ನವದೆಹಲಿ: ICC T20 Ranking - ಇತ್ತೀಚೆಗೆ ಬಿಡುಗಡೆಯಾದ ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ) ಯ ಟಿ 20 ಶ್ರೇಯಾಂಕ ಪಟ್ಟಿಯಲ್ಲಿ (ICC T20 Latest Rankings) ಟೀಮ್ ಇಂಡಿಯಾ ನಂಬರ್ -2 ತಂಡವಾಗಿ ಹೊರಹೊಮ್ಮಿದೆ. ಇಂಗ್ಲೆಂಡ್ ನಂ .1 ಟಿ 20 ತಂಡವಾಗಿ ಉಳಿದಿದ್ದರೆ, ಆಸ್ಟ್ರೇಲಿಯಾ ಮೂರನೇ ಸ್ಥಾನಕ್ಕೆ ಕುಸಿದಿದೆ. ಮಾರ್ಚ್ 10 ರಂದು ಬಿಡುಗಡೆಯಾದ ಶ್ರೇಯಾಂಕ ಪಟ್ಟಿಯಲ್ಲಿ ಟೀಮ್ ಇಂಡಿಯಾ ಒಂದು ಸ್ಥಾನ ಮೇಲಕ್ಕೇರಿದೆ. ನಾಲ್ಕನೇ ಸ್ಥಾನದಲ್ಲಿ ಪಾಕಿಸ್ತಾನ ಇದ್ದರೆ, ನ್ಯೂಜಿಲೆಂಡ್ ಐದನೇ ಸ್ಥಾನದಲ್ಲಿದೆ. ಇದೇ ವೇಳೆ ಟಿ 20 ಬ್ಯಾಟ್ಸ್ಮನ್ಗಳ ಶ್ರೇಯಾಂಕ (ICC Rankings) ಪಟ್ಟಿಯಲ್ಲಿ ಕೆಎಲ್ ರಾಹುಲ್ (KL Rahul) ಒಂದು ಸ್ಥಾನವನ್ನು ಕಳೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ (Virat Kohli) 6 ನೇ ಸ್ಥಾನದಲ್ಲಿದ್ದಾರೆ. ಆರನ್ ಫಿಂಚ್ ಎರಡನೇ ಸ್ಥಾನ ಮೇಲಕ್ಕೆ ಏರಿದರೆ, ಡೇವಿಡ್ ಮಲನ್ ನಂ .1 ಟಿ 20 ಬ್ಯಾಟ್ಸ್ಮನ್ ಆಗಿ ಮುಂದುವರೆದಿದ್ದಾರೆ.
⬆️ Aaron Finch climbs to No.2
⬆️ Martin Guptill breaks into top 10Gains for batsmen in the latest @MRFWorldwide ICC T20I Player Rankings after the #NZvAUS T20 series 👀
Full list: https://t.co/2ImN92Rkvr pic.twitter.com/k578Z47wzM
— ICC (@ICC) March 10, 2021
🔼 Ashton Agar in top five
🔼 Ish Sodhi, Lakshan Sandakan in top 10The latest @MRFWorldwide ICC T20I Player Rankings for bowling are here!
Full list: https://t.co/JuWITiYKI5 pic.twitter.com/hnqftCB9DZ
— ICC (@ICC) March 10, 2021
ಇದನ್ನೂ ಓದಿ- ICC ODI Ranking: No.1 ಸ್ಥಾನದಲ್ಲಿ Run Machine ಹಾಗೂ No.2 ಸ್ಥಾನದಲ್ಲಿ Hit Man ಮುಂದುವರಿಕೆ
ಈ ಪಟ್ಟಿಯಲ್ಲಿ ಇಂಗ್ಲೆಂಡ್ ರೇಟಿಂಗ್ 275 ಆಗಿದ್ದು, 6877 ಪಾಯಿಂಟ್ ಗಳನ್ನು ಗಳಿಸಿದೆ. ಭಾರತದ ರೇಟಿಂಗ್ 268 ಆಗಿದ್ದು, ಭಾರತ 10,186 ಅಂಕಗಳನ್ನು ಗಳಿಸಿದೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ T20 ಇಂಟರ್ನ್ಯಾಷನಲ್ ಸರಣಿ ಶುಕವಾರ ಆರಂಭಗೊಳ್ಳಲಿದೆ. ಈ ಸರಣಿಯ ಬಳಿಕ ಶ್ರೇಯಾಂಕ ಪಟ್ಟಿಯಲ್ಲಿ ಮತ್ತೆ ಹಲವು ಬದಲಾವಣೆಗಳು ಕಾಣಿಸಿಕೊಳ್ಳಲಿವೆ.
ಇದನ್ನೂ ಓದಿ-ಆಸ್ಟ್ರೇಲಿಯ ವಿರುದ್ಧ 4ನೇ ಪಂದ್ಯ ಗೆಲ್ಲುವ ಉತ್ಸಾಹದಲ್ಲಿ ಕೊಹ್ಲಿ ತಂಡ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.