ಬೆಂಗಳೂರು: ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳುವಾಗ ಹರಿದ ನೋಟು ಸಿಕ್ಕರೆ ಏನು ಮಾಡಬೇಕು? ಬಹುಶಃ ಹೆಚ್ಚಿನ ಜನರಿಗೆ ಈ ಪ್ರಶ್ನೆಗೆ ಉತ್ತರ ತಿಳಿದಿರುವುದಿಲ್ಲ. ಹಲವು ಸಂದರ್ಭಗಳಲ್ಲಿ ಮಾಹಿತಿಯ ಕೊರತೆಯಿಂದಾಗಿ ಜನರು ಚಿಂತೆಗೀಡಾಗುತ್ತಾರೆ. ಆದರೆ ಅದಕ್ಕಾಗಿ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ. ಇಂತಹ ಸಂದರ್ಭಗಳಲ್ಲಿ ಬ್ಯಾಂಕ್ ಗ್ರಾಹಕರಿಂದ ನೋಟನ್ನು ವಿನಿಮಯ ಮಾಡಿಕೊಳ್ಳುತ್ತದೆಯೇ ಅಥವಾ ನಾವು ಬೇರೆ ಯಾವುದಾದರೂ ವಿಧಾನವನ್ನು ಅಳವಡಿಸಿಕೊಳ್ಳಬೇಕೇ? ಎಂಬಿತ್ಯಾದಿ ಮಾಹಿತಿಗಳೊಂದಿಗೆ ಅಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕೆಂದು ತಿಳಿಯಲು ಮುಂದೆ ಓದಿ...
* ಎಟಿಎಂನಲ್ಲಿ ಹರಿದ ನೋಟು ಸಿಕ್ಕರೆ ಚಿಂತೆಗೀಡಾಗದಿರಿ...
ಎಟಿಎಂನಿಂದ ಹಣವನ್ನು ವಿತ್ ಡ್ರಾ ಮಾಡಿದಾಗ ಒಂದೊಮ್ಮೆ ಹರಿದ ನೋಟುಗಳನ್ನು ಪಡೆದರೆ ಚಿಂತೆ ಮಾಡುವ ಅಗತ್ಯವಿಲ್ಲ. ಏಕೆಂದರೆ ನೀವು ಈ ನೋಟುಗಳನ್ನು ಸುಲಭವಾಗಿ ಬದಲಾಯಿಸಿ ಹೊಸ ನೋಟುಗಳನ್ನು ಪಡೆಯಬಹುದು.
* ಹರಿದ ನೋಟುಗಳನ್ನು ಬ್ಯಾಂಕಿನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು :
ಎಟಿಎಂಗಳಿಂದ ಹಣ ವಿತ್ ಡ್ರಾ ಮಾಡುವಾಗ ದೊರೆತ ಹರಿದ ನೋಟುಗಳನ್ನು ಬ್ಯಾಂಕಿನೊಂದಿಗೆ ವಿನಿಮಯ ಮಾಡಿಕೊಳ್ಳಬಹುದು. ಅಷ್ಟೇ ಅಲ್ಲ ಯಾವುದೇ ಸರ್ಕಾರಿ ಅಥವಾ ಖಾಸಗಿ ಬ್ಯಾಂಕ್ ಇದನ್ನು ನಿರಾಕರಿಸುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ನಿಯಮಗಳು ಹೇಳುತ್ತದೆ.
ಇದನ್ನೂ ಓದಿ - 'ನೈಟ್ ಟೈಮ್ ATMನಿಂದ ಹಣ ಡ್ರಾ' ಮಾಡುವವರೇ ನಿಮಗೆ ತಿಳಿದಿರಲಿ ಈ ನಿಯಮ!
* ಕೆಲವೇ ನಿಮಿಷಗಳ ಪ್ರೊಸೀಜರ್:
ಇಂತಹ ನೋಟುಗಳನ್ನು ಬ್ಯಾಂಕಿನಿಂದ ಬದಲಾಯಿಸುವುದು ಕೆಲವೇ ನಿಮಿಷಗಳ ಪ್ರೊಸೀಜರ್ ಆಗಿದೆ. ಪ್ರೊಸೀಜರ್ ಹೆಸರಿನಲ್ಲಿ ಬ್ಯಾಂಕ್ ನಿಮ್ಮನ್ನು ದೀರ್ಘಕಾಲ ಕಾಯುವಂತೆ ಮಾಡಿದರೆ ಅಥವಾ ಅಂತಹ ನೋಟುಗಳನ್ನು ಬದಲಾಯಿಸಲು ನಿರಾಕರಿಸಿದರೆ, ನೀವು ಪೊಲೀಸರಿಗೆ ದೂರು ನೀಡಬಹುದು. ಆರ್ಬಿಐ ಪ್ರಕಾರ, ಹಾಗೆ ಮಾಡುವ ಬ್ಯಾಂಕ್ಗಳಿಗೆ 10,000 ರೂ.ವರೆಗೆ ದಂಡ ವಿಧಿಸಲಾಗುವುದು.
* ಬ್ಯಾಂಕಿನಿಂದ ನೋಟುಗಳನ್ನು ವಿನಿಮಯ ಮಾಡಿಕೊಳ್ಳಲು ಅನುಸರಿಸಬೇಕಾದ ಪ್ರಕ್ರಿಯೆ:
ಮೊದಲನೆಯದಾಗಿ, ನೀವು ಯಾವ ಬ್ಯಾಂಕಿನ ಎಟಿಎಂ (ATM) ನಿಂದ ಹಣವನ್ನು ವಿತ್ ಡ್ರಾ ಮಾಡಿದ್ದೀರೋ ಅದೇ ಬ್ಯಾಂಕಿಗೆ ಹೋಗಿ. ನಂತರ ನೀವು ಅರ್ಜಿಯನ್ನು ಬರೆಯಬೇಕಾಗುತ್ತದೆ, ಇದರಲ್ಲಿ ನೀವು ಯಾವ ಎಟಿಎಂನಲ್ಲಿ ಹಣ ಪಡೆದಿದ್ದೀರಿ, ದಿನಾಂಕ, ಸಮಯ ಮತ್ತು ಸ್ಥಳವನ್ನು ನಮೂದಿಸಬೇಕಾಗುತ್ತದೆ. ಅದರ ನಂತರ, ನೀವು ಅರ್ಜಿಯೊಂದಿಗೆ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡ ನಂತರ ಹೊರಬಂದ ಆ ಸ್ಲಿಪ್ನ ನಕಲನ್ನು ಲಗತ್ತಿಸಿ ನಂತರ ಅದನ್ನು ಬ್ಯಾಂಕಿನಲ್ಲಿ ಠೇವಣಿ ಮಾಡಬೇಕಾಗುತ್ತದೆ. ನೀವು ವಹಿವಾಟಿನ ಸ್ಲಿಪ್ ಹೊಂದಿಲ್ಲದಿದ್ದರೆ ಹಣ ಹಿಂಪಡೆದಿರುವ ಸಂಬಂಧ ನಿಮ್ಮ ಮೊಬೈಲ್ನಲ್ಲಿ ಪಡೆದಿರುವ ಸಂದೇಶದ ವಿವರಗಳ ಮಾಹಿತಿಯನ್ನು ನೀಡಬೇಕಾಗುತ್ತದೆ.
ಇದನ್ನೂ ಓದಿ - ATM: ಇನ್ಮುಂದೆ 'ಕ್ಯೂಆರ್ ಕೋಡ್ ಸ್ಕ್ಯಾನ್' ಮಾಡಿ ATM ನಿಂದ ಹಣ ಪಡೆಯಬಹುದು! ಅದು ಹೇಗೆ ಇಲ್ಲಿದೆ!
* ಪರಿಶೀಲನೆಯ ನಂತರ ಹೊಸ ನೋಟು ಲಭ್ಯ :
ನೀವು ಈ ಅರ್ಜಿಗಳನ್ನು ಸಲ್ಲಿಸಿದ ತಕ್ಷಣ, ಬ್ಯಾಂಕ್ ಅಧಿಕಾರಿಗಳು ನಿಮ್ಮ ಖಾತೆಯ ವಿವರಗಳನ್ನು ಪರಿಶೀಲಿಸುತ್ತಾರೆ. ನೀವು ಒದಗಿಸಿರುವ ಎಲ್ಲಾ ಮಾಹಿತಿಗಳು ಸರಿಯಾಗಿದ್ದರೆ, ನಿಮ್ಮ ಬಳಿ ಇರುವ ಹರಿದ ನೋಟುಗಳನ್ನು ತೆಗೆದುಕೊಂಡು ಬದಲಿಗೆ ಹೊಸ ನೋಟುಗಳನ್ನು ನೀಡುತ್ತಾರೆ. ಈ ಸಂಪೂರ್ಣ ಪ್ರಕ್ರಿಯೆಯು ಕೆಲವೇ ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.