ನವದೆಹಲಿ: Banking Update:ದೇಶದ ಎರಡನೇ ಅತಿದೊಡ್ಡ ಸರ್ಕಾರಿ ಬ್ಯಾಂಕ್ ಪಿಎನ್‌ಬಿ ತನ್ನ ಗ್ರಾಹಕರಿಗೆ ವಿಶೇಷ ಸೌಲಭ್ಯವನ್ನು ನೀಡಿದೆ. ಗ್ರಾಹಕರ ಹಣವನ್ನು ರಕ್ಷಿಸಲು ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ವಿಶೇಷ ವೈಶಿಷ್ಟ್ಯವನ್ನು ಪರಿಚಯಿಸಿದೆ. ಇದರ ಸಹಾಯದಿಂದ, ನೀವು ನಿಮ್ಮ ಡೆಬಿಟ್ ಕಾರ್ಡ್ ಅನ್ನು ಲಾಕ್ ಮಾಡಬಹುದು ಮತ್ತು ಅದನ್ನು ಹೆಚ್ಚು ಸುರಕ್ಷಿತಗೊಳಿಸಬಹುದು. ಪಿಎನ್‌ಬಿ ಟ್ವೀಟ್ ಮಾಡುವ ಮೂಲಕ ಈ ಬಗ್ಗೆ ಮಾಹಿತಿ ನೀಡಿದೆ. ಈ ಸೌಲಭ್ಯದಡಿಯಲ್ಲಿ, ಪಿಎನ್‌ಬಿ ಗ್ರಾಹಕರು ತಮ್ಮ ಎಟಿಎಂ ಕಾರ್ಡ್ ಅನ್ನು ಆನ್ ಅಥವಾ ಆಫ್ ಮಾಡಬಹುದು. ಅದರಲ್ಲೂ ವಿಶೇಷವಾಗಿ ಇದಕ್ಕಾಗಿ ನೀವು ಬ್ಯಾಂಕ್‌ಗೆ ಹೋಗಬೇಕಾದ ಅಗತ್ಯವಿಲ್ಲ, ನಿಮ್ಮ ಮೊಬೈಲ್ ಮೂಲಕವೇ ನೀವು ಈ ಕೆಲಸವನ್ನು ಮಾಡಬಹುದು.
ಟ್ವೀಟ್ ಮೂಲಕ ಮಾಹಿತಿ ನೀಡಿದ PNB
PNBOne ಆ್ಯಪ್ ಮೂಲಕ ನಿಮ್ಮ ಎಟಿಎಂ ಡೆಬಿಟ್ ಕಾರ್ಡ್ ಆನ್ / ಆಫ್ ಮಾಡಬಹುದು ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಟ್ವೀಟ್ ಮಾಡಿದೆ. ನಿಮ್ಮ ಕಾರ್ಡ್ ಅನ್ನು ನೀವು ಬಳಸದಿದ್ದರೆ, ನೀವು ಅದನ್ನು ಆಫ್ ಮಾಡಬಹುದು. ಹೀಗೆ ಮಾಡುವುದರಿಂದ, ನಿಮ್ಮ ಬ್ಯಾಂಕ್ ಖಾತೆಯಲ್ಲಿ ಇರಿಸಲಾಗಿರುವ ನಿಮ್ಮ ಹಣ ಸುರಕ್ಷಿತವಾಗಿರಲಿದೆ.
ಇದನ್ನು ಓದಿ-ಹೈಟೆಕ್ ಆದ PNB, ಹೊಸ ವ್ಯವಸ್ಥೆಯಲ್ಲಿ ತಕ್ಷಣವೇ ಸಿಗುತ್ತೆ ಸಾಲ
PNB One App ಸಹಾಯದಿಂದ ನೀವು ತಾತ್ಕಾಲಿಕವಾಗಿ ನಿಮ್ಮ ಡೆಬಿಟ್ ಕಾರ್ಡ್ ಅನ್ನು ಲಾಕ್ ಮಾಡಬಹುದು. PNBOneನ ವಿಶೇಷತೆ ಮತ್ತು ಹೆಚ್ಚಿನ ವಿವರಗಳಿಗಾಗಿ https://tinyurl.com/y8ygdjw4 ಲಿಂಕ್ ಗೆ ಭೇಟಿ ನೀಡಿ.
PNB One ವಿಶೇಷತೆ
- ಈ ಅಪ್ಲಿಕೇಶನ್ ಮೂಲಕ ಬಳಕೆದಾರರು ಟಿಡಿಎಸ್ / ಫಾರ್ಮ್ 16 ಪ್ರಮಾಣಪತ್ರ ಜನರೇಟ್ ಮಾಡಬಹುದು.
- ಈ ಆಯ್ಕೆಯನ್ನು ಬಳಸಿಕೊಂಡು ಬಳಕೆದಾರರು ಡುಪ್ಲಿಕೇಟ್ ಚಾಲಾನ್ ತಯಾರಿಸಬಹುದು.
- ಪಿಎನ್‌ಬಿ ಒನ್‌ನಿಂದ ಲಾಗೌಟ್ ಆಗುವಾಗ ಫೀಡ್ ಬ್ಯಾಕ್ ಆಯ್ಕೆಯು ಸಹ ಗೋಚರಿಸುತ್ತದೆ.
- ಬಳಕೆದಾರನು ತನ್ನ ಡೆಬಿಟ್ ಕಾರ್ಡ್‌ಗಾಗಿ ಪಿನ್ ಅನ್ನು ಹೊಂದಿಸಬಹುದು / ಮರುಹೊಂದಿಸಬಹುದು.
- ನೀವು ಸುಕನ್ಯಾ ಸಮೃದ್ಧಿ ಖಾತೆಯನ್ನು ಪಿಎನ್‌ಬಿ ಒನ್ ಅಪ್ಲಿಕೇಶನ್‌ನೊಂದಿಗೆ ಲಿಂಕ್ ಮಾಡಬಹುದು ಮತ್ತು ಹಣವನ್ನು ವರ್ಗಾಯಿಸಬಹುದು.
ಇದನ್ನು ಓದಿ-ಸೆಕೆಂಡ್ ಹ್ಯಾಂಡ್ Car ಖರೀದಿಗೂ ಸಿಗುತ್ತೆ ಸಾಲ, ಈ 7 ಬ್ಯಾಂಕ್ ಗಳಲ್ಲಿ ಅಂತ್ಯಂತ ಕಡಿಮೆ ಬಡ್ಡಿದರ
ಈ ಆಪ್ ನಲ್ಲಿ ನೋಂದಣಿ ಹೇಗೆ ಮಾಡಬೇಕು?
- ಅಪ್ಲಿಕೇಶನ್‌ನಲ್ಲಿ New User ಮೇಲೆ ಮೊದಲು ಕ್ಲಿಕ್ ಮಾಡಿ.
- ಈಗ ನೀವು ನಿಮ್ಮ ಖಾತೆ ಸಂಖ್ಯೆ ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಬೇಕು.
- ಇದಾದ ಬಳಿಕ ನಿಮ್ಮ ಅಧಿಕೃತ ಮೊಬೈಲ್ ಸಂಖ್ಯೆಗೆ OTP ಬರಲಿದೆ.
- ಈಗ ಒಟಿಪಿ ನಮೂದಿಸಿ ಮತ್ತು ಪ್ರೊಸೀಡ್ ಕ್ಲಿಕ್ ಮಾಡಿ.
- ಈಗ ನೀವು ಖಾತೆಗೆ ಲಿಂಕ್ ಮಾಡಲಾದ ಆಧಾರ್ ಕಾರ್ಡ್ ಮತ್ತು ಪ್ಯಾನ್ ಸಂಖ್ಯೆಯನ್ನು ನಮೂದಿಸಬೇಕು.
- ಈಗ ನಿಮ್ಮ ಲಾಗಿನ್ ಐಡಿ ಮತ್ತು ಪಾಸ್ವರ್ಡ್ ಅನ್ನು ಹೊಂದಿಸಿ.
- ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ ನಂತರ, ನಿಮ್ಮ ಅಪ್ಲಿಕೇಶನ್ ನೋಂದಾಯಿಸಲ್ಪಡುತ್ತದೆ.
- ನೋಂದಣಿ ಮಾಡಿದ ತಕ್ಷಣ, ನಿಮ್ಮ ಅಧಿಕೃತ ಮೊಬೈಲ್ ಸಂಖೆಗೆ ಲಾಗಿನ್ ಗಾಗಿ ಯುಸರ್ ಐಡಿ ಸಂದೇಶ ಬರಲಿದೆ
- ಈಗ ನೀವು ಪುಟದ ಕೊನೆಯಲ್ಲಿರುವ ಲಾಗಿನ್ ಅನ್ನು ಕ್ಲಿಕ್ ಮಾಡಬೇಕು.
- ಈಗ ನಿಮ್ಮ ಯುಸರ್ ಐದಿ ನಮೂದಿಸಿ ಮತ್ತು MPIN ಅನ್ನು ಹೊಂದಿಸಿ.
ಇದನ್ನು ಓದಿ-ಮಹಿಳೆಯರಿಗಾಗಿ PNB ವತಿಯಿಂದ ವಿಶೇಷ ಸ್ಕೀಮ್, ದ್ವಿಚಕ್ರ ವಾಹನ ಖರೀದಿಗೆ ಜಬರ್ದಸ್ತ್ ಆಫರ್
ಏನಿದು PNBONE?
PNBONE ಎನ್ನುವುದು ಮೊಬೈಲ್ ಬ್ಯಾಂಕಿಂಗ್ ಅಪ್ಲಿಕೇಶನ್ ಆಗಿದ್ದು ಇದು ಎಲ್ಲಾ ಬ್ಯಾಂಕಿಂಗ್ ಸೌಲಭ್ಯಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸುತ್ತದೆ. ಈ ಅಪ್ಲಿಕೇಶನ್ ಮೂಲಕ, ನೀವು ಶಾಖೆಗೆ ಹೋಗದೆ ಮನೆಯಿಂದಲೇ ನಿಮ್ಮ ಎಲ್ಲಾ ಕೆಲಸಗಳನ್ನು ನಿಭಾಯಿಸಬಹುದು. ಇದಲ್ಲದೆ, ಇದು 24 X7 ಕಾರ್ಯನಿರ್ವಹಿಸುತ್ತದೆ. ಇದರ ಮೂಲಕ ನೀವು ಎಲ್ಲಿ ಬೇಕಾದರೂ ಮತ್ತು ಯಾವಾಗ ಬೇಕಾದರೂ ಬ್ಯಾಂಕಿಂಗ್ ವ್ಯವಹಾರ ನಡೆಸಬಹುದು.
ಇದನ್ನು ಓದಿ-Indian Economy 2020: ವರ್ಷ 2030ರಲ್ಲಿ ಭಾರತ ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ... No.1 ಯಾರು?
ಸಂಪೂರ್ಣ ಸುರಕ್ಷಿತವಾಗಿದೆ
ಸುರಕ್ಷತೆಯ ದೃಷ್ಟಿಯಿಂದ ಈ ಅಪ್ಲಿಕೇಶನ್ ಸಹ ಉತ್ತಮವಾಗಿದೆ. ಇದರಲ್ಲಿ, MPIN ಜೊತೆಗೆ ಬಯೋಮೆಟ್ರಿಕ್ ಅನ್ನು ಸಹ ಬಳಸಲಾಗುತ್ತದೆ. ಇದಲ್ಲದೆ, ಯಾವುದೇ ವಹಿವಾಟು ಮಾಡಲು ನಿಮಗೆ ಪಾಸ್‌ವರ್ಡ್ ಅಗತ್ಯವಿದೆ, ಅಂದರೆ, ಪಾಸ್‌ವರ್ಡ್ ಇಲ್ಲದೆ ಯಾವುದೇ ವಹಿವಾಟು ನಡೆಸಲು ನಿಮಗೆ ಸಾಧ್ಯವಾಗುವುದಿಲ್ಲ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.