Alcohol ಸೇವನೆಯ ಬಳಿಕ ಜನ English ಯಾಕೆ ಮಾತನಾಡುತ್ತಾರೆ? ಬಹಿರಂಗಗೊಂಡ ಸತ್ಯ ಇದು

Alcohol Side Effects - ಆಲ್ಕೊಹಾಲ್ ಸೇವಿಸಿದ ನಂತರ, ಅನೇಕ ಜನರ ವ್ಯಕ್ತಿತ್ವವು ಸಂಪೂರ್ಣ ಬದಲಾಗುತ್ತದೆ. ಇದ್ದಕ್ಕಿದ್ದಂತೆ ಅವರು ಇಂಗ್ಲಿಷ್ನಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ, ನೃತ್ಯ ಮತ್ತು ಹಾಡು ಹೇಳಲು ಆರಂಭಿಸುತ್ತಾರೆ. ಈ ವರ್ತನೆಗಳ ಹಿಂದಿನ ಮಾನಸಿಕ ಕಾರಣಗಳು ಇದೀಗ ಬಹಿರಂಗಗೊಂಡಿವೆ.

Written by - Nitin Tabib | Last Updated : Mar 16, 2021, 08:55 PM IST
  • ಸಾರಾಯಿ ಕುಡಿದ ಬಳಿಕ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ.
  • ಬೇ ಧಡಕ್ ಇಂಗ್ಲಿಷ್ ಮಾತನಾಡಲು ಆರಂಭಿಸುತ್ತಾರೆ.
  • ರಿಸರ್ಚ್ ನಲ್ಲಿ ಈ ರೀತಿಯ ಪರ್ಸ್ನಾಲಿಟಿ ಕುರಿತು ಮಹತ್ವದ ಅಂಶ ಬಹಿರಂಗ.
Alcohol ಸೇವನೆಯ ಬಳಿಕ ಜನ English ಯಾಕೆ ಮಾತನಾಡುತ್ತಾರೆ? ಬಹಿರಂಗಗೊಂಡ ಸತ್ಯ ಇದು title=
Alcohol Side Effects (File Photo_

ನವದೆಹಲಿ:  Alcohol Side Effects - ಕೆಲವು ಜನರು ಆಲ್ಕೋಹಾಲ್ ಸೇವಿಸಿದ ನಂತರ ಇದ್ದಕ್ಕಿದ್ದಂತೆ ಇಂಗ್ಲಿಷ್ನಲ್ಲಿ ಮಾತನಾಡಲು ಆರಂಭಿಸುದನ್ನು ನೀವು ಹಲವು ಪಾರ್ಟಿಗಳಲ್ಲಿ ಗಮನಿಸಿರಬಹುದು. ಈ ಅವಧಿಯಲ್ಲಿ ಅವರು ಸಂಪೂರ್ಣ ವಿಶ್ವಾಸಕ್ಕೆ ಬರುತ್ತಾರೆ ಮತ್ತು ಇಂಗ್ಲಿಷ್ನಲ್ಲಿ ನಿರ್ಭಯವಾಗಿ ಮಾತನಾಡಲು ಪ್ರಾರಂಭಿಸುತ್ತಾರೆ. ಅದರ ನಂತರ ಅವರು ಇಂಗ್ಲಿಷ್‌ನಲ್ಲೂ ಪ್ರತಿ ಪ್ರಶ್ನೆಗೆ ಉತ್ತರಿಸಲು ಇಷ್ಟಪಡುತ್ತಾರೆ. ಇದು ಏಕೆ ಸಂಭವಿಸುತ್ತದೆ ಎಂದು ನೀವು ಎಂದಾದರೂ ಯೋಚಿಸಿದ್ದೀರಾ? ವಾಸ್ತವದಲ್ಲಿ ಜನರ ಈ ಕ್ರಿಯೆಯ ಹಿಂದೆ ವೈಜ್ಞಾನಿಕ ಕಾರಣವಿದೆ. ಜನರು ಈ ಪ್ರಶ್ನೆಗೆ ಉತ್ತರವನ್ನು ಸಂಶೋಧಕರು ಕಂಡು ಹಿಡಿದಿದ್ದಾರೆ.

ಮತ್ತಿನಲ್ಲಿ ಕಾನ್ಫಿಡೆನ್ಸ್ ಹೆಚ್ಚಾಗುತ್ತದೆ
ಸೈನ್ಸ್ ಮ್ಯಾಗಜೀನ್ (Science Magazine) 'ಜರ್ನಲ್ ಆಫ್ ಸೈಕೋಫಾರ್ಮಾಕಾಲಜಿ' (Journal Of Psychopharmacology) ಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, 1-2 ಪೆಗ್ (Peg)  ಆಲ್ಕೋಹಾಲ್ (Alcohol) ಸೇವಿಸಿದ ನಂತರ, ಮನಸಿನಲ್ಲಿರುವ ಭಯ ಹಾಗೂ ಹಿಂಜರಿಕೆ (Nervousness) ಮುಕ್ತಾಯವಾಗುತ್ತದೆ ಮತ್ತು ಅವರಲ್ಲಿನ ಕಾನ್ಫಿಡೆನ್ಸ್ ಹೆಚ್ಚಾಗಿ  ಇತರ ಭಾಷೆಯಲ್ಲಿ ಮಾತನಾಡಲು ಪ್ರಾರಂಭಿಸುತ್ತಾರೆ, ಇದೆ ವ್ಯಕ್ತಿಗಳು ಸಾಮಾನ್ಯ ಸ್ಥಿತಿಯಲ್ಲಿರುವಾಗ ಇತರ ಭಾಷೆಗಳಲ್ಲಿ ಮಾತನಾಡಲು ಹಿಂಜರಿಯುತ್ತಾರೆ.  ಭಾರತದ ಬಗ್ಗೆ ಹೇಳುವುದಾದರೆ ಮದ್ಯ ಸೇವಿಸಿದ ನಂತರ, ಅನೇಕ ಜನರು ಇಂಗ್ಲಿಷ್ನಲ್ಲಿ (English) ಮಾತನಾಡಲು ಪ್ರಾರಂಭಿಸುತ್ತಾರೆ.

ಪರ್ಸ್ನ್ಯಾಲಿಟಿಯಲ್ಲಿ ಬದಲಾವಣೆ ಕಂಡುಬರುತ್ತದೆ
ಈ ಸಂಶೋಧನೆಯ ಪ್ರಕಾರ, ಸರಾಯಿ ಸೇವಿಸಿದ ಬಳಿಕ ಜನರ ಸ್ಮರಣಶಕ್ತಿ ಹಾಗೂ ಏಕಾಗ್ರತೆ ಪ್ರಭಾವಕ್ಕೆ (Concentration Power) ಒಳಗಾಗುತ್ತದೆ.  ಈ ಅವಧಿಯಲ್ಲಿ ಹಲವರ ಪರ್ಸ್ನಾಲಿಟಿ (Personality) ಬದಲಾಗುತ್ತದೆ ಹಾಗೂ ಅವರಲ್ಲಿ ಕಾನ್ಫಿಡೆನ್ಸ್ ಬೂಸ್ಟ್ ಆಗುತ್ತದೆ. ಈ ಅವಧಿಯಲ್ಲಿ ತಾವು ಸಾಮಾನ್ಯವಾಗಿ ಮಾತನಾಡಲು ಅಥವಾ ಹೇಳಲು ಹಿಂಜರಿಯುವ ಸಂಗತಿಗಳತ್ತ ಅವರ ಏಕಾಗ್ರತೆ ಹೆಚ್ಚಾಗುತ್ತದೆ. 

ಇದನ್ನೂ ಓದಿ-ಮದ್ಯ ಸಿಗಲಿಲ್ಲ ಎಂದು Sanitizer ಸೇವಿಸಿದ ಭೂಪರು, 7 ಸಾವು, ಕೊಮಾ ಸ್ಥಿತಿಗೆ ಜಾರಿದ ಇಬ್ಬರು

ಕೆಲವರಿಗೆ ಡಾನ್ಸ್ ಮಾಡಲು ಇಷ್ಟವಾದರೆ ಕೆಲವರಿಗೆ ಹಾಡು ಹೇಳಲು ಇಷ್ಟವಾಗುತ್ತದೆ.
ಬೇರೆ ಭಾಷೆ ಮಾತನಾಡುವುದರ ಹೊರತಾಗಿ, ಜನರು ಮದ್ಯ ಸೇವಿಸಿದ ನಂತರ ಇತರ ಕೆಲಸಗಳನ್ನು ಮಾಡಲು ಪ್ರಾರಂಭಿಸುತ್ತಾರೆ. ಸಾಮಾನ್ಯ ಸಮಯದಲ್ಲಿ ನೃತ್ಯ ಮಾಡಲು ಅಥವಾ ಹಾಡಲು ಹಿಂಜರಿಯುವ ಜನರು, ಕುಡಿದ ತಕ್ಷಣ ಅವರಲ್ಲಿನ ಕಾನ್ಫಿಡೆನ್ಸ್ ಬೂಸ್ಟ್ ಆಗಿ ತಾವು ಮಾಡಬಯಸುವ ಕೆಲಸ ಮಾಡಿ ಸಂತೋಷಪಡಲು ಇಷ್ಟಪಡುತ್ತಾರೆ. ಇಂತಹ ಜನರು ಲೈಫ್ ಅನ್ನು ತುಂಬಾ ಜಾಲಿಯಾಗಿ ಕಳೆಯಲು ಇಷ್ಟಪಡುತ್ತಾರೆ.

ಇದನ್ನೂ ಓದಿ-OMG: 10 ಬಾಟಲ್ Beer ಕುಡಿದು ಮತ್ತಿನಲ್ಲಿ 18 ಗಂಟೆ ಮಲಗಿದವನ ಗತಿ ಏನಾಗಿದೆ ಗೊತ್ತಾ?

ಹೀಗಾಗಿ ಇನ್ಮುಂದೆ ಯಾರೇ ನಿಮ್ಮ ಮುಂದೆ ಸಾರಾಯಿ ಸೇವಿಸಿ ಇಂಗ್ಲಿಷ್ ಮಾತನಾಡಲು ಆರಂಭಿಸಿದರೆ ಅವರ ಕುರಿತು ತಮಾಷೆ ಅಥವಾ ಗೇಲಿ ಮಾಡದೆ, ಅವರು ಮಾತುತ್ತಿರುವ ಚಟುವಟಿಕೆಯ ಹಿಂದಿನ ಮಾನಸಿಕ ಕಾರಣವನ್ನು (Psychological Reason) ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ.

ಇದನ್ನೂ ಓದಿ-40 ದಿನಗಳ ಬಳಿಕ ಯದ್ವಾತದ್ವಾ ಕುಡಿದು 'ಎಣ್ಣೆ ಏಟಿನಲ್ಲಿ' ಈತ ಸ್ನೇಹಿತನಿಗೆ ಮಾಡಿದ್ದೇನು ಗೊತ್ತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News