Golgappa Dieting : ಒಂದು ಪ್ಲೇ ಟ್ ಪಾನಿಪೂರಿಯಿಂದಲೂ Weight Loss ಸಾಧ್ಯ

ಮಸಾಲೆಯುಕ್ತ ಆಹಾರವನ್ನು (Food) ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಗೋಲ್ಗಪ್ಪ ಅಥವ ಪಾನಿಪುರಿ ಅಂದರೆ ಎಲ್ಲಾ ವಯಸ್ಸಿನವರವರ ಬಾಯಿಯಲ್ಲೂ ನೀರು ಬರುತ್ತದೆ.  

Written by - Ranjitha R K | Last Updated : Mar 17, 2021, 02:38 PM IST
  • ಒಂದು ಪ್ಲೇ ಟ್ ಪಾನಿಪೂರಿ ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ
  • ಗೋಲ್ಗಪ್ಪಾ ಡಯಟಿಂಗ್ ಇತ್ತೀಚಿನ ದಿನಗಳಲ್ಲಿ trending ನಲ್ಲಿದೆ.
  • 6 ಗೋ ಲ್‌ಗಪ್ಪಾಗಳ 1 ಪ್ಲೇಟ್‌ ನಿಂದ ದೇಹ ತೂಕ ಕಡಿಮೆ ಮಾಡ ಬಹುದು
 Golgappa Dieting : ಒಂದು ಪ್ಲೇ ಟ್ ಪಾನಿಪೂರಿಯಿಂದಲೂ  Weight Loss  ಸಾಧ್ಯ title=
ಒಂದು ಪ್ಲೇ ಟ್ ಪಾನಿಪೂರಿ ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ (file photo)

ಬೆಂಗಳೂರು : ದೇಹ ತೂಕ ಇಳಿಸುವುದೆಂದರೆ (Weight loss) ಬಹಳ ಕಷ್ಟದ ಕೆಲಸ. ಇದಕ್ಕಾಗಿ ಜನ ತಮ್ಮ ಇಷ್ಟದ ತಿಂಡಿ ತಿನಿಸುಗಳನ್ನು  ದೂರ ಮಾಡುತ್ತಾರೆ. ಬಾಯಿ ಕಟ್ಟಿಕೊಂಡು ಬಹಳಷ್ಟು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ.  ರುಚಿ ರಹಿತವಾದ ಸರಳ ಆಹಾರವನ್ನು ಸೇವಿಸಲು ಶುರು ಮಾಡುತ್ತಾರೆ. ಇನ್ನು ಕೆಲವರು ತೂಕ ಇಳಿಸಿಕೊಳ್ಳಲು ಡಯಟಿಂಗ್ (Dieting) ಮತ್ತು ಜಿಮ್ ನ ಮೊರೆ ಹೋಗುತ್ತಾರೆ. ಆದರೆ ನಿಮಗೆ ಗೊತ್ತಾ ? ಒಂದು ಪ್ಲೇ ಟ್ ಪಾನಿಪೂರಿ ದೇಹ ತೂಕ ಇಳಿಸಲು ಸಹಾಯ ಮಾಡುತ್ತದೆ ಅನ್ನೋದು ..    

ಏನಿದು Golgappa Dieting :

ಮಸಾಲೆಯುಕ್ತ ಆಹಾರವನ್ನು (Food) ಭಾರತೀಯರು ತುಂಬಾ ಇಷ್ಟಪಡುತ್ತಾರೆ. ಗೋಲ್ಗಪ್ಪ ಅಥವ ಪಾನಿಪುರಿ ಅಂದರೆ ಎಲ್ಲಾ ವಯಸ್ಸಿನವರವರ ಬಾಯಿಯಲ್ಲೂ ನೀರು ಬರುತ್ತದೆ.  ಪಾನಿಪುರಿ (Panipuri) ಬಾಯಿ ರುಚಿ ಮಾತ್ರ ಅಲ್ಲ ಕಡಿಮೆ ಬೆಲೆಗೂ ಸಿಗುತ್ತದೆ.  ಇದನ್ನು ದೇಶದ ವಿವಿಧ ಭಾಗಗಳಲ್ಲಿ ವಿವಿಧ ಹೆಸರುಗಳಿಂದ ಕರೆಯಲಾಗುತ್ತದೆ. ಕೆಲವರು  ಆರೋಗ್ಯದ ದೃಷ್ಟಿಯಿಂದ  ಗೋಲ್ಗಪ್ಪ ತಿನ್ನುವುದನ್ನೆ ನಿಲ್ಲಿಸುತ್ತಾರೆ.  ಆದರೆ ದೇಹ ತೂಕ ಇಳಿಸಲು (Weight loss) ಮಾಡುವ  ಗೋಲ್ಗಪ್ಪಾ ಡಯಟಿಂಗ್ ಇತ್ತೀಚಿನ ದಿನಗಳಲ್ಲಿ trending ನಲ್ಲಿದೆ. 

ಇದನ್ನೂ ಓದಿ : Health Tips: ಹಲವು ರೋಗಗಳಿಗೆ ರಾಮಬಾಣ ಈ ಪೇಯ, ತಯಾರಿಸುವ ವಿಧಾನ ಇಲ್ಲಿದೆ

ಹೆಲ್ತ್ ಮೆನಿಯಾದ ಮುಖ್ಯ ಆಹಾರ ತಜ್ಞ ಮೇಘ ಮುಖಿಜಾ ಪ್ರಕಾರ, ಮನೆಯಲ್ಲಿಯೇ ತಯಾರಿಸಿದ್ ಗೋಲ್ಗಪ್ಪ ಮತ್ತು ಅದರ ನೀರು  ತೂಕ ಇಳಿಸಲು ಸಹಾಯ ಮಾಡುತ್ತದೆ. ಗೋಲ್ಗಪ್ಪದಲ್ಲಿ ಕೇವಲ 36 ಕ್ಯಾಲೊರಿಗಳಿವೆ. 6 ಗೊಲ್ಗಪ್ಪಗಳ 1 ತಟ್ಟೆಯಲ್ಲಿ 216 ಕ್ಯಾಲೊರಿಗಳಿವೆ.

 6 ಗೋ ಲ್‌ಗಪ್ಪಾಗಳ  1 ಪ್ಲೇಟ್‌ ನಿಂದ ದೇಹ ತೂಕ ಕಡಿಮೆ ಮಾಡ ಬಹುದು : 
 ಗೋಲ್ಗಪ್ಪನ ಮಸಾಲೆಯುಕ್ತ ನೀರನ್ನು (water) ಕುಡಿದ ನಂತರ, ಗಂಟೆಗಳವರೆಗೆ ಹಸಿವು ಇರುವುದಿಲ್ಲ. ಆದರೆ ಇದಕ್ಕಾಗಿ ನೀವು ಗೋಲ್ಗಪ್ಪ ಮತ್ತು ಅದರ ನೀರು ಎರಡನ್ನೂ ಮನೆಯಲ್ಲಿ ತಯಾರಿಸಬೇಕಾಗುತ್ತದೆ. ಮನೆಯಲ್ಲಿ ತಯಾರಿಸಿದ ಗೋಲ್ಗಪ್ಪಗಳನ್ನು ಕಡಿಮೆ ಎಣ್ಣೆಯಲ್ಲಿ (oil) ಕರಿಯಲಾಗುತ್ತದೆ. ಹಾಗಾಗಿ ಅದು ಆರೋಗ್ಯಕ್ಕೆ ಹಾನಿಯನ್ನುಂಟು ಮಾಡುವುದಿಲ್ಲ. ಇನ್ನು ನೀವು ದೇಹ ತೂಕ ಕಡಿಮೆ ಮಾಡಲು ಬಯಸುವುದಾದ್ರೆ  ರವೆ ಬದಲಿಗೆ, ಗೋಧಿ ಹಿಟ್ಟಿನಿಂದ ಪೂರಿ ತಯಾರಿಸಿಕೊಳ್ಳುವುದು ಉತ್ತಮ. 

ಜೀರ್ಣಕ್ರಿಯೆ ಉತ್ತಮವಾಗಿರುತ್ತದೆ
ಪಾನಿಪುರಿಗೆ ಬಳಸುವ  ಪಾನಿಯನ್ನು ಮನೆಯಲ್ಲಿಯೇ ತಯಾರಿಸಿದರೆ  ಜೀರ್ಣಕ್ರಿಯೆ (Digestion) ಉತ್ತಮವಾಗಿರುತ್ತದೆ. ಜೀರಿಗೆ, ಜಲ್ ಜೀರಾ,  ಪುದೀನ, ಒಮಕಾಳು , ಸೊಂಫು, ಹಿಂಗು, ಇತ್ಯಾದಿಗಳನ್ನು ಸೇರಿಸಿ ಪಾನಿಪುರಿಗೆ ನೀರನ್ನು ತಯಾರಿಸಲಾಗುತ್ತದೆ. ಈ ನೀರಿನಲ್ಲಿ ಬಳಸುವ ಪ್ರತಿಯೊಂದು ವಸ್ತು ಕೂಡಾ ತೂಕ ನಷ್ಟಕ್ಕೆ ಕಾರಣವಾಗುತ್ತವೆ ಮತ್ತು ಜೀರ್ಣಕ್ರಿಯೆಯನ್ನು ಉತ್ತಮವಾಗಿದುತ್ತದೆ .

ಇದನ್ನೂ ಓದಿ : Health Tips : ಈ ಕಾರಣಗಳಿಗಾಗಿ ಪುರುಷರು ಹಾಲು ಮತ್ತು ಖರ್ಜೂರ ಸೇವಿಸಬೇಕು

ಸಿಹಿ ಚಟ್ನಿಯಿಂದ  ದೂರವಿರಲೇ ಬೇಕು : 
 Golgappa Dieting ಅಂದ ಕೂಡಲೇ ಅದರಲ್ಲಿ ಸಿಹಿ ಚಟ್ನಿ(Sweet chutney)  ಕೂಡಾ ಬಳಸುತ್ತಾರೆ. ಆದರೆ ನೆನಪಿರಲಿ,  ತೂಕ ಇಳಿಸಿಕೊಳ್ಳಲು ಬಯಸುವವರು ಯಾವ ಕಾರಣಕ್ಕೂ ಪಾನಿಪುರಿ ಜೊತೆ ಸಿಹಿ ಚಟ್ನಿ ಸೇರಿಸಲೇ ಬಾರದು. ಅಲ್ಲದೆ, ಆಲೂಗಡ್ಡೆ ಅಥವಾ ಬಟಾಣಿ ಬದಲಿಗೆ, ಮೊಳಕೆ ಕಾಳು  ಕಡಲೆ, ಬೇಳೆಯನ್ನು  ಬಳಸಿದರೆ ಉತ್ತಮ.  

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News