ನವದೆಹಲಿ: ಮಾರ್ಚ್ 22, 2018ರಂದು ದೇಶಾದ್ಯಂತ ತೈಲ ಬೆಲೆಗಳನ್ನು ಪರಿಷ್ಕರಿಸಲಾಗಿದ್ದು, ಪೆಟ್ರೋಲ್ ಬೆಲೆಯಲ್ಲಿ 6 ಪೈಸೆ ಹಾಗೂ ಡೀಸೆಲ್ ಬೆಲೆಯಲ್ಲಿ 8 ಪೈಸೆ ಏರಿಕೆ ಕಂಡಿದೆ. ಈ ದರಗಳು ಇಂದು ಬೆಳಿಗ್ಗೆ 6 ಗಂಟೆಯಿಂದ ಅನ್ವಯಿಸುತ್ತವೆ.
ಕ್ರಿಯಾತ್ಮಕ ಬೆಲೆ ಯೋಜನೆ ಅಡಿಯಲ್ಲಿ, ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಜಾಗತಿಕ ಕಚ್ಚಾ ತೈಲದ ಬೆಲೆಗಳೊಂದಿಗೆ ಸಮನ್ವಯದಲ್ಲಿ ಪ್ರತಿದಿನವೂ ಪರಿಷ್ಕರಿಸಲಾಗುತ್ತದೆ.
ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್-ಡೀಸೆಲ್ ಬೆಲೆಗಳು ಕೆಳಕಂಡಂತಿದೆ
ನಗರಗಳು | ಪೆಟ್ರೋಲ್(ರೂ / ಲೀಟರ್) | ಡೀಸೆಲ್ (ರೂ / ಲೀಟರ್) |
ನವದೆಹಲಿ | 72.26 | 62.88 |
ಕೋಲ್ಕತ್ತಾ | 75.00 | 65.57 |
ಮುಂಬೈ | 80.13 | 66.96 |
ಚೆನ್ನೈ | 74.94 | 66.30 |
ಬೆಂಗಳೂರು | 73.40 | 63.94 |
ಹೈದರಾಬಾದ್ | 76.52 | 68.32 |
ತಿರುವನಂತಪುರಂ | 76.15 | 68.26 |