ನವದೆಹಲಿ : ಇದು ವಿಚಿತ್ರ ಆದರೂ ಸತ್ಯ. ವರದಕ್ಷಿಣೆ (Dowry) , ಚಿನ್ನ, ರೂಪ, ಪ್ರತಿಷ್ಠೆಗೆ ಬಿದ್ದು ಮದುವೆ ಮುರಿದು ಬೀಳುವುದನ್ನು ನಾವು ನೋಡಿದ್ದೇವೆ. ಇಲ್ಲೊಂದು ಮದುವೆ ತಾಳಿ ಕಟ್ಟುವ ವೇಳೆಗೆ ಮರಿದು ಬಿದ್ದಿದೆ. ಕಾರಣ ಕೂಡಾ ತುಂಬಾ ವಿಚಿತ್ರ. ಇದೊಂದು ತುಂಬಾ ವಿಚಿತ್ರವಾದರೂ ಸತ್ಯ ಘಟನೆ.
ತಾಳಿ ಕಟ್ಟುವ ವೇಳೆ ಮದುವೆ ಮುರಿದ ಎರಡರ ಮಗ್ಗಿ :
ಈ ಘಟನೆ ನಡೆದಿದ್ದು ಉತ್ತರ ಪ್ರದೇಶ (UP) ಮಹೋಬಾದಲ್ಲಿ. ಶನಿವಾರ ಸಂಜೆ ವರನ ಕಡೆಯವರು ದಿಬ್ಬಣದ ಜೊತೆಗೆ ಕಲ್ಯಾಣ ಮಂಟಪಕ್ಕೆ ಆಗಮಿಸಿದ್ದರು. ವಧುವಿಗೆ ತನ್ನ ಭಾವೀ ಪತಿಯ ಶೈಕ್ಷಣಿಕ ಅರ್ಹತೆಯ ಬಗ್ಗೆ ಮೊದಲೇ ಸ್ವಲ್ಪ ಸಂದೇಹ ಇತ್ತು. ಇನ್ನೇನು ಮಾಲೆ ಹಾಕಿಕೊಂಡು, ತಾಳಿ ಕಟ್ಟಿ, ಸಪ್ತ ಪದಿ ತುಳಿಯಬೇಕೆನ್ನುವಷ್ಟರಲ್ಲಿ ವಧುವಿಗೆ ಏನೋ ಸಂದೇಹ ಬಲವಾಗಿ ಬಿಟ್ಟಿದೆ. ಜಯಮಾಲೆ ವಿನಿಮಯ ಮಾಡಿಕೊಳ್ಳುವ ಹೊತ್ತಿಗೆ 2ರ ಮಗ್ಗಿ ಹೇಳುವಂತೆ ವರನಿಗೆ ತಾಕೀತು ಮಾಡಿದ್ದಾಳೆ ವಧು. ಅಚಾನಕ್ ಆಗಿ ತೂರಿ ಬಂದ ಈ ಪ್ರಶ್ನೆ ಕೇಳಿ ವರ ತಬ್ಬಿಬ್ಬು. ಎರಡರ ಮಗ್ಗಿ ಹೇಳಿದರೇ ಮಾತ್ರ ಮದುವೆ (Marriage) ಮುಂದುವರಿಯುತ್ತದೆ ಎಂದು ವಧು (Bride) ಗಟ್ಟಿಯಾಗಿ ಹೇಳಿದ ಮೇಲಂತೂ ವರ ಕಂಗಾಲು. ಏನೇನು ತಲೆ ಕೆಳಗೆ ಮಾಡಿದರೂ ವರ ಮಹಾಶಯನಿಗೆ ಎರಡರ ಮಗ್ಗಿ ಬರಲೇ ಇಲ್ಲ. ಇದೇ ಕಾರಣಕ್ಕೆ ತಾಳಿ ಕಟ್ಟಲು ನಿರಾಕರಿಸಿಬಿಟ್ಟಳು ವಧು. ಮಗ್ಗಿಯ ಕಾರಣಕ್ಕೆ ಮುರಿದು ಬಿತ್ತು ಮದುವೆ.
ಇದನ್ನೂ ಓದಿ : Coronavirus Third Wave: ಮಕ್ಕಳ ಪಾಲಿಗೆ ಅಪಾಯಕಾರಿ ಸಾಬೀತಾಗಲಿದೆ, ಈ ರಾಜ್ಯದಿಂದ ಆರಂಭ!
ಠಾಣೆಗೆ ಬಂತು ಪ್ರಕರಣ :
ಈ ಮಗ್ಗಿ ಪ್ರಕರಣ ಪನ್ವರಿ ಪೊಲೀಸ್ ಠಾಣೆ (Police station) ತನಕವೂ ಬಂತು. ಅಲ್ಲಿನ ಅಧಿಕಾರಿ ವಿನೋದ್ ಕುಮಾರ್ ಪ್ರಕಾರ ಇದೊಂದು ಅರೆಂಜ್ಡ್ ಮದುವೆ ಆಗಿತ್ತು. ವರ ಮಹಾಶಯ ಮಹೋಬಾದ ಧವಾರ್ ಗ್ರಾಮದವನು. ಎರಡೂ ಕಡೆಯವರು ಮದುವೆಗೆ ಬಂದಿದ್ದರು. ಆದರೆ ಎರಡರ ಮಗ್ಗಿ ಹೇಳಲು ವರಮಹಾಶಯ ವಿಫಲವಾದ ಮೇಲೆ ವಧು ಮದುವೆ ಮಂಟಪದಿಂದ ಹೊರಗೆ ಬಂದು ಬಿಟ್ಟಳು. ಗಣಿತದ ಒಂದಕ್ಷರವೂ ಗೊತ್ತಿಲ್ಲದ ವ್ಯಕ್ತಿಯೊಂದಿಗೆ ಮದುವೆ ಮುಂದುವರಿಸಲು ನಿರಾಕರಿಸಿಬಿಟ್ಟಳು. ಅಲ್ಲಿದ್ದ ಸಂಬಂಧಿಕರು ಆಕೆಯ ಮನವೊಲಿಸುವ ಪ್ರಯತ್ನ ಪಟ್ಟರಾದರೂ ಅವೆಲ್ಲಾ ವಿಫಲವಾಯಿತು ಎಂದು ಹೇಳಿದರು.
ಮದುವೆ ಗಂಡು ಅವಿದ್ಯಾವಂತನಾಗಿದ್ದ (uneducated) . ಹುಡುಗನ ವಿದ್ಯಾಭ್ಯಾಸದ ವಿಚಾರವನ್ನು ವರನ ಕಡೆಯವರು ಮುಚ್ಚಿಟ್ಟು, ನಮಗೆ ಮೋಸ ಮಾಡಿದ್ದರು. ಆದರೆ ನಮ್ಮ ಹುಡುಗಿ ಭಲೇ ಧೈರ್ಯವಂತೆ. ಯಾರಿಗೂ ಹೆದರದೇ ಮದುವೆ ಮರಿದೇ ಬಿಟ್ಟಳು ಎಂದು ಹೇಳುತ್ತಾರೆ ಹುಡುಗಿಯ ಕಡೆಯವರು. ನಂತರ ಗ್ರಾಮದ ಹಿರಿಯರ ಸಮ್ಮುಖದಲ್ಲೊಂದು ನ್ಯಾಯ ಪಂಚಾಯಿತಿ ನಡೆಯಿತು. ವರ ಮತ್ತು ವಧುವಿನ ಕಡೆಯವರು ತಮ್ಮ ತಮ್ಮ ಆಭರಣ ಮತ್ತು ಗಿಫ್ಟ್ (Gift) ಹಿಂದಿರುಗಿಸಬೇಕು ಎಂಬುದು ತೀರ್ಮಾನವಾಯಿತು. ಇದು ಎಲ್ಲರಿಗೂ ಒಪ್ಪಿತವಾಯಿತು. ಹಾಗಾಗಿ, ಪೊಲೀಸರು ಕೇಸ್ ದಾಖಲಿಸಲಿಲ್ಲ.
ಇದನ್ನೂ ಓದಿ : ಚುನಾವಣೋತ್ತರ ಹಿಂಸೆಗೆ ತತ್ತರಿಸಿದ ಪ.ಬಂಗಾಳ. ರಾಜ್ಯಪಾಲರೊಂದಿಗೆ ಪ್ರಧಾನಿ ಮಾತುಕತೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.