Health Tips: ಶರೀರದಲ್ಲಿ Oxygen ಮಟ್ಟವನ್ನು ಹೆಚ್ಚಿಸಲು ಬಹಿರಂಗವಾಗಿ ನಕ್ಕು ನಲಿಯಿರಿ, ಇಲ್ಲಿವೆ Laughing Therapy ಲಾಭಗಳು

Benefits Of Laughing Therapy - ಒಂದು ವೇಳೆ ನೀವೂ ಕೂಡ ಬಹಿರಂಗವಾಗಿ ನಗುತ್ತಿದ್ದರೆ, ಅದು ನಿಮ್ಮ ಆರೋಗ್ಯವನ್ನು ಸುಧಾರಿಸುವುದಲ್ಲದೆ, ದೇಹದಲ್ಲಿನ ಆಮ್ಲಜನಕದ ಮಟ್ಟವನ್ನು ಹೆಚ್ಚಿಸುತ್ತದೆ. ಸಂತೋಷವಾಗಿರುವುದರಿಂದ, ನೀವು ಕರೋನಾದಂತಹ ಕಾಯಿಲೆಯಿಂದ ದೂರವಿರಬಹುದು. ನಗುವ ಮೂಲಕ ನಿಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.

Written by - Nitin Tabib | Last Updated : May 3, 2021, 10:57 PM IST
  • ಬಹಿರಂಗವಾಗಿ ನಗುವುದು ಆರೋಗ್ಯಕ್ಕೆ ಒಳ್ಳೆಯದು.
  • ಇದು ದೇಹದಲ್ಲಿ ಆಕ್ಸಿಜನ್ ಮಟ್ಟವನ್ನು ಹೆಚ್ಚಿಸುತ್ತದೆ.
  • ಇದಲ್ಲದೆ ಹಲವು ಆರೋಗ್ಯಕರ ಲಾಭವನ್ನು ಇದು ಹೊಂದಿದೆ.
Health Tips: ಶರೀರದಲ್ಲಿ Oxygen ಮಟ್ಟವನ್ನು ಹೆಚ್ಚಿಸಲು ಬಹಿರಂಗವಾಗಿ ನಕ್ಕು ನಲಿಯಿರಿ, ಇಲ್ಲಿವೆ Laughing Therapy ಲಾಭಗಳು title=
Benefits Of Laughing Therapy (File Photo)

ನವದೆಹಲಿ: Benefits Of Laughing Therapy - ಕರೋನಾ ಸೋಂಕಿತ ಜನರಲ್ಲಿ ಭಾರಿ ಪ್ರಮಾಣದಲ್ಲಿ ಆಮ್ಲಜನಕದ ಕೊರತೆ ಎದುರಾಗುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ ಜನರು ಸಂಕಷ್ಟ ಎದುರಿಸುತ್ತಿದ್ದಾರೆ. ಜನರಲ್ಲಿ ಉದ್ವೇಗ ಮತ್ತು ಭಯ ಗಮನಾರ್ಹವಾಗಿ ಹೆಚ್ಚಾಗುತ್ತಿದೆ. ಈ ಭಯ ಮತ್ತು ಒತ್ತಡದಿಂದಾಗಿ, ಜನರ ರೋಗನಿರೋಧಕ ಶಕ್ತಿ ಕೂಡ ದುರ್ಬಲಗೊಳ್ಳುತ್ತಿದೆ. ಇಂತಹ ಪರಿಸ್ಥಿತಿಯಲ್ಲಿ, ನೀವೂ ಕೂಡ ಒಂದು ವೇಳೆ ಕರೋನಾವನ್ನು ಸೋಲಿಸಲು ಬಯಸುತ್ತಿದ್ದರೆ, ಇದಕ್ಕಾಗಿ ನೀವು ನಿಮ್ಮ ಮನದಲ್ಲಿರುವ ಭಯವನ್ನು ನಿವಾರಿಸಿ  ನಗಬೇಕು ಮತ್ತು ನಕ್ಕು ನಲಿಯಬೇಕು. ಹೌದು, ನಗು ನಮ್ಮ ಜೀವನವನ್ನು (Lifestyle) ಹ್ಯಾಪಿ ಮಾಡುವುದರ ಜೊತೆಗೆ ಆರೋಗ್ಯವನ್ನು ಸುಧಾರಿಸಲಿದೆ.

ನಗುವುದರಿಂದ ದೇಹದಲ್ಲಿ ಆಕ್ಸಿಜನ್ ಮಟ್ಟ ಹೆಚ್ಚಾಗುತ್ತದೆ. ಅಷ್ಟೇ ಅಲ್ಲ ಖುಷಿಯಾಗಿದ್ದು, ನಕ್ಕು ನಲಿದು ಕೊರೊನಾದಂತಹ ಮಾರಕ ಕಾಯಿಲೆಯನ್ನು ಕೂಡ ಸೋಲಿಸಬಹುದು. ನಗುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ನಿಮ್ಮ ಮೇಲಿನ ಒತ್ತಡ ಕೂಡ ಕಡಿಮೆಯಾಗುತ್ತದೆ. ನಿಮ್ಮಲ್ಲಿರುವ ಉದ್ವೇಗದ ಸ್ಥಿತಿಯನ್ನು ಕಡಿಮೆ ಮಾಡಲು ನೀವು ನಗುವುದು ಆವಶ್ಯಕವಾಗಿದೆ. ನಡುವುದರಿಂದ ದೇಹದಲ್ಲಿ ಆಕ್ಸಿಜನ್ ಪ್ರಮಾಣ ಹೆಚ್ಚಾಗುತ್ತದೆ. ಇದಲ್ಲದೆ ನಗುವುದರಿಂಗಾಗುವ ಇತರ ಲಾಭಗಳ ಕುರಿತು ತಿಳಿದುಕೊಳ್ಳೋಣ ಬನ್ನಿ.

ನಗುವಿನ ಲಾಭಗಳು (Benefits Of Laughing Therapy)
>>ದೇಹದ ಆಕ್ಸಿಜನ್ ಲೆವಲ್ ಹೆಚ್ಚಾಗುತ್ತದೆ: ನಗುವಿನ ಸಮಯದಲ್ಲಿ ನಮ್ಮ ಶರೀರ ದೀರ್ಘ ಶ್ವಾಸ ತೆಗೆದುಕೊಂಡು ಹೊರಹಾಕುವ ಎಕ್ಸರ್ ಸೈಜ್ ಮಾಡುತ್ತದೆ ಎಂದು ಹಲವು ಸಂಶೋಧನೆಗಳು ಹೇಳಿವೆ. ಇದರಿಂದ ದೇಹದಲ್ಲಿ ಸರಿಯಾದ ಮಟ್ಟದಲ್ಲಿ ಆಕ್ಸಿಜನ್ ಸಂಚರಿಸುತ್ತದೆ. ನಗುವುದರಿಂದ ನಮ್ಮ ಶರೀರದಲ್ಲಿ ಆಕ್ಸಿಜನ್ ಮಟ್ಟ ಸರಿಯಾಗಿರುತ್ತದೆ ಹಾಗೂ ಇಡೀ ದಿನ ಎನರ್ಜೆಟಿಕ್ ಆಗಿರುವ ಭಾವನೆ ಮೂಡುತ್ತದೆ.

>>ರಕ್ತದೊತ್ತಡ ನಾರ್ಮಲ್ ಆಗಿರುತ್ತದೆ: ನಮ್ಮ ದೇಹದಲ್ಲಿನ ರಕ್ತ ಸಂಚಾರ ನಗುವಿನ ಜೊತೆಗೆ ನೇರ ಸಂಬಂಧ ಹೊಂದಿದೆ. ಜನರು ಬಹಿರಂಗವಾಗಿ ನಗುವ ಜನರಲ್ಲಿ ಇತರರ ಹೋಲಿಕೆಯಲ್ಲಿ ರಕ್ತದೊತ್ತಡ ತುಂಬಾ ಚೆನ್ನಾಗಿರುತ್ತದೆ ಎಂದು ಹಲವು ಸಂಶೋಧನೆಗಳು ಬಹಿರಂಗ ಪಡಿಸಿವೆ. ಹೀಗಾಗಿ ನಾವು ಬಹಿರಂಗವಾಗಿ ನಗಬೇಕು.

>>ಇಮ್ಯೂನಿಟಿ ಹೆಚ್ಚಾಗುತ್ತದೆ: ಕೊರೋನಾದ ಈ ಕಾಲದಲ್ಲಿ ಜನರು ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಿನಲು ಏನೆಲ್ಲಾ ಮಾಡುತ್ತಿಲ್ಲ. ಆದರೆ, ಬಹಿರಂಗವಾಗಿ ನಗುವುದರಿಂದಲೂ ಕೂಡ ದೇಹದ ರೋಗ ಪ್ರತಿರೋಧಕ ಶಕ್ತಿ ಹೆಚ್ಚಾಗುತ್ತದೆ ಎಂದರೆ ನೀವೂ ಆಶ್ಚರ್ಯಪಡುವಿರಿ. ಇದರಿಂದ ಶರೀರಕ್ಕೆ ರೋಗದ ವಿರುದ್ಧ ಹೋರಾಡುವ ಬಲ ಸಿಗುತ್ತದೆ. ನಗುವುದರಿಂದ ಶರೀರದಲ್ಲಿ ಆಂಟಿ ವೈರಲ್ ಹಾಗೂ ಸೋಂಕನ್ನು ತಡೆಯುವ ಕೋಶಗಳು ಹೆಚ್ಚಾಗುತ್ತವೆ.

>>ನೋವಿನಿಂದ ಆರಾಮ ಸಿಗುತ್ತದೆ : ನಗು (Laugh) ಹಲವು ರೀತಿಯ ನೋವುಗಳಿಂದ ಪರಿಹಾರ ಸಿಗುತ್ತದೆ.  ಉದಾಹರಣೆಗೆ, ಸ್ಪಾಂಡಿಲೈಟಿಸ್ ಅಥವಾ ಬೆನ್ನು ನೋವು ನಿವಾರಣೆಗೂ ಕೂಡ ಇದು  ಸಹಾಯ ಮಾಡುತ್ತದೆ. ಲಾಫಿಂಗ್ ಥೆರಪಿ (Laughing Therapy)  ನೋವಿನಿಂದಲೂ ಕೂಡ ಪರಿಹಾರ ನೀಡುತ್ತದೆ. ಇದು ಮಾತ್ರವಲ್ಲ, ನೀವು 10 ನಿಮಿಷಗಳ ಕಾಲ ನಗುತ್ತಿದ್ದರೆ, ನೀವು ನೋವಿನಿಂದ ಪರಿಹಾರ ಪಡೆಯಬಹುದು ಅಥವಾ ಸುಲಭವಾಗಿ ನಿದ್ರೆಗೆ ಜಾರಬಹುದು.

ಇದನ್ನೂ ಓದಿ-

>>ನಿಮ್ಮ ಯೋಚನೆ ಸಕಾರಾತ್ಮಕವಾಗುತ್ತದೆ: ನಗುವುದರಿಂದ ಶರೀರದಲ್ಲಿ ಇಂಡೋರ್ಫಿನ್ ಹಾರ್ಮೋನ್ ಸ್ರವಿಕೆಯಾಗುತ್ತದೆ. ಇದರಿಂದ ಸಂಪೂರ್ಣ ಶರೀರಕ್ಕೆ ಖುಷಿ, ಸಕಾರಾತ್ಮಕ ಹಾಗೂ ಉತ್ತಮ ಅನುಭೂತಿಯಾಗುತ್ತದೆ. ಈ ಹಾರ್ಮೋನು ನಿಮ್ಮ ಮೂಡ್ ಅನ್ನು ಫ್ರೆಶ್ ಆಗಿ ಇಡುತ್ತದೆ. 

ಇದನ್ನೂ ಓದಿ - 

>>ಒತ್ತಡ ಕಡಿಮೆ ಮಾಡುತ್ತದೆ: ಲಾಫಿಂಗ್ ಥೆರಪಿಯಿಂದ ಮಾನಸಿಕ ಹಾಗೂ ಶಾರೀರಿಕ ಸಮಸ್ಯೆಗಳಿಂದಲೂ ಕೂಡ ಪರಿಹಾರ ಸಿಗುತ್ತದೆ. ಹೀಗಾಗಿ ನಗುವುದು ತುಂಬಾ ಅವಶ್ಯಕವಾಗಿದೆ. ಇದರಿಂದ ಡಿಪ್ರೆಶನ್ ದೂರಾಗುತ್ತದೆ. ಬಹಿರಂಗವಾಗಿ ನಗುವುದರಿಂದ ಸ್ಟ್ರೆಸ್ ಕಡಿಮೆಯಾಗುತ್ತದೆ. ಇದರಿಂದ ನೀವು ಒತ್ತಡ ಮುಕ್ತರಾಗುವಿರಿ. 

ಇದನ್ನೂ ಓದಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News