7th pay commission: ಕೇಂದ್ರ ನೌಕರರಿಗೆ ಗುಡ್ ನ್ಯೂಸ್! ಜುಲೈ 1 ರಿಂದ ನಿಮ್ಮ ಸಂಬಳದಲ್ಲಿ ಭಾರಿ ಬದಲಾವಣೆ!

ಕರೋನಾ ಸಾಂಕ್ರಾಮಿಕ ರೋಗದ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಹಲವಾರು ನಿಯಮಗಳಲ್ಲಿ ಬದಲಾವಣೆ

Last Updated : Apr 17, 2021, 05:02 PM IST
  • ಕೇಂದ್ರ ನೌಕರರ ಡಿಎ ಶೇ. 17 ರಿಂದ ಶೇ. 28 ಕ್ಕೆ ಏರಿಕೆಯಾಗುತ್ತದೆ. ಇದರಲ್ಲಿ ಶೇ. 3 ಮತ್ತು ಶೇ.4 ಪ್ರತಿಶತದಷ್ಟು ಹೆಚ್ಚಳ
  • 7 ನೇ ವೇತನ ಆಯೋಗದ ನಿಯಮ
  • ಕರೋನಾ ಸಾಂಕ್ರಾಮಿಕ ರೋಗದ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರಿ ನೌಕರರಿಗೆ ಸರ್ಕಾರ ಹಲವಾರು ನಿಯಮಗಳಲ್ಲಿ ಬದಲಾವಣೆ
7th pay commission: ಕೇಂದ್ರ ನೌಕರರಿಗೆ ಗುಡ್ ನ್ಯೂಸ್! ಜುಲೈ 1 ರಿಂದ ನಿಮ್ಮ ಸಂಬಳದಲ್ಲಿ ಭಾರಿ ಬದಲಾವಣೆ! title=

ನವದೆಹಲಿ: ಸುಮಾರು 52 ಲಕ್ಷ ಕೇಂದ್ರ ನೌಕರರ ಡಿಎ ಯನ್ನು ಸರ್ಕಾರ ಘೋಷಿಸಿದಾಗಿನಿಂದ ಇದು ಅವರ ಸಂಬಳದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎಂಬ ಗೊದಲದಲ್ಲಿ ಕೇಂದ್ರ ಸರ್ಕಾರಿ ನೌಕರರಿದ್ದಾರೆ.

ಡಿಎ ಶೇ. 17 ರಿಂದ ಶೇ. 28 ಕ್ಕೆ ಏರಿಕೆ :

ಈ ಸೌಲಭ್ಯ ಜುಲೈ 1 ರಿಂದ(2021) ನೌಕರರಿಗೆ ಜಾರಿಯಾಗಲಿದೆ ಎಂದು ಸರ್ಕಾರ ಈಗಾಗಲೇ ಘೋಷಿಸಿದೆ. ಇದರ ನಂತರ, ಕೇಂದ್ರ ನೌಕರರ ಡಿಎ( Dearness Allowance) ಶೇ. 17 ರಿಂದ ಶೇ. 28 ಕ್ಕೆ ಏರಿಕೆಯಾಗುತ್ತದೆ. ಇದರಲ್ಲಿ ಶೇ. 3 ಮತ್ತು ಶೇ.4 ಪ್ರತಿಶತದಷ್ಟು ಹೆಚ್ಚಳ ನಿರೀಕ್ಷಿಸಲಾಗಿದೆ. ಡಿಎ ಹೆಚ್ಚಳವು 1 ಜನವರಿ 2021 ರಿಂದ ಬರಲಿದೆ.

ಇದನ್ನು ಓದಿ : "ಕುಂಭಮೇಳದಿಂದ ರಾಜ್ಯಕ್ಕೆ ಹಿಂದಿರುಗಿದವರು ಪ್ರಸಾದದಂತೆ ಕೊರೊನಾ ಹರಡುತ್ತಿದ್ದಾರೆ"

ಈ ನಿಯಮದ ಪ್ರಕಾರ:

7 ನೇ ವೇತನ ಆಯೋಗ(7th pay commission)ದ ನಿಯಮಗಳ ಪ್ರಕಾರ, ನೌಕರರ ಮೂಲ ವೇತನವನ್ನು ಫಿಟ್‌ಮೆಂಟ್ ಅಂಶದಿಂದ ಗುಣಿಸಲಾಗುತ್ತದೆ. ಈ ಫಿಟ್‌ಮೆಂಟ್ ಫ್ಯಾಕ್ಟರ್ 2.57 ಆಗಿದೆ. ಇದು ಸರ್ಕಾರಿ ನೌಕರರ ಮಾಸಿಕ ವೇತನವನ್ನು ಹೆಚ್ಚಿಸುತ್ತದೆ. ಇದು ಭತ್ಯೆಯನ್ನು ಒಳಗೊಂಡಿಲ್ಲ. ಆದ್ರೆ, ಪ್ರಯಾಣ ಭತ್ಯೆ ಅಂದರೆ ಟಿಎ ನಂತರ ವಿಸ್ತರಿಸಲಾಗುತ್ತದೆ, ಬಾಕಿ ಇರುವ ಡಿಎ ಅನ್ನು ಸಂಬಳಕ್ಕೆ ಸೇರಿಸಲಾಗುತ್ತದೆ. ಡಿಎ ಹೆಚ್ಚಳದ ನಂತರ, ಕೇಂದ್ರ ನೌಕರರ ಮಾಸಿಕ ಪಿಎಫ್ ಮತ್ತು ಗ್ರ್ಯಾಚುಟಿ ಕೊಡುಗೆ ಕೂಡ ಬದಲಾಗುತ್ತದೆ.

ಇದನ್ನು ಓದಿ : Lalu Prasad Yadav Latest News: ಮೇವು ಹಗರಣ, ಕೊನೆಗೂ ಲಾಲುಗೆ ಸಿಕ್ತು ಜಾಮೀನು

ರಾತ್ರಿ ಕರ್ತವ್ಯ ಭತ್ಯೆ:

ಕರೋನಾ ಸಾಂಕ್ರಾಮಿಕ ರೋಗದ ಹೆಚ್ಚುತ್ತಿರುವುದನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಸರ್ಕಾರಿ ನೌಕರರಿಗೆ(Central Govt Employees) ಸರ್ಕಾರ ಹಲವಾರು ನಿಯಮಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಈ ಬದಲಾವಣೆಗಳಿಂದ ಲಕ್ಷಾಂತರ ಕೇಂದ್ರ ನೌಕರರು ಲಾಭ ಪಡೆಯುವ ನಿರೀಕ್ಷೆಯಿದೆ. ಇದೀಗ ಈ ತಮ್ಮ ಡಿಎ ಪಡೆಯಲು ಕಾಯುತ್ತಿದ್ದಾರೆ, ಇಲ್ಲಿ ನಾವು ರಾತ್ರಿಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರ ಬಗ್ಗೆ ಮಾತನಾಡುತ್ತಿದ್ದೇವೆ, ಜುಲೈನಿಂದ ಡಿಎ, ಡಿಆರ್ ಪ್ರಾರಂಭವಾದಾಗ, ನಂತರ ನೈಟ್ ಡ್ಯೂಟಿ ಭತ್ಯೆ ಸಹ ಪ್ರಾರಂಭವಾಗುವ ನಿರೀಕ್ಷೆಯಿದೆ.

ಇದನ್ನು ಓದಿ : Kumbh Mela: ಕರೋನಾ ಬಿಕ್ಕಟ್ಟಿನ ಮಧ್ಯೆ ಸಂತರಿಗೆ ಪ್ರಧಾನಿ ಮೋದಿ ಮಾಡಿದ ಮನವಿ ಏನು ಗೊತ್ತಾ?

7 ನೇ ವೇತನ ಆಯೋಗದ ಶಿಫಾರಸುಗಳ ಪ್ರಕಾರ, ರಾತ್ರಿ ಕರ್ತವ್ಯ ಭತ್ಯೆಗೆ ಸಂಬಂಧಿಸಿದಂತೆ ಕಳೆದ ಹಣಕಾಸು ವರ್ಷದ ಮೊದಲಾರ್ಧದಲ್ಲಿ ಸರ್ಕಾರ ತೀರ್ಮಾನಿಸಿತ್ತು. ಈ ಬಗ್ಗೆ ವೈಯಕ್ತಿಕ ಮತ್ತು ತರಬೇತಿ ಇಲಾಖೆ (Department of Personnel & Training) ಇದಕ್ಕಾಗಿ ಮಾರ್ಗಸೂಚಿಗಳನ್ನು ಹೊರಡಿಸಿತು. ಕರೋನಾ ಅವಧಿಯಲ್ಲಿ ಸರ್ಕಾರ ಈ ನಿಯಮಗಳನ್ನು ಹೊರಡಿಸಿತ್ತು, ಆದರೂ ಸರ್ಕಾರವು ಎಲ್ಲಾ ರೀತಿಯ ಭತ್ಯೆಗಳನ್ನು ನಿಷೇಧಿಸಿದೆ, ಆದರೆ ಜುಲೈನಿಂದ ಭತ್ಯೆಗಳನ್ನು ಮತ್ತೆ ಸ್ವೀಕರಿಸಲು ಪ್ರಾರಂಭದ ನಂತ್ರ ರಾತ್ರಿ ಕರ್ತವ್ಯ ಮಾಡುವ ಕೇಂದ್ರ ನೌಕರರ ವೇತನವೂ ಹೆಚ್ಚಾಗುತ್ತದೆ.

ಇದನ್ನು ಓದಿ : West Bengal Election: ಪಶ್ಚಿಮ ಬಂಗಾಳದಲ್ಲಿ ಇಂದು 5ನೇ ಹಂತದ ಮತದಾನ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News