ನವದೆಹಲಿ: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (State Bank of India) ದೇಶಾದ್ಯಂತ ತನ್ನ ಲಕ್ಷಾಂತರ ಗ್ರಾಹಕರಿಗೆ ಶನಿವಾರ ಹೊಸ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ, ಎಲ್ಲಾ ಖಾತೆದಾರರು ತಮ್ಮ ಖಾತೆಯ ಕೆವೈಸಿಯನ್ನು ವಿಳಂಬವಿಲ್ಲದೆ ನವೀಕರಿಸಲು ಕೇಳಿಕೊಳ್ಳಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕೆವೈಸಿಯನ್ನು ನವೀಕರಿಸದವರ ಬ್ಯಾಂಕಿಂಗ್ ಸೇವೆಗಳನ್ನು ನಿಲ್ಲಿಸಲಾಗುವುದು ಎಂದು ಎಚ್ಚರಿಸಲಾಗಿದೆ.
ಮೇ 31 ರ ನಂತರ ಖಾತೆಗಳು ಸ್ಥಗಿತಗೊಳ್ಳುತ್ತವೆ:
ಈ ಮಾಹಿತಿಯನ್ನು ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್‌ನೊಂದಿಗೆ ಹಂಚಿಕೊಂಡ ಎಸ್‌ಬಿಐ (SBI), 'ಗ್ರಾಹಕರು ಯಾವುದೇ ತೊಂದರೆಯಿಲ್ಲದೆ ಬ್ಯಾಂಕಿಂಗ್ ಸೇವೆಗಳನ್ನು ಮುಂದುವರಿಸಲು 31 ಮೇ 2021 ರೊಳಗೆ ಕೆವೈಸಿಯನ್ನು ನವೀಕರಿಸಬೇಕಾಗುತ್ತದೆ. ಇದಕ್ಕಾಗಿ, ಗ್ರಾಹಕರು ತಮ್ಮ ಕೆವೈಸಿ ಡಾಕ್ಯುಮೆಂಟ್ ನವೀಕರಿಸಲು ಹೋಂ ಬ್ರಾಂಚ್ ಗೆ ಅಥವಾ ಅವರ ಹತ್ತಿರದ ಶಾಖೆಗೆ ಹೋಗಬಹುದು.
Important announcement for our customers in view of the lockdowns in place in various states. #KYCUpdation #KYC #StayStrongIndia #SBIAapkeSaath #StaySafe #StayStrong pic.twitter.com/oOGxPcZjeF
— State Bank of India (@TheOfficialSBI) May 1, 2021
ಇದನ್ನೂ ಓದಿ - Home Loan: ಕೊರೊನಾ ಮಹಾಮಾರಿಯ ಪ್ರಭಾವ, ಗೃಹ ಸಾಲ ಬಡ್ಡಿದರ ಇಳಿಕೆ ಮಾಡಿದೆ SBI
ಕರೋನಾವೈರಸ್ (Coronavirus) ಕಾರಣ, ನಾವು ಈ ಸೌಲಭ್ಯವನ್ನು ಮೇ 31 ರವರೆಗೆ ವಿಸ್ತರಿಸಿದ್ದೇವೆ. ಇದರ ನಂತರ, KYC ಅನ್ನು ನವೀಕರಿಸದ ಖಾತೆದಾರರ ಖಾತೆಗಳನ್ನು ಸ್ಥಗಿತಗೊಳಿಸಲಾಗುತ್ತದೆ ಎಂದು ಬ್ಯಾಂಕ್ ತಿಳಿಸಿದೆ.
ಇದನ್ನೂ ಓದಿ - Corona- ಅಗತ್ಯ ವಸ್ತುಗಳನ್ನು ಮಾತ್ರ ತಲುಪಿಸಲಿದೆ Amazon, ಇಲ್ಲಿದೆ ಅವುಗಳ ಪಟ್ಟಿ
ಕೆವೈಸಿ ನವೀಕರಣಗಳನ್ನು ಈ ರೀತಿ ಮನೆಯಲ್ಲಿಯೇ ಮಾಡಿ:
ಈ ಕರೋನಾ ಸಾಂಕ್ರಾಮಿಕ ರೋಗದಿಂದಾಗಿ ಬ್ಯಾಂಕಿಗೆ ಹೋಗಲು ಇಷ್ಟಪಡದವರಿಗಾಗಿ ಎಸ್‌ಬಿಐ ಪೋಸ್ಟ್ ಅಥವಾ ಇಮೇಲ್ ಆಯ್ಕೆಯನ್ನು ಸಹ ಒದಗಿಸಿದೆ. ಅಂದರೆ, ಗ್ರಾಹಕರು ಕೆವೈಸಿಗೆ ಸಂಬಂಧಿಸಿದ ದಾಖಲೆಗಳನ್ನು ಬ್ಯಾಂಕ್‌ಗೆ ಭೇಟಿ ನೀಡದೆ ಪೂರ್ಣಗೊಳಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ಕೆವೈಸಿ ನವೀಕರಿಸಿದಾಗ ಫೋನ್‌ನಲ್ಲಿ ಸಂದೇಶವನ್ನು ಕಳುಹಿಸುವ ಮೂಲಕ ಗ್ರಾಹಕರಿಗೆ ತಿಳಿಸಲಾಗುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.