ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ

ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಧು ಹುಲಿಸ್ಯಾರ ಎಂಬ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಪಹರಿಸಿ,ರಾಮದುರ್ಗದಲ್ಲಿ ಅತ್ಯಾಚಾರ ಎಸಗಿ,ಆ್ಯಸಿಡ್ ಹಾಕಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ದಲಿತ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿ ಸರಕಾರಕ್ಕೆ ಮನವಿ ಸಲ್ಲಿಸಿದವು.

Last Updated : Apr 3, 2021, 06:07 PM IST
  • ನೊಂದ ಕುಟುಂಬಕ್ಕೆ ಸರಕಾರ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು.
  • ಮಹಿಳೆ,ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಜನಾಂಗದವರ ಮೇಲೆ ನಿರಂತರ ದಾಳಿ,ದಬ್ಬಾಳಿಕೆಗಳು ಹೆಚ್ಚುತ್ತಿದ್ದು ಇವುಗಳನ್ನು ತಡೆಯಲು ಸೂಕ್ತ ಕಾನೂನು ಕ್ರಮವಹಿಸಬೇಕು.
ದಲಿತ ಅಪ್ರಾಪ್ತ ವಿದ್ಯಾರ್ಥಿನಿ ಅತ್ಯಾಚಾರ ಕೊಲೆ ಖಂಡಿಸಿ ಪ್ರತಿಭಟನೆ  title=

ಗಜೇಂದ್ರಗಡ: ಗದಗ ಜಿಲ್ಲೆಯ ನರಗುಂದ ಪಟ್ಟಣದ ಮಧು ಹುಲಿಸ್ಯಾರ ಎಂಬ ದಲಿತ ಅಪ್ರಾಪ್ತ ವಿದ್ಯಾರ್ಥಿನಿಯನ್ನು ಅಪಹರಿಸಿ,ರಾಮದುರ್ಗದಲ್ಲಿ ಅತ್ಯಾಚಾರ ಎಸಗಿ,ಆ್ಯಸಿಡ್ ಹಾಕಿ ಕೊಲೆಗೈದ ಆರೋಪಿಗಳಿಗೆ ಗಲ್ಲುಶಿಕ್ಷೆ ವಿಧಿಸಬೇಕೆಂದು ದಲಿತ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟಿಸಿ ಸರಕಾರಕ್ಕೆ ಮನವಿ ಸಲ್ಲಿಸಿದವು.

ಇದನ್ನೂ ಓದಿ: ಮೋದಿ ಪ್ರಧಾನಿಯಾದ ಬಳಿಕ ದಲಿತ ಯುವತಿಯರ ಅತ್ಯಾಚಾರ-ಸಾವು ಹೆಚ್ಚಾಗಿದೆ: ಖರ್ಗೆ

ಬಸವೇಶ್ವರ ವೃತ್ತದಿಂದ ಆರಂಭವಾದ ಮೆರವಣಿಗೆ,ಕಾಲಕಾಲೇಶ್ವರ ವೃತ್ತದಲ್ಲಿ ಕೆಲವೊತ್ತು ಮಾನವ ಸರಪಳಿ ರಚಿಸಿ ರಸ್ತೆ ತಡೆ ಮಾಡಲಾಯಿತು.ಅಲ್ಲಿಂದ ತಹಶೀಲ್ದಾರ ಕಛೇರಿಗೆ ತೆರಳಿ ಅಲ್ಲಿ ಸಭೆ ನಡೆಸಲಾಯಿತು.

ಇದನ್ನೂ ಓದಿ: ಹಾಥರಸ್ ಪ್ರಕರಣ: ಪ್ರಕರಣದ ತನಿಖೆ ಮೇಲೆ ಅಲಹಾಬಾದ್ ಹೈಕೋರ್ಟ್ ನಿಗಾ-ಸುಪ್ರೀಂ

ಸಭೆಯಲ್ಲಿ ದಲಿತ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರು ಮಾತನಾಡಿ,ಅತ್ಯಾಚಾರ ಮಾಡಿದವರನ್ನು ಗಲ್ಲುಶಿಕ್ಷೆಯ ಕಠಿಣಕ್ರಮಕ್ಕೆ ಒಳಪಡಿಸಬೇಕು.ನೊಂದ ಕುಟುಂಬಕ್ಕೆ ಸರಕಾರ ಇಪ್ಪತ್ತೈದು ಲಕ್ಷ ರೂಪಾಯಿ ಪರಿಹಾರ ಒದಗಿಸಬೇಕು.ಮಹಿಳೆ,ದಲಿತ,ಹಿಂದುಳಿದ,ಅಲ್ಪಸಂಖ್ಯಾತ ಜನಾಂಗದವರ ಮೇಲೆ ನಿರಂತರ ದಾಳಿ,ದಬ್ಬಾಳಿಕೆಗಳು ಹೆಚ್ಚುತ್ತಿದ್ದು ಇವುಗಳನ್ನು ತಡೆಯಲು ಸೂಕ್ತ ಕಾನೂನು ಕ್ರಮವಹಿಸಬೇಕು.ಶೋಷಿತ ಜನಾಂಗದ ಪರವಾಗಿ ಇರುವ ಸಂವಿಧಾನಬದ್ಧ ಕಾಯ್ದೆಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕೆಂದು ಆಗ್ರಹಿಸಿದರು.ತಹಶೀಲ್ದಾರ ಎ.ಬಿ.ಕಲಘಟಗಿ ಸ್ಥಳಕ್ಕೆ ಬಂದು ಮನವಿಪತ್ರ ಸ್ವೀಕರಿಸಿದರು.

ಇದನ್ನೂ ಓದಿ: ಗ್ಯಾಂಗ್ ರೇಪ್ ಆರೋಪಿ ಮನೋಜ್ ಗೆ 20 ವರ್ಷ ಜೈಲು

ಹೋರಾಟದ ನೇತೃತ್ವವನ್ನು ಕೆ.ಡಿ.ಎಸ್.ಎಸ್.ಸಂಚಾಲಕ ಶರಣಪ್ಪ ಪೂಜಾರ,ಪ್ರಕಾಶ ಹೊಸಳ್ಳಿ,ಮಾರುತಿ ಹಾದಿಮನಿ,
ಈರಪ್ಪ ತೆಗ್ಗಿನಮನಿ,ಉಮೇಶ ರಾಠೋಡ,ರಜಾಕ್ ಡಾಲಾಯತ,ಅಲ್ಲಾಭಕ್ಷಿ ಮುಚ್ಚಾವಲಿ,ಬಸವರಾಜ ಬಂಕದ,ಕುಮಾರ ಹಿರೇಮಠ,ಷಣ್ಮುಖ ಮಾದರ, ರಮೇಶ ಮಡಿವಾಳರ,ಸಂಗಪ್ಪ ಹುಲ್ಲೂರ,ಬಾಬು ಗೋಡೇಕಾರ,ಆನಂದ ಸವಣೂರ,ತಿರುಪತಿ ಕುರಿ,ರಾಘು ಮೊರಬ,ಕವಿತಾ ಹೇಮಟ್ಟಿ,ಭಾನುಶ್ರೀ ಮಾದರ,ನಾಗರತ್ನ ಚಳಗೇರಿ,ಹಸ್ಮತ್ಬಾನು ಮಾರನಬಸರಿ,ಜಯಲಕ್ಷ್ಮಿ ಗುರಿಕಾರ,ಪ್ರಿಯಾಂಕ ಗೋದಳೆ,ಮಾರುತಿ ಹಾದಿಮನಿ,ಬಾಲಪ್ಪ ಬುರಡಿ,ಪ್ರವೀಣ ಬಡಿಗೇರ ಮತ್ತೀತರರು ವಹಿಸಿದ್ದರು.

-ರವೀಂದ್ರ ಹೊನವಾಡ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
   

 

Trending News