ಬೆಂಗಳೂರು: ಅರಶಿಣಕ್ಕೆ ಆಯುರ್ವೇದದಲ್ಲಿ ಬಹಳ ಮಹತ್ವವಿದೆ. ಹಲವು ರೋಗಗಳಿಗೆ ಅರಸಿಣ ಗುಣಕಾರಿ. ಈ ಅರಸಿಣ ಪುಡಿಯನ್ನು (Termeric) ಲಿಂಬೆ ರಸ, ಜೇನು ತುಪ್ಪ ಜೊತೆ ಸೇರಿಸಿ ತಿಂದರೆ, ಅದು ಹಲವು ರೋಗಗಳನ್ನು ತಡೆಗಟ್ಟುವ ಶಕ್ತಿ ಕಲ್ಪಿಸುತ್ತದೆ.
ನೀವು ಮಾಡಬೇಕಾದ್ದು ಇಷ್ಟೇ..!
ಅರ್ಧ ಚಮಚ ಅರಸಿಣ ಪುಡಿ, ಅರ್ಧ ಲಿಂಬೆ ಹಣ್ಣು (Lemon) ಮತ್ತು 2 ರಿಂದ ಮೂರು ಚಮಚ ಜೇನು ತುಪ್ಪ ಹಾಗೂ ಉಗುರುಬೆಚ್ಚ ನೀರು ಇಟ್ಟುಕೊಳ್ಳಿ. ಮೊದಲು ಕಟೋರಿಯಲ್ಲಿ ಸ್ವಲ್ಪ ನೀರು ತಗೊಳ್ಳಿ. ಅದಕ್ಕೆ ಅರ್ಧ ಲಿಂಬೆಯ ರಸ ಹಿಂಡಿ. ಸ್ವಲ್ಪ ಅರಸಿಣ ಪುಡಿ (Termeric) ಸೇರಿಸಿ. ನಂತರ ಎರಡರಿಂದ ಮೂರು ಚಮಚ ಶುದ್ದ ಜೇನು ತುಪ್ಪ ಸೇರಿಸಿ ಸಣ್ಣ ಉಂಡೆ ಮಾಡಿ. ಬೆಳಗ್ಗಿನ ಉಪಹಾರಕ್ಕಿಂತ ಅರ್ಧ ಗಂಟೆ ಮೊದಲು ಸೇವನೆ ಮಾಡಿ. ಇದು ನಿಮ್ಮ ಆರೋಗ್ಯಕ್ಕೆ (Health) ಸಾಕಷ್ಟು ಲಾಭ ತರುತ್ತದೆ.
ಇದನ್ನೂ ಓದಿ : Desi Ghee Health Benefits - ಆರೋಗ್ಯದ ಜೊತೆಗೆ ಕೂದಲಿಗೂ ಕೂಡ ಲಾಭಕಾರಿ ದೇಸಿ ತುಪ್ಪ
1. ಕ್ಯಾನ್ಸರ್ ಸೆಲ್ ಗಳನ್ನು ಮೂಲದಿಂದಲೇ ಕೊಲ್ಲುವ ಗುಣ ಇದೆ :
ಅರಸಿಣದಲ್ಲಿ ಕ್ಯಾನ್ಸರ್ (Cancer) ಸೆಲ್ ಗಳನ್ನು ಮೂಲದಿಂದಲೇ ಕೊಲ್ಲುವ ಗುಣ ಇದೆ. ಸ್ತನ ಕ್ಯಾನ್ಸರ್, ಕ್ಲೋನ್ ಕ್ಯಾನ್ಸರ್, ಹೊಟ್ಟೆಯ ಕ್ಯಾನ್ಸರ್ ತಡೆಗಟ್ಟುವಲ್ಲಿ ಇದು ಸಹಕಾರಿ. ಕ್ಯಾನ್ಸರ್ ವಿರುದ್ದ ಅರಸಿಣ ಹೋರಾಡುತ್ತದೆ ಅನ್ನೋದು ತಜ್ಞರ ಸಂಶೋಧನೆಗಳಿಂದ ಸಾಬೀತಾಗಿದೆ.
2. ಲಿವರ್ ಗೆ ತುಂಬಾ ಒಳ್ಳೆಯದು:
ನಮ್ಮ ದೇಹದಲ್ಲಿ ಸೃಷ್ಟಿಯಾಗುವ ಟಾಕ್ಸಿಕ್ ಪದಾರ್ಥಗಳು ಲಿವರ್ ಗೆ ಅಪಾಯ ತಂದೊಡ್ಡುತ್ತವೆ. ಆದರೆ, ಅರಸಿಣ ಪುಡಿ, ಲಿಂಬೆ ರಸ ಮತ್ತು ಜೇನು ತುಪ್ಪ (Honey) ಸೇವನೆಯಿಂದ ಲಿವರ್ ಟಾಕ್ಸಿಕ್ ಪರಿಣಾಮಗಳಿಂದ ಸುರಕ್ಷಿತವಾಗಿರುತ್ತದೆ.
3. ಬೊಜ್ಜು ಕರಗಿಸಲು ಪರಿಣಾಮಕಾರಿ :
ಅರಸಿನ ಪುಡಿ, ಲಿಂಬೆ ಮತ್ತು ಜೇನುತುಪ್ಪ ದಿನ ನಿತ್ಯ ಸೇವಿಸಿದರೆ ಬೊಜ್ಜು (Fat) ಕರಗುತ್ತದೆ. ಹಳದಿಯಲ್ಲಿ ಅಂಡಿ ಇನ್ ಫ್ಲೆಮೇಟರಿ ಗುಣವಿದೆ. ಇದು ದೇಹದಲ್ಲಿ ಬೊಜ್ಜು ಸಂಗ್ರಹವನ್ನು ತಡೆಯುತ್ತದೆ.
ಇದನ್ನೂ ಓದಿ : Helth Tips: ನಿತ್ಯ ಬೆಳಿಗ್ಗೆ ತಾಮ್ರದ ಪಾತ್ರೆಯಲ್ಲಿರುವ ನೀರು ಸೇವಿಸಿ, ಉತ್ತಮ ಆರೋಗ್ಯ ನಿಮ್ಮದಾಗಿಸಿ
4. ತ್ವಚೆಗೂ ಹಳದಿ ಉತ್ತಮ:
ಹಳದಿ ನಮ್ಮ ತ್ವಚೆಗೆ ಕಾಂತಿ (Glowing skin) ತರುತ್ತದೆ. ಡಯಾಬಿಟೀಸ್ ಇರುವವರು ಹಳದಿ ತಿಂದರೆ ಒಳ್ಳೆಯದು. ಇದು ಡಯಾಬಿಟಿಸ್ (Diabetes)ನಿಯಂತ್ರಣದಲ್ಲಿಡುತ್ತದೆ.
5. ಕೀಲು ನೋವು ಶಮನ :
ಮಲೇಷ್ಯಾದಲ್ಲಿ ನಡೆದ ಒಂದು ಸಂಶೋಧನೆ ಪ್ರಕಾರ ಅರಸಿಣ ಸೇವನೆಯಿಂದ ಕೀಲು ನೋವು ದೂರವಾಗುತ್ತದೆ. ಹಳದಿ ನಮ್ಮ ಮೆದುಳಿನ (Brain) ಬೆಳವಣಿಗೆಯನ್ನೂ ಹೆಚ್ಚಿಸುತ್ತದೆ.
6. ಹೃದಯದ ದೋಸ್ತ್:
ಅರಸಿಣ, ಲಿಂಬೆ ರಸ ಮತ್ತು ಜೇನು ತುಪ್ಪ ತಿಂದರೆ ಅದು ರಕ್ತನಾಳದಲ್ಲಿ ಉಂಟಾಗುವ ಬ್ಲಾಕೇಜ್ ಕಡಿಮೆ ಮಾಡುತ್ತದೆಯಂತೆ. ಹಳದಿ ಶರೀರದಲ್ಲಿ ರೋಗ ನಿರೋಧಕ ಶಕ್ತಿ (Immunity) ಹೆಚ್ಚಿಸುತ್ತದೆ.
ಇದನ್ನೂ ಓದಿ : Curd for Health: ಈ 7 ಕಾರಣಗಳಿಗೆ ಬೇಸಿಗೆಯಲ್ಲಿ ಪುರುಷರು ಮೊಸರು ತಿನ್ನಬೇಕು..!
ಅರಸಿನ, ಲಿಂಬೆ ರಸ ಮತ್ತು ಜೇನು ತುಪ್ಪ ಸೇವನೆಯಿಂದ ಈ ಮೇಲಿನ ಪರಿಣಾಮಗಳನ್ನು ನಿರೀಕ್ಷಿಸಬಹುದು ಎಂದು ಆಹಾರ ತಜ್ಞರು ಮತ್ತು ಆಯುರ್ವೇದ ಆರೋಗ್ಯ ತಜ್ಞರು ಹೇಳುತ್ತಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.