಕಾರಿ-ಅರೆಸರಕಾರಿ ನಿಗಮ/ NNCs/ ಹೆಸರಾಂತ ಇನ್ಸ್ಟಿಟ್ಯೂಟ್ ಗಳು, ಕಾರ್ಪೋರೆಟ್ಸ್ ಅಥವಾ ಶಿಕ್ಷಣ ಸಂಸ್ಥೆಗಳಲ್ಲಿ ಕೆಲಸ ಮಾಡುವ ಪರ್ಮನೆಂಟ್ ಉದ್ಯೋಗಿಗಳು ತಮ್ಮ ಖಾತೆಯನ್ನು ತೆರೆಯಬಹುದು. ಸ್ಯಾಲರಿ ಖಾತೆಯಲ್ಲಿ ನೀವು ಕನಿಷ್ಠ ಬ್ಯಾಲೆನ್ಸ್ ಮೆಂಟೆನ್ ಮಾಡುವ ಅಗತ್ಯವಿಲ್ಲ ಮತ್ತು ಇದನ್ನು ನೀವು ಝೀರೋ ಬ್ಯಾಲನ್ಸ್ ನಿಂದ ಕೂಡ ಖಾತೆ ತೆರೆಯಬಹುದು.

PNB MySalary Account ವೈಶಿಷ್ಟ್ಯಗಳು ಇಲ್ಲಿವೆ
ಖಾತೆಯ ನಾಲ್ಕು ಶ್ರೇಣಿಗಳು 

1. ಸಿಲ್ವರ್ - 10 ಸಾವಿರ ರೂ.ಗಳಿಂದ 25 ಸಾವಿರ ರೂ. ಮಾಸಿಕ ವೇತನ ಹೊಂದಿದವರು.
2. ಗೋಲ್ಡ್ - ರೂ. 25,001 ರಿಂದ 75 ಸಾವಿರ ರೂ ಮಾಸಿಕ ವೇತನ ಹೊಂದಿದವರು.
3. ಪ್ರಿಮಿಯಂ  - ರೂ. 75,001  ರಿಂದ 1.5 ಲಕ್ಷ ರೂ. ಮಾಸಿಕ ವೇತನ.
4. ಪ್ಲಾಟಿನಂ - 1.5 ಲಕ್ಷ ರೂ.ಗಿಂತ ಹೆಚ್ಚಿನ ಸ್ಯಾಲರಿ ಹೊಂದಿದವರು.

ಓವರ್ ಡ್ರಾಫ್ಟ್ - ಸಿಲ್ವರ್ ಶ್ರೇಣಿ 50 ಸಾವಿರ, ಗೋಲ್ಡ್ ಶ್ರೇಣಿ 1.5ಲಕ್ಷ, ಪ್ರಿಮಿಯಂ ಶ್ರೇಣಿ 2.25 ಲಕ್ಷ ರೂ. ಹಾಗೂ ಪ್ಲಾಟಿನಂ ಶ್ರೇಣಿ ಹೊಂದಿದವರು 3 ಲಕ್ಷ ರೂ.ವರೆಗೆ ಪ್ರಿಮಿಯಂ ಪಡೆಯಬಹುದು.

ಸ್ವೀಪ್ ಸೌಕರ್ಯ - ಈ ಯೋಜನೆ ಅಡಿ ತೆರೆಯಲಾಗಿರುವ ಖಾತೆಗಳಿಗೆ ಸ್ವೀಪ್ ಸೌಕರ್ಯ ಕೂಡ ಒದಗಿಸಲಾಗಿದೆ. ಇದರ ಅಡಿ ಖಾತೆಯಲ್ಲಿ 20 ಸಾವಿರಕ್ಕಿಂತ ಹೆಚ್ಚಿನ  ಮೊತ್ತ ಇದ್ದರೆ ಸ್ವಯಂಚಾಲಿತವಾಗಿ ಒಂದು ಸಾವಿರ ರೂ. ಅಥವಾ ಅದರ ಗುಣಕದಲ್ಲಿ ರಾಶಿ 7-365 ದಿನಗಳವರೆಗೆ TDR/STDR (ಟರ್ಮ್ ಡಿಪಾಸಿಟ್/ ಸ್ಪೆಷಲ್ ಟರ್ಮ್ ಡಿಪಾಸಿಟ್) ಆಗಿ ಪರಿವರ್ತನೆಯಾಗುತ್ತದೆ. ಇದರ ಮೇಲೆ ನಿಮಗೆ FD ಮೇಲಿನ ಬಡ್ಡಿದರ ಅನ್ವಯಿಸುತ್ತದೆ.

ವೈಯಕ್ತಿಕ ಅಪಘಾತ ವಿಮೆ  - ಸ್ಯಾಲರಿ ಖಾತೆಗಳ ಮೇಲೆ ಬ್ಯಾಂಕ್ 18 ಲಕ್ಷ ರೂ.ಗಳವರೆಗೆ ಇನ್ಸುರೆನ್ಸ್ ಕವರ್ ನೀಡುತ್ತದೆ. ಒಂದು ವೇಳೆ ನೀವು ಡೆಬಿಟ್ ಕಾರ್ಡ್ ಸೌಕರ್ಯ ಪಡೆದರೆ 2 ಲಕ್ಷ ರೂ. ಹೆಚ್ಚುವರಿ ಕವರೇಜ್ ನೀಡುತ್ತದೆ. ಈ ರೀತಿ ಎಲ್ಲಾ ಶ್ರೇಣಿಯ ಖಾತೆದಾರರಿಗೆ ಬ್ಯಾಂಕ್ 20 ಲಕ್ಷ ರೂ.ವರೆಗಿನ ವೈಯಕ್ತಿಕ ಅಪಘಾತ ವಿಮೆ ಸೌಕರ್ಯ ನೀಡುತ್ತದೆ.

ಡೆಬಿಟ್ ಕಾರ್ಡ್ AMC - ಸಿಲ್ವರ್ ಹಾಗೂ ಗೋಲ್ಡ್ ಖಾತೆಧಾರಕರಿಗೆ ಮೊದಲ ಒಂದು ವರ್ಷದವರೆಗೆ ಎಎಂಸಿ (ಅಕೌಂಟ್ ಮೆಂಟೆನೆನ್ಸ್ ಶುಲ್ಕ) ಶುಲ್ಕದಲ್ಲಿ ಶೇ.50 ರಷ್ಟು ರಿಯಾಯಿತಿ ಇರಲಿದ್ದರೆ, ಉಳಿದೆರಡು ಶ್ರೇಣಿಗಳಿಗೆ ಯಾವುದೇ ರೀತಿಯ ಶುಲ್ಕವಿರುವುದಿಲ್ಲ.

Free Cheque Leaves - ಸಿಲ್ವರ್ ಗಾಗಿ 40, ಗೋಲ್ಡ್ ಶ್ರೇಣಿಗೆ 50, ಪ್ರಿಮಿಯಂ ಶ್ರೇಣಿಗೆ ವಾರ್ಷಿಕವಾಗಿ 100 ಚೆಕ್ ಗಳನ್ನು ಉಚಿತ ನೀಡಲಾಗುವುದು. ಪ್ಲಾಟಿನಂ ಶ್ರೇಣಿಯ ಗ್ರಾಹಕರಿಗೆ ವಾರ್ಷಿಕವಾಗಿ ಅನಿಯಮಿತ ಚೆಕ್ ಗಳನ್ನು ನೀಡಲಾಗುವುದು.

ಇದನ್ನೂ ಓದಿ- Banking: ಈ ಬ್ಯಾಂಕಿನಲ್ಲಿ ನೀವು ಖಾತೆ ಹೊಂದಿದ್ದರೆ ಈಗಲೇ ಈ ಕೆಲಸ ಮಾಡಿ

ಡೆಬಿಟ್ ಕಾರ್ಡ್ - ಸಿಲ್ವರ್ ಶ್ರೇಣಿಯಲ್ಲಿ ರೂಪೇ ಕ್ಲಾಸಿಕ್/ ಪ್ಲಾಟಿನಂ ಕಾರ್ಡ್ ಸಿಗಲಿದೆ. ಇದಕ್ಕಾಗಿ ನೀವು AMC ಪಾವತಿಸಬೇಕು. ಇತರೆ ಶ್ರೇಣಿಗಳ ಖಾತಾಧಾರಕರಿಗೆ ಪ್ಲಾಟಿನಮ್ ಶ್ರೇಣಿಯ ಕಾರ್ಡ್ ಸಿಗಲಿದೆ. ಇದರ ಮೇಲೆ ಯಾವುದೇ ರೀತಿಯ ಶುಲ್ಕ ಅನ್ವಯಿಸುವುದಿಲ್ಲ.

ಹೌಸಿಂಗ್/ಕಾರ್/ವೈಯಕ್ತಿಕ ಸಾಲದ ಡಾಕ್ಯೂಮೆಂಟೆಶನ್ ಹಾಗೂ ಪ್ರೊಸೆಸಿಂಗ್ ಚಾರ್ಚ್ - ಸಿಲ್ವರ್ ಹಾಗೂ ಗೋಲ್ಡ್ ಶ್ರೇಣಿಗೆ ಶೇ.50 ರಷ್ಟು ರಿಯಾಯಿತಿ, ಪ್ರಿಮಿಯಂ ಹಾಗೂ ಪ್ಲಾಟಿನಂ ಶ್ರೇಣಿಗೆ ಶೇ. 100 ರಷ್ಟು ರಿಯಾಯಿತಿ ಸಿಗಲಿದೆ. ಇದಕ್ಕಾಗಿ ಸತತ ಮೂರು ತಿಂಗಳ ಕನಿಷ್ಠ ಸ್ಯಾಲರಿ ಡಿಪಾಸಿಟ್ ಆಗಿರಬೇಕಾದ ಅನಿವಾರ್ಯತೆ ಇದೆ.

ಇದನ್ನೂ ಓದಿ- February Changes: ದೈನಂದಿನ ಜೀವನಕ್ಕೆ ಸಂಬಂಧಿಸಿದ ಈ ನಿಯಮಗಳು ಫೆ.1 ರಿಂದ ಬದಲಾಗುತ್ತಿವೆ

ಮೊದಲ ವರ್ಷದಲ್ಲಿ ಲಾಕರ್ ದರ- ಚಿಕ್ಕ ಲಾಕರ್ ಗಾಗಿ ಸಿಲ್ವರ್ ಶ್ರೆನಿಗಾಗಿ ಶೇ.25ರಷ್ಟು, ಗೋಲ್ಡ್ ಶ್ರೇಣಿಗಾಗಿ ಶೇ.50 ಹಾಗೂ ಪ್ರಿಮಿಯಂ ನಲ್ಲಿ ಶೇ.75ರಷ್ಟು ಹಾಗೂ ಪ್ಲಾಟಿನಂ ಶ್ರೇಣಿಯ ಖಾತೆದಾರರಿಗೆ ಸಣ್ಣ ಹಾಗೂ ಮದ್ಯಮಗಾತ್ರದ ಲಾಕರ್ ಗಳ ಮೇಲೆ ಶೇ.100 ರಷ್ಟು ರಿಯಾಯಿತಿ ಸಿಗಲಿದೆ.

ಕ್ರೆಡಿಟ್ ಕಾರ್ಡ್- ಕಾರ್ಡ್ ಬಿಡುಗಡೆಗೆ ಯಾವುದೇ ಚಾರ್ಜ್ ಇಲ್ಲ ಆದರೆ, AMC ಶುಲ್ಕ ಬೀಳಲಿದೆ.

ಇದನ್ನೂ ಓದಿ- Banking Update: ಇನ್ಮುಂದೆ ಮೊಬೈಲ್ ನಿಂದಲೇ ನಿಮ್ಮ Debit Card ಲಾಕ್ ಮಾಡಬಹುದು... ಹೇಗೆ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News